ಎನ್‍ಆರ್ ಸಿ, ಎನ್‍ಪಿಆರ್ ಜಾರಿಗೊಳಿಸುತ್ತೇವೆಂಬ ಅಹಂಕಾರವನ್ನು ಬಿಜೆಪಿ ಬಿಟ್ಟುಬಿಡಲಿ – ಮಾಯಾವತಿ

0
1489

ಸನ್ಮಾರ್ಗ ವಾರ್ತೆ

ಲಕ್ನೊ, ಜ. 15: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾಂಗ್ರೆಸ್ಸಿನ ಅದೇ ದಾರಿಯನ್ನು ತುಳಿದಿದೆ ಎಂದು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಹೇಳಿದರು. ಕೇಂದ್ರ ಸರಕಾರ ತಪ್ಪು ನೀತಿಗಳು ದೇಶದ ಕಾನೂನು ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಅವರು ಟೀಕಿಸಿದರು.

ಬಂಡವಾಳ ಶಾಹಿಗಳಿಗಾಗಿ ಮೋದಿ ಸರಕಾರ ಕೆಲಸ ಮಾಡುತ್ತಿದೆ. ನಿರುದ್ಯೋಗ, ಹಣದುಬ್ಬರ ಸಮಸ್ಯೆಯಿಂದ ದೇಶ ಬಳಲುತ್ತಿದೆ. ಈ ಪರಿಸ್ಥಿತಿಯಲ್ಲಿ ಎನ್‍ಆರ್ ಸಿ, ಎನ್‍ಪಿಆರ್ ಜಾರಿಗೊಳಿಸುತ್ತೇವೆಂಬ ಅಹಂಕಾರವನ್ನು ಬಿಜೆಪಿ ಬಿಟ್ಟುಬಿಡಬೇಕು. ಬಿಜೆಪಿ ಸರಕಾರ ಬಡವರ ವಿರುದ್ಧ ವರ್ತಿಸುತ್ತಿದೆ. ಜನರ ನಡುವೆ ಅಸ್ವಸ್ಥತೆ, ನಿರುದ್ಯೋಗ ವ್ಯಾಪಕಗೊಳಿಸುವ ಕೆಲಸವನ್ನು ಮಾತ್ರ ಬಿಜೆಪಿ ಮಾಡುತ್ತಿದೆ ಎಂದು ಮಾಯಾವತಿ ಹೇಳಿದರು. ಬಿಜೆಪಿ ಸರಕಾರ ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಿಸಿದೆ. ಸರಕಾರ ಸ್ವೀಕರಿಸಿದ ತಪ್ಪು ನೀತಿ ದೇಶವನ್ನು ಅಸ್ವಸ್ಥಗೊಳಿಸಿದ್ದು ಕಾನೂನು ವ್ಯವಸ್ಥೆ ನಾಶವಾಗಿದೆ ಎಂದರು.

ಪೌರತ್ವ ತಿದ್ದುಪಡಿ ಕಾನೂನು ಸಂಬಂಧಿಸಿ ಉತ್ತರಪ್ರದೇಶ ಪೊಲೀಸರ ಕ್ರಮಗಳ ವಿರುದ್ಧ ಮಾಯಾವತಿ ಕಟು ನಿಂದನೆ ಮಾಡಿದರು. ಯೋಗಿ ಆದಿತ್ಯನಾಥ್ ಪಾರ್ಟಿ ರಾಜಕೀಯದಿಂದ ಗಮನ ಕಡಿಮೆ ಮಾಡಿ ರಾಜ್ಯದ ಕಾನೂನು ವ್ಯವಸ್ಥೆಯನ್ನು ಉತ್ತಮಗೊಳಿಸಲು ಕೆಲಸ ಮಾಡಬೇಕೆಂದು ಮಾಯಾವತಿ ಹೇಳಿದರು.