ಪ.ಬಂಗಾಳದಲ್ಲಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ, ಕೊಲೆ: ತೀವ್ರ ಪ್ರತಿಭಟನೆ

0
774

ಸನ್ಮಾರ್ಗ ವಾರ್ತೆ

ಕೊಲ್ಕತಾ,ಜು.20: ಶಾಲಾ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರವ್ಯಸಗಿ ಕೊಲೆಗೈದ ಘಟನೆಯಲ್ಲಿ ಪಶ್ಚಿಮ ಬಂಗಾಳದ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಕೊಲ್ಕತಾದ ಸಿಲಿಗುರಿಯನ್ನು ಸೇರುವ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ವಾಹನ ಸಂಚಾರ ತಡೆದು ವಾಹನಗಳಿಗೆ ಬೆಂಕಿ ಇಡಲಾಗಿದೆ.

ಕೊಲ್ಕತಾದಿಂದ 500 ಕಿಲೊ ಮೀಟರ್ ದೂರದ ಚೊಪ್ರದಲ್ಲಿ ಘಟನೆ ನಡೆದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜು ಮಾಡಿದರು. ಅಶ್ರುವಾಯು ಸಿಡಿಸಿದರು. ರವಿವಾರ ಮಧ್ಯಾಹ್ನದ ಬಳಿಕ ಪ್ರತಿಭಟನೆ ಆರಂಭವಾಗಿದ್ದು, ಮೂರು ಬಸ್ಸುಗಳು ಒಂದು ಪೊಲೀಸ್ ವ್ಯಾನಿಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ.

ಹತ್ತನೆ ತರಗತಿಯ ಹುಡುಗಿ ಕಾಣೆಯಾಗಿದ್ದಳು. ಬಾಲಕಿಯನ್ನು ಮನೆಯವರು ಹುಡುಕುತ್ತಾ ಹೋದಾಗ ಮರದ ರೆಂಬೆಯಲ್ಲಿ ಅವಳ ಮೃತದೇಹ ತೂಗಾಡುತ್ತಿತ್ತು. ಬಾಲಕಿಯನ್ನು ಸಾಮೂಹಿಕ ಅತ್ಯಾಚಾರವ್ಯಸಗು ಕೊಂದಿರುವುದಾಗಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳದಲ್ಲೊ ಎರಡು ಸೈಕಲ್, ಮೊಬೈಲ್ ಫೋನ್‍ಗಳೂ ಪತ್ತೆಯಾಗಿವೆ. ಇದನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಇದೇ ವೇಳೆ ಬಾಲಕಿಯ ವಿಷ ಸೇವಿಸಿದ್ದರಿಂದ ಸಾವು ಸಂಭವಿಸಿದೆ ಮತ್ತು ದೇಹದಲ್ಲಿ ಗಾಯಗಳಿಲ್ಲ ಎಂದು ಪೋಸ್ಟ್ ಮಾರ್ಟಂ ವರದಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.