ಆಪ್ ನಾಯಕರ ಮೇಲೆ ಬಿಜೆಪಿ ಪದೇ ಪದೇ ದಾಳಿ ನಡೆಸುತ್ತಿದೆ: ರಾಘವ್ ಚಡ್ಡಾ

0
365

ಸನ್ಮಾರ್ಗ ವಾರ್ತೆ

ನವದೆಹಲಿ: “ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರವರು ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ಮಾತನಾಡಿದಾಗಿನಿಂದ ಆಪ್‌ನ(AAP) ಚುನಾಯಿತ ಪ್ರತಿನಿಧಿಗಳ ಮೇಲೆ ಬಿಜೆಪಿ ಪದೇ ಪದೇ ದಾಳಿಗಳು ನಡೆಯುತ್ತಿವೆ” ಎಂದು ಎಎಪಿ ಹಿರಿಯ ಮುಖಂಡ ರಾಘವ್ ಚಾಡ್ಡಾ ಹೇಳಿದರು.

“ಮೊದಲು ಅವರು ಸಿಎಂ ಕೇಜ್ರಿವಾಲ್‌ರನ್ನು ಪೊಲೀಸರಿಂದ ಗೃಹಬಂಧನಕ್ಕೆ ಒಳಪಡಿಸಿದರು. ತದನಂತರ, ಬಿಜೆಪಿ ಬೆಂಬಲಿಗರು ಮತ್ತು ಮುಖಂಡರು ಉಪಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಜಲ ಮಂಡಳಿಯ ಮೇಲೆ ದಾಳಿ ಮಾಡಿದರು” ಎಂದು ಅವರು ಆರೋಪಿಸಿದರು.