ಜನವರಿಯಲ್ಲಿ ಭಾರತಕ್ಕೆ ಕೊರೋನ ವ್ಯಾಕ್ಸಿನ್: ಬೆಲೆ ರೂ.250- ಸೆರಂ ಇನ್ಸ್ಟಿಟ್ಯೂಟ್

0
420

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.24: ದೇಶದಲ್ಲಿ ಜನವರಿಯಲ್ಲಿ ಕೊರೋನ ವ್ಯಾಕ್ಸಿನ್ ಲಭಿಸಲಿದೆ ಎಂದು ಸೆರಂ ಇನ್ಸಿಟಿಟ್ಯೂಟ್ ತಿಳಿಸಿದ್ದು ಅಥಾರಿಟಿಯ ಅನುಮತಿ ಸಿಕ್ಕಿದರೆ ಸೆರಂ ಲೈನ್ಸೆಸ್ ಪಡೆಯಲಿದೆ. ಪರೀಕ್ಷೆ ಮುಗಿಯುವುದರೊಂದಿಗೆ ತುರ್ತು ಬಳಕೆಗೆ ಲೈಸೆನ್ಸ್ ಸಿಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಭಾರತೀಯರಿಗೆ ಪ್ರಥಮ ಆದ್ಯತೆಯಾಗಿದ್ದು ಈ ವರೆಗೆ 4 ಕೋಟಿ ಡೋಸ್ ವ್ಯಾಕ್ಸಿನ್ ತಯಾರಿದೆ. ಸರಕಾರದ ಅನುಮತಿ ಸಿಕ್ಕರೆ ಹತ್ತು ಕೋಟಿ ಡೋಸ್ ವ್ಯಾಕ್ಸಿನ್ ಜನವರಿಯಲ್ಲಿ ಲಭ್ಯವಾಗಲಿದೆ. ಸರಕಾರಕ್ಕೆ ಡೋಸ್‍ಗೆ 250 ರೂಪಾಯಿಗೆ ವಿತರಿಸಲಾಗುವುದು ಎಂದು ಸೆರಂ ಇನ್ಸಿಟಿಟ್ಯೂಟಿನ ಸಿಇಒ ಆದಾರ್ ಪೂನವಾಲ ಎನ್‍ಡಿಟಿವಿಗೆ ತಿಳಿಸಿದ್ದಾರೆ. ಪ್ರಥಮತಃ ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುವುದು.

ವ್ಯಾಕ್ಸಿನ್ ವಿತರಣೆಗೆ ಸಂಬಂಧಿಸಿದಂತೆ ಪ್ರಧಾನಿಯವರು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತಿದ್ದಾರೆ. ಆಕ್ಸಫರ್ಡ್‌ ಯುನಿವರ್ಸಿಟಿ, ಆಸ್ಟ್ರಸೆನಕ್ ಸೇರಿ ತಯಾರಿಸಿದ ಕೊವಿಶೀಲ್ಡ್ ವ್ಯಾಕ್ಸಿನ್ ಶೇ. 90ರಷ್ಟು ಯಶಸ್ವಿಯಾಗಿದೆ ಎಂದು ತಯಾರಕರು ಕಳೆದ ದಿವಸ ಹೇಳಿದ್ದರು. ಬ್ರಿಟನ್, ಬ್ರೆಝಿಲ್‍ನಲ್ಲಿ ನಡೆದ ವ್ಯಾಕ್ಸಿನ್ ಪರೀಕ್ಷೆಯಲ್ಲಿ ಅಡ್ಡ ಪರಿಣಾಮಗಳಿಲ್ಲದೇ ಶೇ.90ರಷ್ಟು ಫಲಪ್ರದವಾಗಿದೆ.

ಆಕ್ಸಫರ್ಡ್-ಆಸ್ಟ್ರಸೆನಕದ ವ್ಯಾಕ್ಸಿನ್ ಮೊದಲು ಅರ್ಧ ಡೋಸ್ ಮತ್ತು ಒಂದು ತಿಂಗಳ ನಂತರ ಸಂರ್ಪೂಣ ವ್ಯಾಕ್ಸಿನ್ ನೀಡಿದಾಗ ಶೇ.90ರಷ್ಟು ಯಶಸ್ವಿಯಾಗಿದೆ. ಇನ್ನೊಂದು ಡೊಸೇಜ್‍ನಲ್ಲಿ ಶೇ.62ರಷ್ಟು ಫಲಪ್ರದವಾಗಿದೆ. ಶೇ.70 ಸರಕಾರಿ ಯಶಸ್ಸು ಸಿಕ್ಕಿದೆ ಎಂದು ತಯಾರಕು ತಿಳಿಸಿದರು.

ವಿಶ್ವದ ಅತ್ಯಂತ ದೊಡ್ಡ ವ್ಯಾಕ್ಸಿನ್ ತಯಾರಕರಾದ ಪುಣೆಯ ಸೆರಂ ಇನ್ಸಿಟಿಟ್ಯೂಟ್ ಆಕ್ಸ‌ಫರ್ಡ್ ವ್ಯಾಕ್ಸಿನ್ ಪರೀಕ್ಷೆಯಲ್ಲಿ ದೇಶದ ಪಾಲುದಾರ ಆಗಿದೆ. ಬಿಲ್ ಗೇಟ್ಸ್ ಫೌಂಡೇಶನ್‍ನ ಗವಿ ವ್ಯಾಕ್ಸಿನ್ ಸಖ್ಯದ ಬೆಂಬಲವೂ ಇವರಿಗಿದೆ.