ಮದ್ರಸದಲ್ಲಿ ವಿಜ್ಞಾನ ,ಹಿಂದಿ,ಗಣಿತ, ಸಮಾಜ ,ಮರಾಠಿ ,ಇಂಗ್ಲಿಷ್, ಉರ್ದು ಕಲಿಸಿದರೆ ಹಣಕಾಸು ನೆರವು: ಮಹಾರಾಷ್ಟ್ರ ಸರಕಾರದ ಕೊಡುಗೆಗೆ ನೀರಸ ಪ್ರತಿಕ್ರಿಯೆ

0
1454
ನ್ಯೂಸ್ ಡೆಸ್ಕ್
ಧಾರ್ಮಿಕ ಅಧ್ಯಯನದೊಂದಿಗೆ ವಿಜ್ಞಾನ ಮತ್ತು  ಗಣಿತದಂತಹ ವಿಷಯಗಳಲ್ಲಿ ಔಪಚಾರಿಕ ಶಿಕ್ಷಣವನ್ನು ಪರಿಚಯಿಸುವ ಮದ್ರಸಗಳಿಗೆ ಶಿಕ್ಷಕರ ವೇತನ ಹಾಗೂ ಮೂಲಭೂತ ಸೌಕರ್ಯಗಳಿಗೆ ಹಣವನ್ನು ನೀಡುವುದಾಗಿ ಮಹಾರಾಷ್ಟ್ರ ಸರಕಾರವು ತಿಳಿಸಿದೆ .

ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಅಂದಾಜು 1,889 ಮದ್ರಸಗಳ ಪೈಕಿ 144 ಮದ್ರಸಗಳು  (7.6%) ಈ ಯೋಜನೆಯ ಲಾಭ ಗಳಿಸಿದ್ದಾರೆ ಈ ಸಂಸ್ಥೆಗಳಿಗೆ ಒಟ್ಟು 5.36 ಕೋಟಿ ಅನುದಾನ ನೀಡಲಾಗಿದೆ . ಈ ಯೋಜನೆಯ ಪ್ರಕಾರ ,ವಿದ್ಯಾರ್ಥಿ ನಿಲಯದ ಸೌಲಭ್ಯವಿರುವ ಜೊತೆಗೆ ಧಾರ್ಮಿಕ ಅಧ್ಯಯನದೊಂದಿಗೆ ವಿಜ್ಞಾನ ,ಹಿಂದಿ,ಗಣಿತ, ಸಮಾಜ ,ಮರಾಠಿ ,ಇಂಗ್ಲಿಷ್, ಉರ್ದು ವಿಷಯಗಳನ್ನೂ ಬೋಧಿಸಬೇಕು .ಇಂತಹ ಸಂಸ್ಥೆಗಳಿಗೆ ಅನುದಾನಗಳನ್ನು ನೀಡಲಾಗುತ್ತದೆ . ಆಸಕ್ತಿ ಹೊಂದಿರುವ ಸಂಸ್ಥೆಗಳು ಪ್ರತಿವರ್ಷ ಅನುದಾನಕ್ಕಾಗಿ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಮದ್ರಸಗಳಿಗೆ ಶಿಕ್ಷಕರ ವೇತನ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ಗಳಿಗೆ ಹಣವನ್ನು ಪಡೆದುಕೊಳ್ಳುತ್ತಾರೆ. ಸರಕಾರದಿಂದ ಅನುದಾನ ಪಡೆಯುವುದರಿಂದ ಈ ಸಂಸ್ಥೆಗಳು ಸರಕಾರದ ಅಧೀನದಲ್ಲಿರುವುದರಿಂದ ಫಲಿತಾ೦ಶ  ಕಳಪೆಯಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಅವರು ಹೇಳುತ್ತಾರೆ, “ರಾಜ್ಯ ಸರಕಾರದ ಸಹಾಯ ಪಡೆಯುವುದೆಂದರೆ ಸಂಪೂರ್ಣ ಅದರ ಅಧೀನಕ್ಕೆ ಒಳಪಟ್ಟಂತೆ .ಮುಂದಿನ ದಿನಗಳಲ್ಲಿ ಅವರು ಹೇಳಿದಂತೆ ಕೇಳಬೇಕಾಗಬಹುದು. “ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ಯಾಮ್ ತಗಾದೆ ಅವರ ಪ್ರಕಾರ ಮದ್ರಸಗಳು ಅನುದಾನ ಪಡೆಯಲು ಇಷ್ಟವಿದ್ದರೂ ರಾಜ್ಯ ಸರಕಾರದ ತೀವ್ರ ಪರಿಶೀಲನೆಯಿಂದಾಗಿ ಹಿಂಜರಿಯುತ್ತಿವೆ.” ನಾನು ಅಧಿಕಾರ ವಹಿಸಿಕೊಂಡಾಗ ಈ ಯೋಜನೆಯಲ್ಲಿ ಬಹಳಷ್ಟು ಅಕ್ರಮಗಳನ್ನು ಕಂಡುಕೊಂಡೆ . ಜಿಲ್ಲಾಧಿಕಾರಿ ಕಚೇರಿ ಮುಖಾಂತರ ವಿಚಾರಣೆ ನಡೆಸಲಾಯಿತು .ಮತ್ತು ಅನೇಕ ವಿಳಾಸಗಳು ಅಸ್ತಿತ್ವದಲ್ಲಿಲ್ಲ ಹಾಗೂ ಅನೇಕ ಮದ್ರಸಗಳಿಗೆ ಬೀಗ ಹಾಕಲಾಗಿತ್ತು. ಮತ್ತೆ ಕೆಲವರು ಹಣವನ್ನು ಸರಿಯಾಗಿ ಬಳಸಿರಲಿಲ್ಲ . ಇಂತಹ ಸನ್ನಿವೇಶದಲ್ಲಿ ಹಣವನ್ನು ಮರಳಿ ಪಡೆಯಲಾಗುವುದು ಮತ್ತು ಕ್ರಿಮಿನಲ್ ಕ್ರಿಯೆಯನ್ನು ಪ್ರಾರಂಭಿಸಲಾಗುವುದು” ಎಂದು ಅವರು ಹೇಳಿದರು. ಅದರ ನಂತರ ಸರ್ಕಾರವು ಅರ್ಜಿ ಸಲ್ಲಿಸಿದ ಮದ್ರಸಗಳ ಕ್ಷೇತ್ರ ಹಾಗೂ ದಾಖಲೆಗಳ ತೀವ್ರ ಪರಿಶೀಲನೆ ನಡೆಸುತ್ತದೆ . ಇದರಿಂದಾಗಿ ಫಲಾನುಭವಿಗಳ ಸಂಖ್ಯೆ ಕ್ಷೀಣಿಸುತ್ತಿದೆ .
ಈ ಯೋಜನೆಯು ಹಿಂದಿನ ಕಾಂಗ್ರೆಸ್ -ರಾಷ್ಟ್ರೀಯತಾವಾದಿ ಕಾಗ್ರೆಸ್ಸ್ ಪಕ್ಷದ ಸರಕಾರದಿಂದ ಪರಿಚಯಿಸಲ್ಪಟ್ಟಿತ್ತು . 2014-15ರ ಮೊದಲ ವರ್ಷದಲ್ಲಿ ಯೋಜನೆಯು 536 ಮದ್ರಸಗಳಿಗೆ ಲಾಭದಾಯಕವಾಗಿದ್ದು ಸರಕಾರ ಒಟ್ಟಿಗೆ 18.09 ಕೋಟಿ ರೂ. ವಿನಿಯೋಗಿಸಿತ್ತು . 2015-16ರಲ್ಲಿ 188 ಮದ್ರಸಗಳು ಅನುದಾನ ಪಡೆದುಕೊಂಡರೆ 2016-17ರಲ್ಲಿ ಅದು 175ಕ್ಕೆ ಇಳಿದಿದೆ. 2018-19ರಲ್ಲಿ ರಾಜ್ಯ ಅಲ್ಪಸಂಖ್ಯಾತ ಇಲಾಖೆಯು ಕನಿಷ್ಠ 200 ಫಲಾನುಭವಿಗಳ ಗುರಿಯನ್ನು ಹೊಂದಿದ್ದು 8 ಕೋಟಿ ರೂ. ಗಳನ್ನು ವಿನಿಯೋಗಿಸಿದೆ.