ಮುಸ್ಲಿಮರನ್ನು ಕಣಕ್ಕಿಳಿಸಿ ಮತ ವಿಭಜಿಸುವ ತಂತ್ರದಲ್ಲಿ ಬಿಜೆಪಿ

2
1455

@ ಸಲೀಮ್ ಬೋಳಂಗಡಿ
ಕರ್ನಾಟಕದ ಚುನಾವಣಾ ಅಖಾಡದ ಕದನಕ್ಕೆ ದಿನಾಂಕ ಈ ತನಕ ನಿಗದಿಯಾಗದಿದ್ದರೂ ಪ್ರಚಾರದ ಭರಾಟೆಯಲ್ಲಿ ಪಕ್ಷಗಳು ತಮ್ಮನ್ನು ತೊಡಗಿಸಿಕೊಂಡಿವೆ. ರಾಜ್ಯದಲ್ಲಿ ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ಅವಾಂತರಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ಕಾಂಗ್ರೆಸ್ ತನ್ನ ಜನಪ್ರಿಯ ಯೋಜನೆಗಳಿಂದ ಜನರ ಮನ ಸೆಳೆಯಲು ಶ್ರಮಿಸಿದ್ದರೆ ಬಿಜೆಪಿ ಮಾತ್ರ ಧ್ರುವೀಕರಣದ ಮುಖಾಂತರ ಮತ ಬಾಚಿಕೊಳ್ಳಲು ಪ್ರಯತ್ನಿಸುತ್ತಿದೆ. ಅದಕ್ಕೆ ಪೂರಕವಾದ ಪ್ರಯೋಗಗಳನ್ನು ಅದು ನಡೆಸುತ್ತಾ ಬಂದಿದೆ. ಬಿಜೆಪಿಯ ಉಗ್ರ ಹಿಂದುತ್ವದ ಎದುರು ಕಾಂಗ್ರೆಸ್ ಮೃದು ಹಿಂದುತ್ವದ ನೀತಿಯನ್ನು ಅನುಸರಿಸಿ ಮುಂದು ವರಿಯುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಗುಜರಾತ್‍ನಲ್ಲಿ ಬಳಸಿದ ಅದೇ ತಂತ್ರವನ್ನು ಕಾಂಗ್ರೆಸ್ ಬಳಸುತ್ತಿದೆ. ಜಾತ್ಯತೀತವಾದಿಗಳು, ಸಾಮಾಜಿಕ ಹೋರಾಟಗಾರರ ಮುಖಾಂತರ ಬಿಜೆಪಿಗೆ ಅದು ಸಡ್ಡು ಹೊಡೆಯುತ್ತಿದೆ. ಚಿತ್ರನಟ ಪ್ರಕಾಶ್ ರೈ, ಚೇತನ್ ಮುಂತಾದ ಜನ ಪ್ರಿಯ ನಟರ ಹೇಳಿಕೆಗಳು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಸಿದ್ದರಾಮಯ್ಯರ ನಡುವಿನ ವಾಕ್ಸಮರವು ಮಾಧ್ಯಮಗಳಲ್ಲಿ
ಪ್ರಕಟವಾದವು. ತಾನು ಯಥಾರ್ಥ ಹಿಂದೂವಾಗಿದ್ದೇನೆಂದೂ ನನ್ನ ಹೆಸರಿ ನಲ್ಲಿ ‘ರಾಮ’ ಇರುವುದಾಗಿಯೂ ಹೇಳಿದರು. ಕಾಂಗ್ರೆಸ್ ಸರಕಾರ ಹಿಂದುತ್ವ ವಿರೋಧಿ ಸರಕಾರ ಎಂದು ಬಿಜೆಪಿ ವ್ಯವಸ್ಥಿತ ಪ್ರಚಾರದಲ್ಲಿ ತೊಡಗಿದೆ. ನಿಜವಾದ ಹಿಂದೂಗಳು ಯಾರು ಎಂಬ ಪ್ರಬ ಲವಾದ ಅಸ್ತ್ರವನ್ನೇ ಸಿದ್ದರಾಮಯ್ಯ ಎಸೆದು ಬಿಟ್ಟರು. “ಹಿಂದುತ್ವ ಎಂಬುದು ಬಿಜೆಪಿ ಹೇಳುವಂತಹ ಸಂಹಾರಾತ್ಮಕವಾದುದಲ್ಲ. ನಿಜವಾದ ಹಿಂದುತ್ವ ದಲ್ಲಿ ಮಾನವೀಯತೆ ಅಡಗಿದೆ. ಎಲ್ಲ ಧರ್ಮದವರೊಂದಿಗೆ ಬೆರೆತು ಒಂದಾಗಿ ಸಹಬಾಳ್ವೆಯಿಂದ ಜೀವಿಸುವುದನ್ನು ಬಯಸುವವನಾಗಿದ್ದೇನೆ ನಿಜವಾದ ಹಿಂದು. ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆಯ ಹಿಂದುತ್ವದ ಬದಲು ಸ್ವಾಮೀ ವಿವೇಕಾನಂದರು ಪ್ರತಿಪಾದಿಸಿದ ಹಿಂದುತ್ವದ ಹಾದಿಯನ್ನು ಅನುಸರಿಸಿರಿ” ಎಂದು ಯೋಗಿ ಆದಿತ್ಯನಾಥ್‍ಗೆ ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದರು.
“ಗೋವಿನ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ. ನೀವು ಎಂದಾದರೂ ಗೋವನ್ನು ಸಾಕಿದ್ದೀರಾ? ನಾನು ಗೋವನ್ನು ಸಾಕಿ ಹುಲ್ಲನ್ನು ಹಾಕಿ ಅದರ ಸೆಗಣಿಯನ್ನು ತೆಗೆದಿದ್ದೇನೆ. ಗೋವಿನ ಬಗ್ಗೆ ಮಾತಾ ಡಲು ನಿಮಗೆ ಯಾವ ಅರ್ಹತೆಯಿದೆ” ಎಂದು ಆದಿತ್ಯನಾಥ್‍ಗೆ ಸಿದ್ದರಾಮಯ್ಯ ಚಾಟಿ ಏಟು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದೆಂದು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿಗೆ ಸಿದ್ದರಾಮಯ್ಯನವರು ಹೆಬ್ಬಂಡೆ ಯಂತೆ ಗೋಚರಿಸುತ್ತಿದ್ದಾರೆ. ಅದಕ್ಕಾ ಗಿಯೇ ಜನರ ಮನಸ್ಸುಗಳನ್ನು ಪ್ರಚೋದಿ ಸುವ ಪ್ರಕ್ರಿಯೆಯಲ್ಲಿ ಬಿಜೆಪಿ ತೊಡಗಿಸಿ ಕೊಂಡಿದೆ. ಪರಿವರ್ತನಾ ಯಾತ್ರೆಯಲ್ಲಿನ ನೀರಸ ಪ್ರತಿಕ್ರಿಯೆಯ ಅನುಭವ ಬಿಜೆಪಿಗೆ ಇರಿಸು ಮುರಿಸುಂಟು ಮಾಡಿದೆ.
ಉತ್ತರ ಪ್ರದೇಶದಲ್ಲಿ ಬಳಸಿದ ತಂತ್ರವನ್ನು ಬಿಜೆಪಿ ಪ್ರಯೋಗಿಸಿದರೂ ಆಶ್ಚರ್ಯವಿಲ್ಲ. ಮುಸ್ಲಿಮ್ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿ ಮುಸ್ಲಿಮರ ಮತ ವಿಭಜಿಸುವ ತಂತ್ರವನ್ನು ಅದು ಹೆಣೆಯು ತ್ತಿದೆ. ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿಯಿಲ್ಲದ ಕಾರಣ ಇಂತಹ ಕ್ಷೇತ್ರಗಳಲ್ಲಿ ಈ ಪ್ರಯೋಗ ನಡೆಸುವ ಸಾಧ್ಯತೆಯಿದೆ. ಏಕೆಂದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಾರದು ಎಂದು ಭಾವಿಸಲಾದ 30 ಕ್ಷೇತ್ರಗಳಲ್ಲಿ ಅಸದುದ್ದೀನ್ ಉವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೆ ಇತ್ತಹಾದುಲ್ ಮುಸ್ಲಿಮೂನ್ (ಎಐಎಂ ಐಎಂ) ಸ್ಪರ್ಧಿಸಿತ್ತು. ಇದರಲ್ಲಿ 19 ಕಡೆ ಬಿಜೆಪಿ ಗೆಲುವಿನ ನಗೆ ಬೀರಿತ್ತು. ಆದ್ದರಿಂದ ಇದೇ ತಂತ್ರವನ್ನು ಬಿಜೆಪಿಯು ಹೆಣೆಯುತ್ತಿದೆ.
ಮತ್ತೊಂದೆಡೆ ಪ್ರಚೋದನಾತ್ಮಕ ಹೇಳಿಕೆಗಳ ಮುಖಾಂತರ ಬಿಜೆಪಿಯು ಧರ್ಮ ಧರ್ಮಗಳ ನಡುವೆ ಗೋಡೆ ಕಟ್ಟಿ ಅವರ ಲಾಭ ಗಳಿಸುವ ಹುನ್ನಾರ ದಲ್ಲಿದೆ. ಇದು ರಾಮ ಮತ್ತು ಅಲ್ಲಾಹನ ನಡುವಿನ ಚುನಾವಣೆ ಎಂದು ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿ ನಗೆಪಾಟಲಿಗೀಡಾದರು. ಇಂತಹ ಹೇಳಿಕೆಗಳು ದ.ಕ. ಜಿಲ್ಲೆ ಯಿಂದಲೇ ಉದುರುತ್ತಿರುವುದು ವಿಶೇಷ. ಗಾಂಧಿ ಹಂತಕನನ್ನು ಸಮರ್ಥಿ ಸುವ ಕಾರ್ಯಕ್ಕೆ ಮುಂದಾದವರನ್ನು ಜನಾನುರಾಗಿ ಯಾಗಿದ್ದ ಬಶೀರ್ ಹತ್ಯೆಯನ್ನು ಸಮರ್ಥಿಸುವ ರಾಜಕಾರಣಿಗಳೂ ಈ ಜಿಲ್ಲೆ ಯಲ್ಲಿ ಪಳಗಿದ್ದಾರೆ

ಈ ರೀತಿ ಜನರನ್ನು ಪ್ರಚೋದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮತ್ತೊಂ ದೆಡೆ ಫೆಬ್ರವರಿ 10ರಿಂದ ಮೂರು ದಿವಸಗಳು ತುಮಕೂರಿನ ಆದಿಚುಂಚನ ಗಿರಿ, ಶೃಂಗೇರಿ ಕ್ಷೇತ್ರ, ಸಿದ್ಧಗಂಗಾ ಮಠಗಳು, ಹುಬ್ಬಳ್ಳಿಯ ಸಿದ್ಧಾರೂಡ ಮಠಗಳಿಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಭೇಟಿ ನೀಡುವ ಯೋಜನೆಯಿದೆ. ಇದು ಬಿಜೆಪಿಯ ಉಗ್ರ ಹಿಂದುತ್ವಕ್ಕೆ ಎಳ್ಳು ನೀರು ಬಿಡುವ ತಂತ್ರವಾಗಿದೆ. ಹೀಗಿರುವಾಗ ಮಠಗಳು, ಮಂದಿರಗಳು, ದೇವಸ್ಥಾನಗಳನ್ನು ಭೇಟಿ ಮಾಡುವ ರಾಹುಲ್ ಗಾಂಧಿಯವರು ಮಸೀದಿಗಳಿಗೆ ಏಕೆ ಭೇಟಿ ನೀಡುತ್ತಿಲ್ಲ ಎಂದು ಅಸದುದ್ದೀನ್ ಉವೈಸಿ ರಂಗಕ್ಕಿಳಿದಿದ್ದಾರೆ. ಹೀಗೆ ಮುಸ್ಲಿಮರ ಹಿತಾಕಾಂಕ್ಷಿಯಂತೆ ವರ್ತಿಸಿ ಮುಸ್ಲಿಮ್ ಮತಗಳನ್ನು ವಿಭಜಿಸುವ ಈ ತಂತ್ರಗಳನ್ನು ಈ ನಾಡಿನ ಪ್ರಜ್ಞಾವಂತ ನಾಗರಿಕರು ಅರ್ಥೈಸಬೇಕಾಗಿದೆ. ಅಧಿಕಾರ ದೊರೆ ತಾಗ ಯಾವ ರೀತಿಯ ಆಡಳಿತವನ್ನು ಬಿಜೆಪಿ ನೀಡಿತ್ತು ಎಂಬುದನ್ನು ಜನರಿಗೆ ಮನವರಿಕೆ ಮಾಡಿಸಬೇಕು. ಎರಡೂ ಧರ್ಮಗಳಲ್ಲಿ ಪ್ರಚೋದಿಸುವವರಿಗೇನೂ ಕೊರತೆಯಿಲ್ಲ. ನಾವು ಆ ಜಾಲಕ್ಕೆ ಬೀಳಿದೆ ಪ್ರಜ್ಞಾವಂತರಾಗಬೇಕಾಗಿದೆ. ಕರ್ನಾಟಕದ ಗತ ಇತಿಹಾಸ ಕೂಡ ಇಂತಹ ಕುಚೇಷ್ಟೆಗಳಿಗೆ ಬಲಿಯಾದ ಉದಾಹರಣೆ ಕಾಣ ಸಿಗದು. ಕೆಲ ಪಕ್ಷಗಳ ರಾಜಕೀಯ ಕಾಪಟ್ಯವು ದಿನಾ ದಿನೇ ಅರ್ಥವಾಗುತ್ತಿವೆ. ಹೆಣದ ರಾಜ ಕೀಯದಲ್ಲಿ ಲಾಭ ಗಳಿಸಲು ಹೆಣಗಾಡಿ ದ್ದನ್ನು ಈ ಜನತೆ ನೋಡಿದೆ. ಆದ್ದರಿಂದ ಕನ್ನಡ ನಾಡಿನ ಜನತೆ ತಮ್ಮ ಮೂಲಭೂತ ಹಕ್ಕುಗಳನ್ನು ಜವಾಬ್ದಾರಿ ಯುತವಾಗಿ ಯಾವುದೇ ಪ್ರಚೋದನೆ ಪ್ರಲೋಭನೆಗೆ ಒಳಗಾಗದೆ ಚಲಾಯಿಸ ಬೇಕಾಗಿದೆ.

2 COMMENTS

  1. ನಿಜವಾಗಿಯೂ ಸಮಯೋಚಿತ ಲೇಖನ. ಪ್ರತಿಯೊಬ್ಬ ಮುಸಲ್ಮಾನ ಮತದಾರ ಈ ಲೇಖನ ಓದಬೇಕು. ಪ್ರಜಾಸತ್ತೆ ಮತ್ತು ಸಂವಿಧಾನಕ್ಕೆ ಬೆಲೆ ಕೊಡುವ ಎಲ್ಲಾ ಸಮಾನ ಮನಸ್ಕರು ಒಂದಾಗಬೇಕಾದ ಕಾಲ ಬಂದಿದೆ. ಮುಂದಿನ ಚುನಾವಣೆ ಈ ನಿಟ್ಟಿನಲ್ಲಿ ನಿರ್ಣಾಯಕ. ಅಭಿನಂದನೆಗಳು ಸಲೀಮ್ ರವರಿಗೆ.

  2. Dear editor. Owaisi is not coming to divide the vote. He is coming to form platform for Muslims and dalits… To fighting against fascism discrimination.. Injustice to Muslims.u are dancing to the tunes of Congress… Congress propaganda is same… Owais is bjp agent.. U r following Congress… Same like BJP paid media… Don’t do that.. If u continue same like that then sanmarga will lose its credibility..

Comments are closed.