ಸಿಎಎ, ಎನ್‍ಆರ್ ಸಿ ಕುರಿತು ಬಿಜೆಪಿಯೊಳಗೆ ಕಲಹ: 600ಕ್ಕೂ ಹೆಚ್ಚು ಪದಾಧಿಕಾರಿಗಳು, ಕಾರ್ಯಕರ್ತರ ರಾಜೀನಾಮೆ

0
6346

ಸನ್ಮಾರ್ಗ ವಾರ್ತೆ

ಭೋಪಾಲ, ಜ. 15: ಮಧ್ಯಪ್ರದೇಶದಲ್ಲಿ ಪೌರತ್ವತಿದ್ದುಪಡಿ ಕಾನೂನು ಕುರಿತು ಬಿಜೆಪಿಯೊಳಗೆ ವಿರೋಧ ಕಂಡು ಬಂದಿದ್ದು ಮಧ್ಯಪ್ರದೇಶದಲ್ಲಿ 600ಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಎ ಮತ್ತು ಎನ್‍ಆರ್ ಸಿ ಕಾನೂನೇ ರಾಜೀನಾಮೆಗೆ ಮುಖ್ಯ ಕಾರಣವೆಮದು ಹೇಳಲಾಗುತ್ತಿದೆ. ರಾಜೀನಾಮೆ ನೀಡಿದವರಲ್ಲಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕ ಕೂಡ ಸೇರಿದ್ದಾರೆ.

ಪೌರತ್ವ ತಿದ್ದುಪಡಿ ಕಾನೂನಿನ ಕುರಿತು ಅತಿ ಹೆಚ್ಚು ಆಕ್ರೋಶ ಖರ್‍ಗೊನ್ ಜಿಲ್ಲೆಯಲ್ಲಿ ಕಂಡು ಬಂದಿದೆ. ಜನವರಿ 9ಕ್ಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚದ 173 ಪದಾಧಿಕಾರಿಗಳು ಮತ್ತು ಸುಮಾರು 500 ಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಖರಗೋನ್, ಭೋಪಾಲ, ದೆವಾಸ್ ಮತ್ತು ಹರದಾದಲ್ಲಿ ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ. ಖರಗೋನ್ ಜಿಲ್ಲೆಯ ಅಧ್ಯಕ್ಷ ತಸ್ಲಿಂ ಖಾನ್ ಪ್ರಕಾರ ಖರಗೋನ್ ಜಿಲ್ಲೆಯಲ್ಲಿ 173 ಪದಾಧಿಕಾರಿಗಳು ಮತ್ತು 500 ಕಾರ್ಯಕರ್ತರು ಅಲ್ಪಸಂಖ್ಯಾತ ಮೋರ್ಚಕ್ಕೆ ರಾಜೀನಾಮೆ ನೀಡಿದ್ದಾರೆ. ನಮ್ಮ ಸಮುದಾಯದ ವಿರುದ್ಧ ಬಿಜೆಪಿಯ ಉನ್ನತ ನಾಯಕರು ಹಲವು ಬಾರಿ ವೈಯಕ್ತಿಕ ಟಿಪ್ಪಣಿ ಮತ್ತು ನಿರ್ಲಕ್ಷಿಸುವುದು ನಡೆದಿದೆ. ಆದರೆ ಸಿಎಎ ಮತ್ತು ಎನ್‍ಆರ್ ಸಿ ನಮ್ಮ ಸಹನೆಯನ್ನು ಮೀರಿದ್ದು ಎಂದು ತಸ್ಲಿಂ ಹೇಳಿದರು.