UAEಯ ಮೊದಲ ಮಂಗಳ ಮಿಷನ್ ಯಶಸ್ವಿ: ಜಪಾನ್‌ನಿಂದ ಉಡ್ಡಯನ

0
510

ಸನ್ಮಾರ್ಗ ವಾರ್ತೆ

ಟೋಕಿಯೊ,ಜಪಾನ್: ಮಂಗಳ ಗ್ರಹದ ಮೊದಲ ಅರಬ್ ಬಾಹ್ಯಾಕಾಶ ಯಾನ, “ಹೋಪ್” ಎಂದು ಕರೆಯಲ್ಪಡುವ ಮಾನವರಹಿತ ರಾಕೆಟ್‌ನ್ನು ಸೋಮವಾರ ಜಪಾನ್‌ನಿಂದ ಉಡ್ಡಯನ ನಡೆಸಲಾಯ್ತು.

ಕೆಂಪು ಗ್ರಹದ ವಾತಾವರಣದ ಬಗ್ಗೆ ಹೆಚ್ಚಿನ ವಿಷಯಗಳನ್ನು ಬಹಿರಂಗಪಡಿಸುವ ಉದ್ದೇಶವನ್ನು ಈ ಮಿಷನ್ ಹೊಂದಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಭಿವೃದ್ಧಿಪಡಿಸಿದ ಉಪಗ್ರಹವನ್ನು ಹೊತ್ತ ಜಪಾನಿನ ರಾಕೆಟ್ ದಕ್ಷಿಣ ಜಪಾನ್‌ನ ತನೆಗಶಿಮಾ ಬಾಹ್ಯಾಕಾಶ ಕೇಂದ್ರದಿಂದ ಸ್ಥಳೀಯ ಸಮಯದ (2158 ಜಿಎಂಟಿ ಭಾನುವಾರ) ಬೆಳಿಗ್ಗೆ 6:58ಕ್ಕೆ ಉಡಾವಣೆಯಾಗಿದೆ.

ಅರೇಬಿಕ್ ಭಾಷೆಯಲ್ಲಿ “ಅಲ್-ಅಮಲ್” ಎಂದು ಕರೆಯಲ್ಪಡುವ ರಾಕೆಟ್‌ನ ಉಡಾವಣೆಯು ಕೆಟ್ಟ ಹವಾಮಾನದಿಂದಾಗಿ ಎರಡು ಬಾರಿ ವಿಳಂಬವಾಗಿತ್ತು, ಆದರೆ ಸೋಮವಾರ ಸುಗಮವಾಗಿ ಲಿಫ್ಟ್‌ಆಫ್ ಮಾಡಲಾಗಿದ್ದು, ಯಶಸ್ವಿಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.