ಸರ್ಕಾರಿ ನೌಕರರಿಗೆ ಭಾರೀ ಬಂಪರ್:

0
1491

ಬೆಂಗಳೂರು: 6 ನೇ ವೇತನ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸಿಲಾಗಿದ್ದು ಸರ್ಕಾರಿ ನೌಕರರಿಗೆ ಭಾರಿ ವೇತನ ಹೆಚ್ಚಳತ್ಕೆ ಶಿಫಾರಸು ಮಾಡಲಾಗಿದೆ.

5.20 ಲಕ್ಷ ಸರ್ಕಾರಿ ನೌಕರರಿಗೆ ಶೇ 30 ರಷ್ಟು ವೇತನ ಹೆಚ್ಚಳ ಕ್ಕೆ ಶಿಫಾರಸು ಮಾಡಲಾಗಿದ್ದು,
73ಸಾವಿರ ಅನುದಾನಿತ ಶಿಕ್ಷಣ ಸಂಸ್ಥೆಗಳ ಬೋಧಕೇತರ ಸಿಬ್ಬಂದಿಗೂ ಇದು ಅನ್ವಯವಾಗಲಿದೆ.
5.73 ಲಕ್ಷ ಪಿಂಚಣಿದಾರರಿಗೂ ಇದು ಲಾಭದಾಯಕ ಆಗಲಿದೆ.
ಜುಲೈ 7, 2017 ರಿಂದ ಪೂರ್ವಾನ್ವಯ ಆಗುವಂತೆ ಜಾರಿಗೆ ಶಿಫಾರಸು ಮಾಡಲಾಗಿರುವುದೂ ಗಮನಾರ್ಹ.
ಶಿಫಾರಸು ಪ್ರಕಾರ, ಕನಿಷ್ಟ ವೇತನ 17ಸಾವಿರ, ಗರಿಷ್ಟ ವೇತನ 1,50,600 ಇರಲಿದೆ.
ವೇತನ, ಭತ್ಯೆ ಹಾಗೂ ಪಿಂಚಣಿ ಪರಿಷ್ಕರಣೆಯಿಂದ ಬೊಕ್ಕಸಕ್ಕೆ 10,508.ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.
ವಿಕಲ ಚೇತನ ನೌಕರರಿಗೆ ತ್ರಿಚಕ್ರ ವಾಹನ ಖರೀದಿಗೆ ನೀಡುತ್ತಿದ್ದ ಸಹಾಯಧನವನ್ನು
25 ಸಾವಿರದಿಂದ 40 ಸಾವಿರಕ್ಕೆ ಏರಿಕೆ ಮಾಡಲೂ ಶಿಫಾರಸು ಮಾಡಲಾಗಿದೆ.
80 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ನೀಡುವುದೂ ಶಿಫಾರಸು ಒಳಗೊಂಡಿದೆ.