ಯುದ್ಧ ಸಾಮಗ್ರಿಗಳಿಗೆ ಗುಣಮಟ್ಟವಿಲ್ಲ: ಭೂ ಸೇನಾ ದೂರು

0
136

ಹೊಸದಿಲ್ಲಿ,ಮೇ 15: ಸಾರ್ವಜನಿಕ ಆಯುಧ ನಿರ್ಮಾಣ ಸಂಸ್ಥೆ ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್(ಒಎಫ್‍ಬಿ) ಕೊಡುವ ಯುದ್ಧ ಸಾಮಗ್ರಿಗಳು ಗುಣಮಟ್ಟಕ್ಕೆ ತಕ್ಕಂತಿಲ್ಲ. ಈ ವಿಷಯದಲ್ಲಿ ರಕ್ಷಣಾ ಸಚಿವಾಲಯ ತುರ್ತು ಮಧ್ಯಪ್ರವೇಶಿಸಬೇಕೆಂದು ಭೂಸೇನೆ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನು ರಕ್ಷಣಾ ನಿರ್ಮಾಣ ವಿಭಾಗ ಕಾರ್ಯದರ್ಶಿ ಅಜಯ್‍ ಕುಮಾರ್‌ಗೆ ಭೂಸೇನೆ ಅಧಿಕಾರಿಗಳು ನೀಡಿದರು.

ಕೆಲವು ವರ್ಷಗಳಿಂದ ಮದ್ದು ಗುಂಡುಗಳ ಕಾರಣದಿಂದ ಟ್ಯಾಂಕು, ಪಿರಂಗಿಗಳು ಉಪಯೋಗಿಸುವಾಗ ಅಪಾಯವಾಗುವುದು ರೂಢಿಯೆಂಬಂತಾಗಿದೆ. ಹೀಗೆ ಈವರೆಗೆ ಆದ ಅಪಾಯಗಳ ಅಂಕಿ ಅಂಶವನ್ನು ಸೇನೆ ರಕ್ಷಣಾ ಸಚಿವಾಲಯಕ್ಕೆ ನೀಡಿತು. ಅರ್ಜುನ್ ಟ್ಯಾಂಕ್, ವಿವಿಧ ರೀತಿ ಪಿರಂಗಿಗಳೂ, ವ್ಯೋಮ ರಕ್ಷಣಾ ಟ್ಯಾಂಕುಗಳಿಗೆ ಹಾನಿಯಾಗಿದೆ, ಸೈನಿಕರು ಗಾಯಗೊಂಡಿದ್ದಾರೆ ಎಂದು ಪತ್ರದಲ್ಲಿ ಭೂ ಸೇನಾಧಿಕಾರಿಗಳು ವಿವರ ನೀಡಿದರು. ವಿಷಯವನ್ನು ಪರಿಶೀಲಿಸಿದ ಸಚಿವಾಲಯ ಮದ್ದುಗುಂಡುಗಳ ಗುಣಮಟ್ಟವನ್ನು ಒಎಫ್‍ಬಿ ಹೆಚ್ಚಿಸಲು ನೋಡುವುದಿಲ್ಲ ಎಂದು ಮನಗಂಡಿತೆಂದು ಹೇಳಲಾಗಿದೆ‌‌.