ಆ. 15ರವರೆಗೆ ಕಾಶ್ಮೀರದಲ್ಲಿ ಯಥಾಸ್ಥಿತಿ: ಡೊವಲ್

0
103

ಶ್ರೀನಗರ, ಆ. 13: ಜಮ್ಮುಕಾಶ್ಮೀರದ ಗುಪ್ತಚಾರ ಬ್ಯೂರೊ ಯುನಿಟ್ ಮತ್ತು ರಾಜ್ಯದ ಸುರಕ್ಷೆ, ಕಾನೂನು ವ್ಯವಸ್ಥೆಯನ್ನು ಅವಲೋಕಿಸಲು ಮತ್ತು ರಾಜ್ಯದ ವಿಶೇಷ ಸ್ಥಾನ ಮಾನ ರದ್ದುಪಡಿಸಿದ ಬಳಿಕ ಸುರಕ್ಷೆಯನ್ನು ನಿಯೋಜಿಸಲು ಕಾಶ್ಮೀರದಲ್ಲಿರುವ ಅಜಿತ್ ಡೊವೆಲ್ ಆಗಸ್ಟ್ ಹದಿನೈದರವರೆಗೆ ಇದೇ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಸೂಚಿಸಿದ್ದಾರೆ.

ಈದ್‍ನಂದು ಶ್ರೀನಗರದಲ್ಲಿ ಸಿಆರ್‍ಪಿಎಫ್ , ಪೊಲೀಸ್ ಜೊತೆ ಡೊವಲ್ ಆಹಾರ ಸೇವಿಸುವ ಚಿತ್ರಗಳು ಸಾಮಾಜಿಕ ಮಾದ್ಯಮದಲ್ಲಿ ಪ್ರಚಾರವಾಗಿತ್ತು. ಶೋಪಿಯಾನ್ ಸಹಿತ ಸಮಸ್ಯೆಯಿರುವ ಪ್ರದೇಶಗಳಲ್ಲಿ ಡೋವಲ್ ಕಾರ್ಯವೆಸಗುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿಯ ಭದ್ರತಾ ಸಲಹೆಗಾರನಾಗಿರುವ ಅವರು ಸುರಕ್ಷೆಗೆ ಸಂಬಂಧಿಸಿದ ತುರ್ತು ತೀರ್ಮಾನ ಕೈಗೊಳ್ಳುವುದಕ್ಕಾಗಿ ಜಮ್ಮುಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿದೆ. ಕೇಂದ್ರ ಸರಕಾರದ ಹೊಸ ತೀರ್ಮಾನದಿಂದ ಕಾಶ್ಮೀರದ ಜನರಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವುದಕ್ಕಾಗಿ ಭಾರೀ ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸರಕಾರ ವಾದಿಸುತ್ತಿದೆ. ಪ್ರತ್ಯೇಕತಾವಾದಿಗಳ ಸಹಿತ ಯಾರಿಂದಲೂ ಯಾವುದೇ ರೀತಿಯ ಪ್ರಕ್ರಿಯೆಗಳು ನಡೆದರೆ ಅದನ್ನು ಕಠಿಣವಾಗಿ ಎದುರಿಸಲು ಕೇಂದ್ರಸರಕಾರ ನಿರ್ಧರಿಸಿದೆ.

LEAVE A REPLY

Please enter your comment!
Please enter your name here