ಕೊಲೊಂಬೊದ ಚರ್ಚ್, ಫೈವ್‍ಸ್ಟಾರ್ ಹೊಟೇಲುಗಳಲ್ಲಿ ಸ್ಫೋಟ

0
176

ಕೊಲೊಂಬೊ,ಎ. 21: ಕೊಲೊಂಬೊದ ಚರ್ಚ್‍ಗಳಲ್ಲಿ,ಫೈವ್‍ಸ್ಟಾರ್ ಹೊಟೇಲುಗಳಲ್ಲಿ ಸ್ಫೋಟ ನಡೆದಿದ್ದು ಎಂಬತ್ತು ಮಂದಿ ಗಾಯಗೊಂಡಿದ್ದಾರೆ. ಈಸ್ಟರ್ ಪ್ರಾರ್ಥನೆಯ ವೇಳೆ ಚರ್ಚ್‍ಗಳಲ್ಲಿ ಸ್ಫೋಟ ನಡೆಯಿತು. ರಾಜಧಾನಿ ನಗರವಾದ ಕೊಲೊಂಬೊದ ಕೊಚ್ಚಿಕ್ಕಡದ ಸೈಂಟ್ ಆಂಟನೀಸ್ ಚರ್ಚ್‌ನಲ್ಲಿ ಕಾಡ್ನದ ಇನ್ನೊಂದು ಚರ್ಚ್‍ನಲ್ಲಿ ಸ್ಫೋಟ ಸಂಭವಿಸಿತು. ಶಿಂಗ್ರಿ-ಲಾ, ಕಿಂಗ್ಸ್‍ಬರಿ ಮೊದಲಾದ ಫೈವ್‍ಸ್ಟಾರ್ ಹೊಟೇಲ್‍ಗಳಲ್ಲಿ ಕೂಡ ಸ್ಫೋಟ ಸಂಭವಿಸಿದೆ. ಈಸ್ಟರ್ ದಿನದಲ್ಲಿ ಚರ್ಚ್‌ನಲ್ಲಿ ಸ್ಫೋಟ ನಡೆದುದರ ದೃಶ್ಯಗಳು ವ್ಯಾಪಕ ವೈರಲ್ ಆಗಿದೆ. ಇದೇ ವೇಳೆ, ಸ್ಫೋಟದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.