ವ್ಯಕ್ತಿಯ ಹಕ್ಕಿನ ಮೇಲೆ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ: ಯುಪಿ ಸರಕಾರದ ‘ಲವ್‍ ಜಿಹಾದ್’ ಕಾನೂನು ನಿರ್ಮಾಣದ ವಿರುದ್ಧ ಅಲಹಾಬಾದ್ ಹೈಕೋರ್ಟು ತೀರ್ಪು

0
980

ಸನ್ಮಾರ್ಗ ವಾರ್ತೆ

ಲಕ್ನೊ,ನ.24: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರದ ‘ಲವ್‍ ಜಿಹಾದ್’ ವಿರುದ್ಧ ಕಾನೂನು ನಿರ್ಮಾಣದ ವಿರುದ್ಧ ಅಲಹಾಬಾದ್ ಹೈಕೋರ್ಟು ವ್ಯಕ್ತಿಯ ಹಕ್ಕಿನ ಮೇಲೆ ಸರಕಾರಕ್ಕೆ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಮತಾಂತರದ ವಿರುದ್ಧ ಕಾನೂನು ನಿರ್ಮಾಣ ಸರಿಯಲ್ಲ ಎಂದು ಕೋರ್ಟು ತಿಳಿಸಿದೆ ಎಂದು ಕಾನೂನು ವೆಬ್‍ಸೈಟ್ ಲೈವ್ ಲಾ ವರದಿ ಮಾಡಿದೆ.

ಅಲಹಾಬಾದ್ ಹೈಕೋರ್ಟಿನ ವಿಭಾಗೀಯ ಪೀಠ, ಮದುವೆಗಾಗಿ ಮತಾಂತರ ಸರಿಯಲ್ಲ ಎಂಬ ಏಕ ಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿದೆ. ಪ್ರಾಪ್ತ ವಯಸ್ಕ ವ್ಯಕ್ತಿಗಳು ಅವರ ಜೀವನ ಸಂಗಾತಿಯು ಯಾರಾಗಿರಬೇಕೆಂದು ತೀರ್ಮಾನಿಸುವ ಅವರ ಜೊತೆಗೆ ಜೀವಿಸುವ ಹಕ್ಕನ್ನು ಹೊದಿರುತ್ತಾರೆ ಎಂದು ಕೋರ್ಟು ತಿಳಿಸಿದೆ.

ಉತ್ತರ ಪ್ರದೇಶ ಗೃಹ ಇಲಾಖೆಯ ನಿರ್ದೇಶದಂತೆ ಉತ್ತರಪ್ರದೇಶ ಪೊಲೀಸರು ತನಿಖಿಸಿದ ‘ಲವ್ ಜಿಹಾದ್’ ಪ್ರಕರಣಗಳಲ್ಲಿ ಸಂಚು, ವಿದೇಶಿ ಹಣಕಾಸು ನೆರವು ಪತ್ತೆಯಾಗಿಲ್ಲ. ಕಾನ್ಪುರದಲ್ಲಿ ನಡೆದ 22 ಮಿಶ್ರ ವಿವಾಹಗಳು ಲವ್‍ ಜಿಹಾದ್ ಅಲ್ಲ ಎಂದು ತನಿಖಾ ವರದಿಯಲ್ಲಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶವಲ್ಲದೆ ಬಿಜೆಪಿ ಸರಕಾರ ಇರುವ ಕರ್ನಾಟಕ, ಹರಿಯಾಣ, ಮಧ್ಯಪ್ರದೇಶ ರಾಜ್ಯಗಳಲ್ಲಿ ಲವ್‍ ಜಿಹಾದ್ ವಿರುದ್ಧ ಕಾನೂನು ನಿರ್ಮಿಸಿ ನಿಷೇಧಿಸಲಾಗುವುದು ಎಂದು ಘೋಷಿಸಿದ್ದವು.