ಐಪಿಎಲ್ ಪಾರ್ಟಿಗಳಲ್ಲಿ ಡ್ರಗ್ಸ್| ಕ್ರಿಕೆಟ್ ತಾರೆಯರ ಪತ್ನಿಯರಿಂದ ಕೊಕೇನ್ ಸೇವನೆ: ಆರೋಪ

0
458

ಸನ್ಮಾರ್ಗ ವಾರ್ತೆ

ಮುಂಬೈ,ಸೆ.25: ಬಾಲಿವುಡ್‍ನಲ್ಲಿ ತೀವ್ರಗತಿಯಲ್ಲಿ ಹರಡಿಕೊಂಡಿರುವ ಮಾದಕ ದ್ರವ್ಯ ಪ್ರಕರಣದ ಬಗ್ಗೆ ಪ್ರತಿಯೊಬ್ಬರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು, ಕ್ರಿಕೆಟ್‍ನಲ್ಲಿಯೂ ಕೊಕೇನ್ ಬಳಕೆಯಾಗುತ್ತಿರುವುದು ಬಯಲಾಗಿದೆ.

ಈ ಕುರಿತು ನಟಿ ಶರ್ಲಿನ್ ಚೋಪ್ರಾ ನ್ಯೂಸ್ ಚ್ಯಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ದೊಡ್ಡ ಕ್ರಿಕೆಟಿಗರು ಮತ್ತು ಸೂಪರ್ ಸ್ಟಾರ್‌ಗಳ ಪತ್ನಿಯರು ಡ್ರಗ್ಸ್ ಸೇವಿಸುತ್ತಾರೆ ಎಂದಿರುವುದು ತೀವ್ರ ವಿವಾದವಾಗಿದೆ. ಪತ್ನಿಯರು ವೈಟ್ ಪೌಡರ್ ಅಥವಾ ಕೊಕೇನ್ ಅನ್ನು ಸೇವಿಸುತ್ತಾರೆ ಎಂದು ಶರ್ಲಿನ್ ಹೇಳಿದ್ದಾರೆ.

ಒಮ್ಮೆ ಕೊಲ್ಕತಾ ಕೆಕೆಆರ್ ಮ್ಯಾಚ್ ನೋಡಲು ಹೋಗಿದ್ದೆ. ಪಂದ್ಯದ ಬಳಿಕ ಪಾರ್ಟಿ ಇತ್ತು. ನಾನು ಕೂಡ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದೆ. ಅಲ್ಲಿ ಕ್ರಿಕೆಟರ್ಸ್ ಮತ್ತು ಬಾಲಿವುಡ್ ಸ್ಟಾರ್ಸ್‍‌ಗಳು ದಮ್ ಹೊಡೆಯುತ್ತಿದ್ದರು.

ಈ ನಡುವೆ ನಾನು ವಾಶ್‍ರೂಮ್‍ಗೆ ಹೋದಾಗ ಅಲ್ಲಿ ನಡೆಯುತ್ತಿದ್ದುದನ್ನು ನೋಡಿ ದಂಗಾದೆ. ಶರ್ಲಿನ್ ಯಾವುದೇ ಕ್ರಿಕೆಟರ್ಸ್ ಪತ್ನಿಯ ಹೆಸರು ಹೇಳಿಲ್ಲ. ನಮ್ಮ ಕ್ರಿಕೆಟ್ ಸೂಪರ್‌ ಸ್ಟಾರ್‌ಗಳ ಪತ್ನಿಯರು ಅಲ್ಲಿ ವೈಟ್ ಪೌಡರ್ ಅಥವಾ ಕೊಕೇನ್ ಸ್ನಾಟ್ ಮಾಡುತ್ತಿದ್ದರು. ಇದನ್ನು ನೋಡಿ ಇವರು ಏನು ಮಾಡುತ್ತಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಅನಿಸಿತು. ಅವರು ನನ್ನನ್ನು ಕಂಡು ಮುಗುಳ್ನಕ್ಕರು. ನಾನು ಕೂಡ ಮುಗಳ್ನಕ್ಕು ಅಲ್ಲಿಂದ ಹೊರ ಬಂದೆ ಎಂದು ಶರ್ಲಿನ್ ಚೋಪ್ರಾ ಚಾನೆಲ್‍ಗೆ ತಿಳಿಸಿದರು.

ಇದಕ್ಕೂ ಮೊದಲು ಶರ್ಲಿನ್ ಚೋಪ್ರಾ ಟ್ವಿಟರ್‌ನಲ್ಲಿ ಬಾಲಿವುಡ್ ಪಾರ್ಟಿಗಳ ಬಗ್ಗೆ ಬರೆದುಕೊಂಡಿದ್ದರು. ಸಿನೆಮಾ ಉದ್ಯಮದಲ್ಲಿ ಶೇ.95ರಷ್ಟು ಮಂದಿ ತಮ್ಮ ಪಾರ್ಟಿಗಳಲ್ಲಿ ಡ್ರಗ್ಸ್ ಆಫರ್ ಮಾಡುತ್ತಾರೆ. ಡ್ರಗ್ಸ್ ಇಲ್ಲದೆ ಪಾರ್ಟಿ ಫೇಲ್ಆಗುತ್ತದೆ ಎಂಬುದು ಅವರ ಅನಿಸಿಕೆ. ಡ್ರಗ್ಸ್ ಕಲ್ಚರ್ಗೆ ಪ್ರೋತ್ಸಾಹಿಸಿ ಈ ಜನರು ಈ ದೇಶದ ಯುವಕರನ್ನು ನಶೆಯ ಅಂಧಕಾರಕ್ಕೆ ನೂಕುತ್ತಿದ್ದಾರೆ ಎಂದು ಶರ್ಲಿನ್ ಟ್ವೀಟ್ ಮಾಡಿದ್ದರು.