ಹಿಂದಿನ ಸರಕಾರಗಳು ಪ್ರಸಾರ ಭಾರತಿಯನ್ನು ದುರ್ಬಲಗೊಳಿಸಿವೆ, ಮೋದಿ ಸರಕಾರ ಅದನ್ನು ಕೊಲ್ಲಲು ಬಯಸಿದೆ

0
848

ಆಂಗ್ಲ ಮೂಲ: ದ ಪ್ರಿಂಟ್
ಬರಹ: ಅಮೃತಾ ನಾಯಕ್ ದತ್ತಾ

ಅನುವಾದ: ಆಯಿಷತುಲ್ ಅಫೀಫ

ಸಾರ್ವಜನಿಕ ಸೇವೆಯ ಪ್ರಸಾರಕವಾಗಿ “ಪರಿಣಾಮಕಾರಿಯಾಗಿಲ್ಲ ” ಎಂಬ ಆಧಾರದ ಮೇಲೆ ಪ್ರಸಾರ ಭಾರತಿಯನ್ನು ವಿಸರ್ಜಿಸಲು ಮೋದಿ ಸರ್ಕಾರವು ಯೋಚಿಸುತ್ತಿದೆ.
ಪ್ರಸಾರ ಭಾರತೀಯ ಅಡಿಯಲ್ಲಿ ದೂರದರ್ಶನ (ಡಿಡಿ) ಮತ್ತು ಆಲ್ ಇಂಡಿಯಾ ರೇಡಿಯೋ (ಎಐಆರ್) ವನ್ನು ನಿರ್ವಹಿಸಲು 2019 ರ ನಂತರ ಸಾರ್ವಜನಿಕ ವಲಯ ಕಂಪೆನಿಗಳಾಗಿ ಪರಿವರ್ತನೆಯೂ ಸೇರಿದಂತೆ ಹೊಸ ಮಾದರಿಗಳನ್ನು ಅನ್ವೇಷಿಸುತ್ತಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಪ್ರಸಾರ ಭಾರತೀಯ ಮೇಲೆ ನಿಯಂತ್ರಣ ಸ್ಥಾಪಿಸಲು  ಸರಕಾರ ಹೊರಟಿದೆಯೇ ಎಂಬ ಪ್ರಶ್ನೆಯನ್ನು ಎಂದು ಹಾಲಿ ಮತ್ತು ಮಾಜಿ ಅಧಿಕಾರಿಗಳು ಎತ್ತಿದ್ದಾರೆ.
ಹಿರಿಯ ಪ್ರಸಾರ ಭಾರತಿ ಅಧಿಕಾರಿಯು ದಿ ಪ್ರಿಂಟ್ ಗೆ ಹೇಳಿದ ಪ್ರಕಾರ, ಹಿಂದಿನ ಸರಕಾರಗಳು ಪ್ರಸಾರ ಭಾರತಿ (ಭಾರತ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ) ಕಾಯಿದೆ , 1990 ರ ನಿಯಮಗಳನ್ನು ಜಾರಿಗೊಳಿಸಿಲ್ಲ, ಅದು ಕೇವಲ ಲಿಖಿತ ರೂಪಕ್ಕೆ ಮಾತ್ರ ಸೀಮಿತವಾಗಿದೆ, ಸಾರ್ವಜನಿಕ ಪ್ರಸಾರ ಘಟಕವನ್ನು ಸರಕಾರದ ನಿಯಂತ್ರಣದಿಂದ ಬಿಡಬೇಕಾಗಿತ್ತು.

ಉದಾಹರಣೆಗೆ, ಪ್ರಸಾರ ಭಾರತಿ ನೇಮಕಾತಿಗಳನ್ನು ಮಾಡಲು ಒಂದು ನೇಮಕಾತಿ ಮಂಡಳಿಯನ್ನು ಹೊಂದಿರಬೇಕು ಎಂದು ಕಾಯಿದೆ ಆಜ್ಞಾಪಿಸುತ್ತದೆ. ಆದರೆ ಅದು ಇಂದಿಗೂ ಹೊಂದಿಲ್ಲ . ”ಆದ್ದರಿಂದ, ನೇಮಕಾತಿಗಳನ್ನು ಪ್ರಸಾರ ಭಾರತಿ ಬೋರ್ಡ್ ನೋಡಿಕೊಳ್ಳುತ್ತಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾರ್ವಜನಿಕ ಪ್ರಸಾರಕದ ಅಡಿಯಲ್ಲಿರುವ ದೂರದರ್ಶನ್ (ಡಿಡಿ) ಮತ್ತು ಆಲ್ ಇಂಡಿಯಾ ರೇಡಿಯೋ (ಎಐಆರ್) ಈ ಎರಡು ಸಂಸ್ಥೆಗಳ ನಿರ್ದೇಶಕರಿಗೆ ಸಾರ್ವಜನಿಕ ಪ್ರಸಾರಕಗಳು ಪರ್ಯಾಯವಾಗಬಾರದು ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.

ಪ್ರಸಾರ ಭಾರತಿಯಿಂದ ದೂರವಿಡುವ ಪ್ರಸ್ತಾವನೆಯು ಕಾನೂನು ದೃಷ್ಟಿಕೋನದಿಂದ ಪ್ರಶ್ನಾರ್ಹವಾಗಿದೆ ಎಂದು ಪ್ರಸಾರಾ ಭಾರತಿಯಾ ಮಾಜಿ ಸಿಇಒ ಜವಹರ್ ಸಿರ್ಕಾರ್ ಅವರು ದಿ ಪ್ರಿಂಟ್ ಗೆ ತಿಳಿಸಿದರು. ”ಪ್ರಸಾರ ಭಾರತಿ ಕಾಯ್ದೆಯು ದಾನಕ್ಕೆ ಸಂಬಧಿಸಿದಲ್ಲ. ಈ ಪ್ರಸ್ತಾವನೆಯು ಆರೋಗ್ಯವಂತ ಹುಡುಗನನ್ನು ದುರ್ಬಲಗೊಳಿಸುತ್ತದೆ ಮತ್ತು ನಂತರ ಆರೋಗ್ಯಕರ ಹುಡುಗನಂತೆಯೇ ವರ್ತಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದಂತೆ “ಎಂದು ಅವರು ಹೇಳಿದ್ದಾರೆ.

ಪ್ರಸಾರ ಭಾರತಿ ಮೇಲೆ ದಯೆ ತೋರುತ್ತಿದ್ದೇವೆಂದು ಅವರು ಭಾವಿಸುತ್ತಿದ್ದಾರೆ ಮತ್ತು ಇದು ಅಧಿಕಾರಶಾಹಿ ಹಸ್ತಕ್ಷೇಪದ ಕೆಟ್ಟ ರೂಪವನ್ನು ತೋರಿಸುತ್ತಿದೆ. ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋವನ್ನು ಸಾರ್ವಜನಿಕ ವಲಯದ ಉದ್ಯಮಗಳ ಅಡಿಯಲ್ಲಿ ತರುವುದು ಅತ್ಯಂತ ಭಯಾನಕ ಪ್ರಸ್ತಾಪ. ಏಕೆಂದರೆ ಇದು ಸರ್ಕಾರದ ನೇರ ನಿಯಂತ್ರಣಕ್ಕೊಳಪಡುತ್ತದೆ” ಎಂದು ಸಿರ್ಕಾರ್ ಹೇಳಿದ್ದಾರೆ.

ಮಾಜಿ ವಾರ್ತಾ ಮತ್ತು ಪ್ರಸಾರ ಮಂತ್ರಿ ಮನೀಶ್ ತಿವಾರಿ, ಪ್ರಸಾರ ಭಾರತಿಯನ್ನು ವಿಸರ್ಜಿಸುವ ಸಮಿತಿಯ ತೀರ್ಮಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

”ಪ್ರಸಾರ ಭಾರತಿಯು ಭಾರತದ ಪ್ರಸಾರ ನಿಗಮ ಉದಾರೀಕರಣ ಸಂಘರ್ಷದ ಕೂಸು. 1990 ರಲ್ಲಿ ಏಕ ಮಾತ್ರ ಚಾನೆಲ್ ಡಿ ಡಿ ಆಗಿದ್ದಾಗ ಈ ಕಾಯಿದೆಯನ್ನು ರಚಿಸಲಾಗಿತ್ತು. ಆದರೆ 1992 ರಲ್ಲಿ, ಭಾರತೀಯ ಖಾಸಗಿ ಚಾನೆಲ್ ಗಳಿಗೆ ಆವಕಾಶವನ್ನು ತೆರೆಯಲಾಯಿತು “ಎಂದು ಅವರು ಹೇಳಿದರು.

ಸಾರ್ವಜನಿಕ ಪ್ರಸಾರವನ್ನು ಸುಧಾರಿಸಲು ಹಲವು ಪ್ರಯತ್ನಗಳು ನಡೆದಿವೆ, ಈ ಪ್ರಕ್ರಿಯೆಯೊಂದಿಗೆ ಕಾರ್ಯ ನಿರ್ವಹಿಸುವ ಅನೇಕ ಸಮಿತಿಗಳು ,DD ಮತ್ತು AIR ಗೆ ಸ್ವಾಯತ್ತತೆಯನ್ನು ಖಾತರಿಪಡಿಸುವ ಒಂದು ಪ್ರಮುಖ ಅಂಶವನ್ನು ಪ್ರತಿಪಾದಿಸುತ್ತದೆ.

ಎರಡೂ ನಿಗಮಗಳ ಸ್ವಾಯತ್ತತೆಗಾಗಿ ಮೊದಲು 1964 ರಲ್ಲಿ ಅಶೋಕ್ ಚಂದ ಸಮಿತಿಯಿಂದ ಪ್ರಸ್ತಾಪಿಸಲಾಯಿತು. ಪ್ರಸಾರ ಮತ್ತು ಮಾಹಿತಿ ಮಾಧ್ಯಮದ ಸಮಿತಿ’ ಇಲಾಖೆಯ ನಿಯಮಗಳು ಮತ್ತು ಕಟ್ಟುಪಾಡುಗಳ ಅಡಿಯಲ್ಲಿ ಪ್ರಸರಣವು ಏಳಿಗೆಯಾಗುವುದಿಲ್ಲ ಎಂದು ಒತ್ತಿಹೇಳಿತು ಮತ್ತು ಸರ್ಕಾರಿ ಪ್ರಕ್ರಿಯೆಯಿಂದ ಆಲ್ ಇಂಡಿಯಾ ರೇಡಿಯೋವನ್ನು ಮುಕ್ತಗೊಳಿಸಲು ಸಾಂಸ್ಥಿಕ ಬದಲಾವಣೆಯನ್ನು ಶಿಫಾರಸು ಮಾದಲಾಗಿತ್ತು.

ರೇಡಿಯೋ ಮತ್ತು ಟಿವಿ ಚಾಲನೆಗಾಗಿ ಎರಡು ಸ್ವಾಯತ್ತ ನಿಗಮಗಳನ್ನು ರಚಿಸುವಂತೆ ಸಮಿತಿಯು ಶಿಫಾರಸು ಮಾಡಿತ್ತು

ತರುವಾಯ, 1975 ರಲ್ಲಿ ತುರ್ತು ಪರಿಸ್ಥಿತಿಯ ನಂತರ ವೆರ್ಗಿಸ್ ಸಮಿತಿಯು ಸ್ಥಾಪನೆಯಾಯಿತು, ಸಾರ್ವಜನಿಕ ನಿಗಮದ ಸ್ವಾಯತ್ತತೆಯನ್ನು ಮತ್ತು ಸರಕಾರದ ನಿಯಂತ್ರಣದಿಂದ ಅದರ ಸ್ವಾತಂತ್ರ್ಯವು ಸಂವಿಧಾನದಲ್ಲಿ ಭದ್ರವಾಗಿರಬೇಕೆಂದು ಒತ್ತಿಹೇಳಿತು.

ಇತರ ಸಮಿತಿಗಳಾದ ನಿತೇಶ್ ಸೇನ್ ಗುಪ್ತಾ ಸಮಿತಿ ಮತ್ತು ಶುನು ಸೇನ್ ಸಮಿತಿ 1995 ಮತ್ತು 2000 ರಲ್ಲಿ ಕ್ರಮವಾಗಿ ಸ್ಥಾಪನೆಯಾದವು ಮತ್ತು ಭಾರತದ ಸಾರ್ವಜನಿಕ ಸೇವಾ ಪ್ರಸಾರಕರಿಗೂ ಸಹ ಸ್ವಾಯತ್ತತೆಯನ್ನು ನೀಡಿತು.

ಸೇನ್ ಗುಪ್ತಾ ಸಮಿತಿಯು ವಿಕೇಂದ್ರೀಕರಣವನ್ನು ಮತ್ತು ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾದೇಶಿಕ ಕೇಂದ್ರಗಳಿಗೆ ಹೆಚ್ಚಿನ ಅಧಿಕಾರವನ್ನು ಹಸ್ತಾಂತರಿಸುವ ಶಿಫಾರಸು ಮಾಡಿದೆ.

ಸಾರ್ವಜನಿಕ ಸೇವಾ ಪ್ರಸಾರಕಾರರು ಮೂರು ಮುಖ್ಯ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿರಬೇಕು – ರಚನೆ, ಹಣಕಾಸು ಮತ್ತು ಸಿಬ್ಬಂದಿ ನೀತಿಗಳೆಂದು ಸೇನ್ ಸಮಿತಿ ಹೇಳಿದೆ. .ತಾವು ಸ್ವಾಯತ್ತತೆಯ ತತ್ವಕ್ಕೆ ವಿರುದ್ಧವಾಗಿರುವುದರಿಂದ ಪ್ರಸಾರ ಭಾರತಿಗೆ ಎಲ್ಲ ರೀತಿಯ ಸ್ವಾಯತ್ತತೆಯನ್ನು ವಿರೋಧಿಸಿತು .

ಇತ್ತೀಚಿನ, 2014ರ ಸ್ಯಾಮ್ ಪಿಟ್ರೋಡಾ ಕಮಿಟಿಯು, ಪ್ರಸಾರ ಭಾರತಿಯ ಹಣಕಾಸಿನ ಮೂಲಗಳನ್ನು ವೈವಿಧ್ಯೀಕರಣಗೊಳಿಸುವ ಮತ್ತು ಖಾಸಗಿ ಹೂಡಿಕೆಗಾಗಿ ಬಾಗಿಲು ತೆರೆಯಲು ಶಿಫಾರಸು ಮಾಡಿದೆ. ಪ್ರಸಾರ ಭಾರತಿಯ ಸ್ವಾಯತ್ತತೆಯನ್ನು ಹೆಚ್ಚಿಸುವಂತೆ ಸಮಿತಿಯು ಸಲಹೆ ನೀಡಿದೆ, ಕಾಯಿದೆಯು ಸಾರ್ವಜನಿಕ ಪ್ರಸಾರದ ಸ್ವಾತಂತ್ರ್ಯವನ್ನು ತಡೆಗಟ್ಟುತ್ತದೆ ಎಂದು ಸೂಚಿಸಿದೆ. ಉದಾಹರಣೆಗಾಗಿ, ಪ್ರಸಾರ ಭಾರತಿಯ ಹಲವು ಆಡಳಿತ-ತಯಾರಿಕೆಯ ಅಧಿಕಾರಗಳು ಸರ್ಕಾರದ ಅನುಮೋದನೆಯ ಅಗತ್ಯವಿರುತ್ತದೆ.