ಮಕ್ಕಳ ಚಿಕಿತ್ಸೆಗಾಗಿ ತನ್ನೆಲ್ಲ ಅಂಗಾಂಗಗಳ ಮಾರಾಟಕ್ಕೆ ಮುಂದಾದ ತಾಯಿ

0
567

ಸನ್ಮಾರ್ಗ ವಾರ್ತೆ

ತುರವನಂತಪುರಂ,ಸೆ.22: ಕೇರಳದಲ್ಲಿ ತಾಯಿಯೊಬ್ಬಳು ತನ್ನ ಹದಿಹರೆಯದ ಮಕ್ಕಳ ಚಿಕಿತ್ಸೆಯ ವೆಚ್ಚಗಳನ್ನು ಪೂರೈಸಲು ತನ್ನ ಎಲ್ಲಾ ಅಂಗಗಳನ್ನು ಮಾರಾಟ ಮಾಡಲು ಮುಂದಾದ ಘಟನೆಯು ವರದಿಯಾಗಿದೆ.

ಅಸಹಾಯಕ ಮಹಿಳೆಯು ತನ್ನ ಐದು ಮಕ್ಕಳೊಂದಿಗೆ ಕೊಚ್ಚಿಯಲ್ಲಿ ನೆಲೆಸಿದ್ದು, ‘ತಾಯಿಯ ದೇಹದ ಅಂಗಗಳು ಮಾರಾಟಕ್ಕಿವೆ (ಹೃದಯವನ್ನು ಒಳಗೊಂಡಂತೆ) ತನ್ನ ಮಕ್ಕಳಿಗೆ ವೈದ್ಯಕೀಯ ಆರೈಕೆಗಾಗಿ ಮತ್ತು ಸಾಲಗಳನ್ನು ತೀರಿಸಲು’ ಎಂದು ಬರೆಯಲಾದ ಬೋರ್ಡ್‌ವೊಂದರ ಪಕ್ಕದಲ್ಲಿ ನಿಂತಿದ್ದರು.

ಮಹಿಳೆಯ ಇಬ್ಬರು ಹಿರಿಯ ಪುತ್ರರು ರಸ್ತೆ ಅಪಘಾತಗಳಲ್ಲಿ ಗಂಭೀರವಾದ ಗಾಯಗೊಂಡಿದ್ದು, ಮಗಳು ನರಗಳಿಗೆ ಸಂಬಂಧಿಸಿ ಕಾಯಿಲೆಯಿಂದ ಬಳಲುತ್ತಿದ್ದಾಳೆ ಮತ್ತು ಅದು ಅವಳ ದೃಷ್ಟಿಗೆ ಸಹ ಅಡ್ಡಪರಿಣಾಮ ಬೀರಿದೆ.

ಪತಿಯಿಂದ ಬೇರ್ಪಟ್ಟಿರುವ ಮಹಿಳೆಯು ಕೊಚ್ಚಿ ನಗರದ ಹೊರವಲಯದಲ್ಲಿರುವ ವರಪ್ಪುಝದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಆದರೆ ಬಾಡಿಗೆ ಹೆಚ್ಚುತ್ತಿರುವ ಕಾರಣ, ಅವರು ಮನೆಯನ್ನು ಖಾಲಿ ಮಾಡಿ ನಗರದ ರಸ್ತೆಬದಿಯಲ್ಲಿನ ಕಂಟೇನರ್‌ನಲ್ಲಿ ನೆಲೆಸಿದ್ದು, ಭಾರೀ ಮಳೆಯ ನಡುವೆಯೂ ಕುಟುಂಬವು ಭಾನುವಾರ ರಾತ್ರಿಯನ್ನು ರಸ್ತೆ ಬದಿಯಲ್ಲಿಯೇ ಕಳೆದಿತ್ತು.

ತಾನು ಹಲವು ವ್ಯಕ್ತಿಗಳಿಗೆ ಲಕ್ಷಾಂತರ ರೂಪಾಯಿ ಸಾಲವನ್ನು ಮರುಪಾವತಿಸಬೇಕಿದೆ ಎಂದು ಶಾಂತಿ ಹೇಳಿಕೊಂಡಿದ್ದಾರೆ. ಮೂವರು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ತನಗೆ ಯಾವುದೇ ಕೆಲಸವನ್ನು ಅರಸಿಕೊಂಡು ಹೋಗಲು ಸಾಧ್ಯವಾಗಿಲ್ಲ. “ಇದನ್ನು ಬಿಟ್ಟರೆ(ಅಂಗಾಂಗ ಮಾರಾಟ) ನನಗೆ ಬೇರೆ ಆಯ್ಕೆಗಳಿಲ್ಲ ಆದ್ದರಿಂದ ಇಂತಹ ತೀರ್ಮಾನವನ್ನು ಕೈಗೊಳ್ಳಬೇಕಾಯ್ತು. ಇದು ನಾನು ಯಾರನ್ನೂ ದೂಷಿಸಲಿಕ್ಕಾಗಿ ಮಾಡುತ್ತಿರುವುದಲ್ಲ. ಆದರೆ ಅಸಹಾಯಕತೆಯಿಂದಾಗಿ ಹೀಗೆ ಮಾಡಬೇಕಾಯ್ತು” ಎಂದು ಅವರು ಹೇಳಿದರು.

ಈ ವಿಷಯವು ಸರ್ಕಾರದ ಗಮನಕ್ಕೆ ಬಂದಿದ್ದರಿಂದ, ಕುಟುಂಬವನ್ನು ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದೆ. ಮತ್ತು ಮಕ್ಕಳ ಚಿಕಿತ್ಸೆಯ ಸಂಪೂರ್ಣ ವೆಚ್ಚಯನ್ನು ನೋಡಿಕೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳು ಸಹ ಕುಟುಂಬದ ವೆಚ್ಚಗಳನ್ನು ಪೂರೈಸಲು ಮುಂದಾಗಿದ್ದು, ಕುಟುಂಬವು ತಮ್ಮ ಬಾಡಿಗೆ ಮನೆಗೆ ಮರಳಿದೆ.

ಉತ್ತರ ಕೇರಳ ಮೂಲದ ಕುಟುಂಬವು ಬಾಲಕಿಯ ನರ ಚಿಕಿತ್ಸೆಗಾಗಿ ಹಲವಾರು ವರ್ಷಗಳ ಹಿಂದೆ ಕೊಚ್ಚಿಗೆ ಬಂದಿತ್ತು ಎಂಬುದಾಗಿ ವರದಿಯಾಗಿದೆ. ಈ ನಡುವೆ, ಇಬ್ಬರು ಹಿರಿಯ ಪುತ್ರರು ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯತೆ ಇದೆ.