ಭಾರತಕ್ಕೆ ಭೇಟಿ ನೀಡಲಿರುವ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್

0
1605

ರಿಯಾದ್,ಫೆ.13: ಸೌದಿ ಅರೇಬಿಯಾ ಉಪಪ್ರಧಾನಿ, ರಕ್ಷಣಾ ಸಚಿವ ಮತ್ತು ದೊರೆಯ ಉತ್ತರಾಧಿಕಾರಿಯಾದ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ ನೀಡಲಿದ್ದು ಇತಿಹಾಸ ಸೃಷ್ಟಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರು ಸಹಾರ್ದ ಭೇಟಿ ನೀಡಲು ಭಾರತಕ್ಕೆ ಆಗಮಿಸಲಿದ್ದಾರೆ. ಕೇವಲ ಇಂಧನ ಆವಶ್ಯಕತೆಯ ಸಂಬಂಧ ಮತ್ತು ಸುರಕ್ಷೆ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಸಹಕರಿಸಿ ಕಾರ್ಯವೆಸಗಲು ಉಭಯ ದೇಶಗಳು ಮುಂದೆ ಬರಲಿದೆ.

ಈ ಹಿಂದೆ 2006ರಲ್ಲಿ ದೊರೆ ಅಬ್ದುಲ್ಲ ಮತ್ತು 2014ರಲ್ಲಿ ದೊರೆಯ ಉತ್ತರಾಧಿಕಾರಿಯಾಗಿದ್ದ ದೊರೆ ಸಲ್ಮಾನ್‍ರ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಸೌದಿ ಆಡಳಿತಗಾಗರ ಮುಹಮ್ಮದ್ ಆಗಿದ್ದಾರೆ. 2006ರಲ್ಲಿ ಗಣರಾಜ್ಯೋತ್ಸವದ ಅತಿಥಿಯಾಗಿ ದೊರೆ ಅಬ್ದುಲ್ಲ ಆಗಮಿಸಿದ್ದರು. ಅಂದು ದಿಲ್ಲಿಯಲ್ಲಿ ದೊರೆ ಅಬ್ದುಲ್ಲ ಭಾರತ ತನ್ನ ಎರಡನೆ ಮನೆಯೆಂದು ಹೇಳಿಕೆ ನೀಡಿದ್ದರು. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್‍ರ ಜತೆ ದೊರೆ ಅಬ್ದುಲ್ಲ ನೀಡಿದ ದಿಲ್ಲಿ ಘೋಷಣೆಯು ಎರಡು ದೇಶಗಳ ಸೌಹಾರ್ದ ಸಂಬಂಧಕ್ಕೆ ಅಗತ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಸಹಕರಿಸುವ ಆಶಯಕ್ಕೆ ನಾಂದಿಯಾಗಿತ್ತು.

2010ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸೌದಿಅರೇಬಿಯಕ್ಕೆ ದ್ವಿದಿನ ಭೇಟಿ ನೀಡಿದ್ದರು. 2014 ಫೆಬ್ರುವರಿ 26ರಲ್ಲಿ ದೊರೆಯಾದ ಬಳಿಕ ಸಲ್ಮಾನ್ ನಡೆಸಿದ ಭಾರತ ಸಂದರ್ಶನವೂ ಭಾರತಕ್ಕೆ ಲಾಭಕರವಾಗಿಯೇ ಪರಿಣಮಿಸಿತ್ತು. ತಂತ್ರಪ್ರಧಾನ ಪಾಲುದಾರರಾಗಿ ಎರಡೂ ದೇಶಗಳು ಬದಲಾದವು. 2016ರಲ್ಲಿ ಪ್ರಧಾನಿ ಮೋದಿ ಸೌದಿ ಅರೇಬಿಯ ಭೇಟಿ ನೀಡುವುದರೊಂದಿಗೆ ಈ ದಾರಿಯಲ್ಲಿ ದೊಡ್ಡ ಪ್ರಗತಿಯಾಗಿತ್ತು.

ಈ ವೇಳೆ ಯುವರಾಜ ಮುಹಮ್ಮದ್; ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರೊಂದಿಗೆ ವಿಶೇಷ ಸಮಾಲೋಚನೆ ನಡೆಸಲಿದ್ದು, ವಿವಿಧ ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ. ಪ್ರಮುಖ ವಿಷಯಗಳಲ್ಲಿ ಹೊಸ ತೀರ್ಮಾನಗಳು ಪ್ರಕಟವಾಗಲಿದೆ. ಇಂಧನ, ಸುರಕ್ಷಾ ಕ್ಷೇತ್ರಕ್ಕೆ ಆದ್ಯತೆ ನೀಡಿ ಚರ್ಚೆಯು ನಡೆಯಲಿದೆ. ಎರಡು ದೇಶಗಳ ವ್ಯಾಪಾರ ವಹಿವಾಟು 27.48 ಕೋಟಿ ರೂಪಾಯಿಯಾಗಿ ಹೆಚ್ಚಳವಾಗಲಿದೆ. ಭಾರತಕ್ಕೆಶೇ.20ರಷ್ಟು ಕಚ್ಚಾತೈಲವನ್ನು ಸೌದಿ ಅರೇಬಿಯ ಒದಗಿಸುತ್ತಿದೆ.