ಉಯಿಘರ್ ಜನಾಂಗೀಯ ಹತ್ಯೆಯನ್ನು ಖಂಡಿಸಿ ಧ್ವನಿಯೆತ್ತಿದ ಯಹೂದಿ ವಿಭಾಗ

0
1924

ಸನ್ಮಾರ್ಗ ವಾರ್ತೆ

ಲಂಡನ್: ಬ್ರಿಟನ್ ನಿವಾಸಿಗಳಾದ ಯಹೂದಿ ವಿಭಾಗದ ಜನರು ಚೀನಾ ಸರಕಾರದ ವಿರುದ್ಧ ಧ್ವನಿಯೆತ್ತಿದ್ದಾರೆ. ಹಾಲೊಕಾಸ್ಟ್ ಸ್ಮರಣೆಯ ದಿನದಲ್ಲಿ ಅವರು ಬೀದಿಗಿಳಿದು ಉಯಿಘರ್ ಮುಸ್ಲಿಮರನ್ನು ದಮನಿಸುತತ್ತಿರುಬ ಚೀನಾ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಚೀನ ಸರಕಾರವು ಉಯಿಘರ್ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಈಗಾಗಲೇ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ.

ಚೀನ ನಡೆಸುತ್ತಿರುವ ಜನಾಂಗೀಯ ಹತ್ಯೆಯನ್ನು ವಿರೋಧಿಸಿ ಪ್ರತಿಭಟಿಸಿದ ಬ್ರಿಟನ್‍ನ ಯಹೂದಿಯರು ಪ್ರತಿಭಟಿಸುವುದು ತಮ್ಮ ಧಾರ್ಮಿಕ ಕರ್ತವ್ಯವೆಂದು ಹೇಳಿದ್ದಾರೆ. ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಅಡಾಲ್ಪ್ ಹಿಟ್ಲರ್ ಆರು ಲಕ್ಷ ಯಹೂದಿ ಜನರನ್ನು ಸಾಮೂಹಿಕ ಹತ್ಯೆ ನಡೆಸಿದ್ದು ಇದರ ಸ್ಮರಣೆಯಲ್ಲಿ ಪ್ರತಿವರ್ಷ ಜನವರಿ 27ಕ್ಕೆ ಹಾಲೊಕಾಸ್ಟ್ ದಿನ ಆಚರಿಸಲಾಗುತ್ತಿದೆ.