ಸ್ಮೃತಿ ಇರಾನಿಯಿಂದ ‘ಎಂಪಿ ಫಂಡ್’ ವಿನಿಯೋಗದಲ್ಲಿ ಭ್ರಷ್ಟಾಚಾರ- ಕಾಂಗ್ರೆಸ್ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ

0
994

ಹೊಸದಿಲ್ಲಿ,ಮಾ.14: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಸಂಸದ ನಿಧಿ ಬಳಕೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಟೆಂಡರ್ ಕರೆಯದೆ ಯೋಜನೆಯ ಹೆಸರಿನಲ್ಲಿ ಸಚಿವೆ ಸ್ಮೃತಿ 5.93 ಕೋಟಿ ರೂಪಾಯಿ ವಂಚಿಸಿದ್ದಾರೆ. ಸಿಎಜಿ ವರದಿಯಲ್ಲಿ ಈವಿಷಯ ಬಹಿರಂಗಗೊಂಡಿದೆ. ಗುಜರಾತ್ ಸ್ಟೇಟ್ ರೂರಲ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ ಸಂಸದ ನಿಧಿಯನ್ನು ಬಳಸಿ ಜಾರಿಗೊಳಿಸಿದ ಯೋಜನೆಯಲ್ಲಿ ಸ್ಮೃತಿ ಭ್ರಷ್ಟಾಚಾರ ತೋರಿಸಿದ್ದಾರೆ.

ಸಾರ್ವಜನಿಕ ಧನ ದುರುಪಯೋಗ ಮಾಡಿದ್ದಕ್ಕೆ ಭ್ರಷ್ಟಾಚಾರ ನಿರೋಧ ಕಾನೂನು ಪ್ರಕಾರ ಇರಾನಿಯ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು. ಸಚಿವ ಸ್ಥಾನದಿಂದ ತೆಗೆದು ಹಾಕುವ ಧೈರ್ಯವನ್ನು ಪ್ರಧಾನಿ ತೋರಿಸಬೇಕೆಂದು ಸುರ್ಜೇವಾಲ ಆಗ್ರಹಿಸಿದರು.