ಸನ್ಮಾರ್ಗ ಕುರ್ ಆನ್ ಕ್ವಿಝ್ ಸ್ಪರ್ಧೆ : ಮುನೀರಾ ತೊಕ್ಕೊಟ್ಟು ಪ್ರಥಮ

0
1426

ಮಂಗಳೂರು: ಸನ್ಮಾರ್ಗ ವಾರಪತ್ರಿಕೆಯು ರಮಝಾನ್ ವಿಶೇಷಾಂಕದಲ್ಲಿ ಕುರ್ ಆನ್ ಕ್ವಿಝ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಪ್ರಯುಕ್ತ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಪತ್ರಿಕೆಯ ಪ್ರಧಾನ ಕಚೇರಿಯಾದ ಹಿದಾಯತ್ ಸೆಂಟರ್ ನಲ್ಲಿ ನಡೆಯಿತು.

ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು  ಕವಿ ಮತ್ತು ಖ್ಯಾತ ಕಾರ್ಯಕ್ರಮ ನಿರೂಪಕ ಬಿ. ಎ. ಮುಹಮ್ಮದಲಿ ಅವರ ಸೊಸೆ  ಮುನೀರಾ ತೊಕ್ಕೊಟ್ಟು(5000₹ ನಗದು & ಪ್ರಮಾಣಪತ್ರ) ಪಡೆದಿದ್ದು,
ದ್ವಿತೀಯ ಸ್ಥಾನವನ್ನು ಶಮ್ರಾ ಇಸ್ಹಾಕ್ ಕಲ್ಲಾಪು(3000 ₹ ನಗದು & ಪ್ರಮಾಣಪತ್ರ),
ತೃತೀಯ ಸ್ಥಾನವನ್ನು ಫಾತಿಮತ್ ಝಬೀನ, ಬೆಂಗ್ರೆ ಕಸ್ಬಾ(2000₹ ನಗದು & ಪ್ರಮಾಣಪತ್ರ) ಪಡೆದುಕೊಂಡರು.

ಅಲ್ಲದೇ ಉಮೈರಾ ಬಾನು ಬಂಟ್ವಾಳ, ಅಬ್ದುಲ್ ರಝಾಕ್ ಹಕೀಂ ಬೆಂಗ್ರೆ ಕಸ್ಬಾ, ಜುವೈರಿಯಾ ಬೆಂಗಳೂರು, ನಸೀಹಾ ಫಾತಿಮಾ ಬಂಟ್ವಾಳ, ಝರೀನಾ ಬೇಗಂ ಉಳ್ಳಾಲ, ಆಮೀನಾ ಉಡುಪಿ, ಇಸ್ಮಾಯೀಲ್ ಶಿವಮೊಗ್ಗ, ಅಫ್ಸಾನ ಯಾಸ್ಮೀನ್ ಮೂಡಬಿದ್ರೆ, ಮುಹಮ್ಮದ್ ಬಿಲಾಲ್ ಕಂಕನಾಡಿ, ಇರ್ಫಾನ್ ಕಲ್ಲಂಗಳ, ವಿಟ್ಲ ಇವರು ಸಮಾಧಾನಕರ ಬಹುಮಾನವನ್ನು ಪಡೆದರು.
ಕ್ವಿಝ್ ಸ್ಪರ್ಧೆಯಲ್ಲಿ ಶೇಕಡಾ 85%ಕ್ಕಿಂತಲೂ ಹೆಚ್ಚು ಅಂಕ ಪಡೆದ 84 ಸ್ಪರ್ಧಾಳುಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇರಳಕಟ್ಟೆಯ ಕಣಚೂರು ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸೈನ್ಸ್ ನ ಪ್ರಾಂಶುಪಾಲರಾದ ಪ್ರೊಫೆಸರ್ ಇಕ್ಬಾಲ್ ಅಹ್ಮದ್ ಯು.ಟಿ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ಸ್ಮಾರ್ಟ್ ಫೋನ್, ಇಂಟರ್ನೆಟ್ ನಲ್ಲಿ ಮುಳುಗಿರುವವರ ಮಧ್ಯೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಂತ ವಿವೇಚನಾ ಶಕ್ತಿಯನ್ನು ಹೊಂದಬೇಕು. ಆ ಮೂಲಕ ಸಮಾಜದ ಬೆಳವಣಿಗೆಯಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕೆಂದು ತಿಳಿಸಿದರು.

ಇದೇ ವೇಳೆ ನಮ್ಮ ಟಿವಿ ಹೋಲಿ‌ ರಮಝಾನ್ ವಿಶೇಷ ಕಾರ್ಯಕ್ರಮದಲ್ಲಿ ನಡೆಸಿದ ಕ್ವಿಝ್ ಸ್ಪರ್ಧೆಯ ಲಕ್ಕಿ ವಿನ್ನರ್ ಬಹುಮಾನವನ್ನು ಕೂಡ ನೀಡಲಾಯಿತು.
ಲಕ್ಕಿ ವಿನ್ನರ್ ಆದ ಶಮೀಮಾ ಮರ್ಯಮ್, ಮಂಚಿಯವರಿಗೆ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ನ ಮಂಗಳೂರು ಬ್ರಾಂಚ್ ಮ್ಯಾನೇಜರ್ ಅಝ್ಮಲ್ ರವರು ನಗದು ಹಾಗೂ ವಿಶೇಷ ಉಡುಗೊರೆಯನ್ನು ಆಸಿಫ್ ಇಕ್ಬಾಲ್ ಬಜಾಲ್ ರವರು ನೀಡಿದರು.

ಈ ಸಂದರ್ಭದಲ್ಲಿ ಸನ್ಮಾರ್ಗ ಕುರ್ ಆನ್ ಸ್ಪರ್ಧೆಯ ಪ್ರಶ್ನೆ ಪತ್ರಿಕೆ ತಯಾರಿ ಹಾಗೂ ತಿದ್ದುಪಡಿಯನ್ನು ನಡೆಸಿದ ಮಿಸ್ಬಾ ಖಾನಂರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನ ಸದಸ್ಯರಾದ ಜನಾಬ್ ಕೆ.ಎಂ. ಶರೀಫ್ ಸಮಾರೋಪ ನುಡಿಗಳನ್ನಾಡಿದರು.

ಸನ್ಮಾರ್ಗ ಸಂಪಾದಕರಾದ ಏ.ಕೆ. ಕುಕ್ಕಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಅಧ್ಯಕ್ಷರಾದ ಮುಹಮ್ಮದ್ ಕುಂಞಿ, ಸನ್ಮಾರ್ಗ ವಾರಪತ್ರಿಕೆಯ ಪ್ರಕಾಶಕರಾದ ಎಂ.ಸಾದುಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಸಂಪಾದಕರಾದ ಸಲೀಂ ಬೋಳಂಗಡಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.