ಕೊರೋನ ಗೆದ್ದು ಬಂದ ತಾಯಿಯನ್ನು ಮನೆಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದ ಪುತ್ರ: ಮೂರು ದಿನ ಮನೆಯ ಹೊರಗೆ ಕಾದು ಕುಳಿತ ತಾಯಿ

0
726

ಸನ್ಮಾರ್ಗ ವಾರ್ತೆ

ಹೈದರಾಬಾದ್,ಸೆ.22: ತೆಲಂಗಾಣದ ನಿಝಾಮಾಬಾದ್‍ನಲ್ಲಿ ಕೊರೋನದಿಂದ ಮುಕ್ತರಾಗಿ ಗುಣಮುಖಗೊಂಡು 65 ವರ್ಷದ ಮಹಿಳೆ ಮನೆಗೆ ಬಂದಾಗ ಅವರ ಪುತ್ರ ಅವರನ್ನು ಮನೆಗೆ ಸೇರಿಸಲು ನಿರಾಕರಿಸಿದ್ದಾನೆ. ಬೇರೊಂದು ವಿವಾಹವಾದ ಬಳಿಕ ಮಹಿಳೆಯನ್ನು ಪತಿಯು ತೊರೆದು ಹೋಗಿದ್ದರು. ನಂತರ ತನ್ನ ಪುತ್ರನೊಂದಿಗೆ ಮಹಿಳೆ ವಾಸಿಸುತ್ತಿದ್ದರು.

ಆದರೆ, ಸೊಸೆಯೊಂದಿಗೆ ಸಂಬಂಧ ಸರಿದೂಗದೇ ಸುಮಾರು ಒಂದು ವರ್ಷದ ಹಿಂದೆ ಮಹಿಳೆಯನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧಾಶ್ರಮದಲ್ಲಿನ ಇತರ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಕೊರೋನ ಸೂಂಕು ದೃಢಪಟ್ಟಿತ್ತು. ನಂತರ ಚಿಕಿತ್ಸೆ ಕೊಡಿಸಿ ಗುಣಮುಖಗೊಂಡ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ವೃದ್ಧಾಶ್ರಮದಲ್ಲಿ ಖಾಯಂ ಇರಿಸಿಕೊಳ್ಳುವ ವ್ಯವಸ್ಥೆ ಆಗಲಿಲ್ಲ. ಆದುದರಿಂದ ಮಗನ ಮನೆಗೆ ಮಹಿಳೆಯನ್ನು ಕರೆತರಲಾಗಿತ್ತು. ಇದೇ ವೇಳೆ, ಮಹಿಳೆಯ ಸೊಸೆಗೆ ಮಹಿಳೆ ಮನೆಗೆ ಬರುವುದು ಗೊತ್ತಾಗಿತ್ತು. ನಂತರ ಮಗ ಮತ್ತು ಸೊಸೆ ಮನೆಗೆ ಬೀಗ ಹಾಕಿ ಹೈದರಾಬಾದಿಗೆ ಹೊರಟು ಹೋಗಿದ್ದರು. ಆದುದರಿಂದ ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೇ ಮೂರು ದಿನಗಳ ಕಾಲ ಮಹಿಳೆ ಮನೆಯ ಹೊರಗೆ ಇದ್ದು ಕೆಲವು ಸಹೃದಯರು ತಂದು ಕೊಟ್ಟ ಆಹಾರ ಸೇವಿಸಿ ದಿನದೂಡಿದ್ದಾರೆ.