ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಸರಯೂ ನದಿ ತೊರೆ, 200 ಅಡಿ ಆಳದಷ್ಟು ಮರಳು ಪತ್ತೆ- IIT ಸಹಾಯ ಕೋರಿದ ಮಂದಿರ ನಿರ್ಮಾಣ ಟ್ರಸ್ಟ್

0
890
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕಾಗಿ ಅಡಿಪಾಯ ಹಾಕಲು ಗುರುತಿಸಲಾಗಿದ್ದ ಪ್ರದೇಶದ ಕೆಳಭಾಗದಲ್ಲಿ ಸರಯೂ ನದಿ ತೊರೆ ಇದ್ದು, 200 ಅಡಿ ಆಳದಷ್ಟು ಮರಳು ಪತ್ತೆಯಾಗಿದೆ. ಇದು ಉದ್ದೇಶಿತ ಯೋಜನಾ ಸಾಧ್ಯತೆಗೆ ಅಡ್ಡಿ ಉಂಟಾಗಿದೆ. ಈ ಅಡ್ಡಿಯ ಹೊರತಾಗಿಯೂ ದೇವಾಲಯ ನಿರ್ಮಿಸುವುದಕ್ಕಾಗಿ ಪ್ರಸ್ತಾವಿತ ಅಡಿಪಾಯಕ್ಕೆ ಪರ್ಯಾಯವಾ್ ಉತ್ತಮ ಮಾದರಿಗಳು ಹಾಗೂ ಯೋಜನೆಗಳನ್ನು ನೀಡುವಂತೆ ರಾಮ ಮಂದಿರ ಟ್ರಸ್ಟ್ ಐಐಟಿ ಸಹಾಯ ಕೇಳಿದೆ ಎಂಬುದಾಗಿ ವರದಿಯಾಗಿದೆ.

ದೇವಾಲಯ ನಿರ್ಮಾಣದ ಸಮಿತಿಯ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಇದಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದು, ದೇವಾಲಯ ನಿರ್ಮಾಣಕ್ಕಾಗಿ ಈಗ ಸಿದ್ಧವಾಗಿರುವ ಅಡಿಪಾಯದ ಮಾದರಿ ಕಾರ್ಯಸಾಧುವಲ್ಲ ಎಂಬುದು ಸಭೆಯಲ್ಲಿ ಸ್ಪಷ್ಟವಾಗಿದೆ. ಬಲಿಷ್ಠ ಅಡಿಪಾಯಕ್ಕಾಗಿ ಬೇರೆಯ ಮಾದರಿಯನ್ನು ಸೂಚಿಸುವಂತೆ ಐಐಟಿಗಳಿಗೆ ಮನವಿ ಮಾಡಲಾಗಿದೆ.

ರಾಮ ಮಂದಿರವನ್ನು 2023ಕ್ಕೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಈಗ ನದಿ ತೊರೆ ಎದುರಾಗಿರುವುದರಿಂದ ದೇವಾಲಯದ ನಿರ್ಮಾಣಕಾರ್ಯವು ಅಲ್ಪ ವಿಳಂಬವನ್ನು ಕಾಣಲಿದೆ ಎಂಬುದಾಗಿ ವರದಿಯಾಗಿದೆ.