ಕೃಷಿ ಮಸೂದೆ ವಿರೋಧಿಸಿ ಮೋದಿ ಸರಕಾರದ ವಿರುದ್ಧ ರೈತರ ಪ್ರತಿಭಟನೆ: ಹಲವು ರೈಲು ರದ್ದು

0
512

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.25: ರೈತ ಮಸೂದೆ ವಿರೋಧಿಸಿ ಭಾರತ್ ಬಂದ್ ಮತ್ತು ರೈತರ ಮೂರು ದಿನಗಳ ರೈಲು ತಡೆ ಪ್ರದರ್ಶನವನ್ನು ಮುಂದಿಟ್ಟು ರೈಲ್ವೆಯು ವಿಶೇಷ ರೈಲು ಸೇವೆಯನ್ನು ಡಿಸೆಂಬರ್ 24ರಿಂದ 26ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಸುರಕ್ಷೆ ಮತ್ತು ರೈಲು ಆಸ್ತಿಯ ನಷ್ಟವನ್ನು ತಡೆಯುವ ಕುರಿತು ಈ ನಿರ್ಧಾರವನ್ನು ಕೈಗೊಳಗಳಲಾಗಿದೆ ಎಂದು ಅವರು ಹೇಳಿದರು.

ರೈತರ ‘ರೈಲ್ ರೋಕೊ’ ಪ್ರತಿಭಟನೆಗೆ ಮಜ್ದೂರ್ ಸಂಘರ್ಷ ಸಮಿತಿ ಕರೆ ನೀಡಿತ್ತು. ನಂತರ ಬೇರೆ ಬೇರೆ ರೈತ ಸಂಘಟನೆಗಳು ಅದನ್ನು ಬೆಂಬಲಿಸಿವೆ. ಬಿಜೆಪಿ ನಾಯಕರು ಮತ್ತು ಮಸೂದೆಯನ್ನು ಬೆಂಬಲಿಸಿ ಮತದಾನ ಮಾಡಿದ ಸಂಸದರನ್ನು ಬಹಿಷ್ಕರಿಸಲು ರೈತ ಸಂಘಟನೆಗಳ ಕಾರ್ಯಕರ್ತರು ನಿರ್ಧರಿಸಿದ್ದಾರೆ.

ಇಂದು ಸಂಪೂರ್ಣ ಬಂದ್‍ಗೆ ರೈತರು ಕರೆ ನೀಡಿದ್ದು, ರೈತರು ಈ ಮಸೂದೆಯಿಂದ ಕೃಷಿ ಬೆಂಬಲ ಬೆಲೆ ಸಂಪೂರ್ಣ ಇಲ್ಲದಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದೊಡ್ಡ ದೊಡ್ಡ ಬಂಡವಾಳಶಾಹಿಗಳ ಕರುಣೆಗೆ ಕೈಚಾಚುವ ಪರಿಸ್ಥಿತಿ ಎದುರಾಗುವುದು ಎಂದು ಹೇಳಿದ್ದಾರೆ. ರಾಜ್ಯಸಭೆ ಮತ್ತು ಪಾರ್ಲಿಮೆಂಟಿನಲ್ಲಿ ಆವಶ್ಯಕ ವಸ್ತು ತಿದ್ದು ಪಡಿ ವಿಧೇಯಕ 2020, ಕೃಷಿ ಉತ್ಪನ್ನ ವ್ಯಾಪಾರ ವಾಣಿಜ್ಯ ಪ್ರೋತ್ಸಾಹ ಸೌಲಭ್ಯ ಮಸೂದೆ 2020 ಹಾಗೂ ರೈತ ಸಬಲೀಕರಣ ಮತ್ತು ಸಂರಕ್ಷಣೆ ರೈತ ಸೇವಾ ವಿಧೇಯ 2020 ಮಸೂದೆಗಳು ಪಾಸು ಆಗಿದ್ದು ರೈತರ ವಿರೋಧವನ್ನು ಎದುರಿಸುತ್ತಿದೆ. ಇಂದು ಹತ್ತು ಗಂಟೆಯಿಂದಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ರೈತರಿಂದ ರಸ್ತೆ ತಡೆದು ಪ್ರತಿಭಟನೆ ಆರಂಭವಾಗಿದೆ.