100 ವರ್ಷ ಬಿಜೆಪಿ ಸರಕಾರ ಇದ್ದರೂ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕುವುದಿಲ್ಲ- ಗುಲಾಂ ನಬಿ ಆಝಾದ್

0
445

ಹೊಸದಿಲ್ಲಿ,ಮೇ 18: ನೂರು ವರ್ಷ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ ಕಾಶ್ಮೀರದ ವಿಶೇಷ ಸ್ಥಾನಮಾನ 370ನೆ ವಿಧಿಯನ್ನು ತೆಗೆದು ಹಾಕುವುದಿಲ್ಲ. ಹಾಗೆ ಮಾಡಲು ಅದಕ್ಕೆ ಸಾಧ್ಯವೂ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಸರಕಾರ ವಿದ್ದಾಗ ಕೂಡ ಅಂತಹದೊಂದು ಆಲೋಚನೆಯೇ ಇರಲಿಲ್ಲ ಎಂದು ಅವರು ತಿಳಿಸಿದರು.

ಹಿಮಾಚಲ ಪ್ರದೇಶದ ಚುನಾವಣಾ ರ‌್ಯಾಲಿಯ ವೇಳೆ ಅವರು ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು. ಹಾರೊಲಿಯಲ್ಲಿ ಕಾಂಗ್ರೆಸ್ ನಾಯಕರಾದ ಆಚಾರ್ಯ ಪ್ರಮೋದ್ ಕೃಷ್ಣ, ಶಾಸಕ ಮುಖೇಶ್ ಅಗ್ನಿ ಹೋತ್ರಿ ಜೊತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಭಯೋತ್ಪಾದಕ ಮಸೂದ್ ಅಝರ್‌ನನ್ನು ಬಿಜೆಪಿ ಸರಕಾರ ಬಿಡುಗಡೆಗೊಳಿಸಿತು. ಅದು ಯಾವ ಚುನಾವಣೆಯಲ್ಲಿಯೂ ಪ್ರಧಾನ ವಿಷಯ ಆಗಿರಲಿಲ್ಲ. ದೇಶದಿಂದ ಬಡತನ ನಿವಾರಿಸುವುದು, ನಿರುದ್ಯೋಗ ನಿವಾರಣೆ ಮಾಡಲು ಆಯಿತೇ ಎನ್ನುವುದು ಚುನಾವಣಾ ಚರ್ಚಾ ವಿಷಯಗಳಾಗಿತ್ತು. 273 ಸೀಟು ಗಳಿಸುವುದು ನಮ್ಮ ಗುರಿ ಆದ್ದರಲ್ಲಿ ನಮಗೆ ಸಂದೇಹಗಳಿಲ್ಲ. ರಾಹುಲ್ ಗಾಂಧಿ ದೇಶದ ಅತಿಹೆಚ್ಚು ಸ್ಥಾನ ಪಡೆದ ಮೈತ್ರಿಕೂಟದ ನಾಯಕನಾಗಲಿರುವರು ಮತ್ತು ಪ್ರಧಾನಿ ಸ್ಥಾನಕ್ಕೆ ರಾಹುಲ್ ಮಾದರಿ ಅಭ್ಯರ್ಥಿಯಾಗಲಿರುವರು ಎಂದು ಗುಲಾಂ ನಬಿ ಆಝಾದ್ ಹೇಳಿದರು.