ಮಥುರಾ ಈದ್ಗಾ ಮಸೀದಿ ತೆರವಿಗೆ ಅರ್ಜಿ

0
808

ಸನ್ಮಾರ್ಗ ವಾರ್ತೆ

ಮಥುರಾ,ಸೆ.26: ಅಯೋಧ್ಯೆಯ ವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ಬೆನ್ನಿಗೆ ಮಥುರಾದ ಶಾಹಿ ಈದ್ಗಾ ಮಸೀದಿ ಇರುವ ಜಮೀನಿನಲ್ಲಿ ಹಕ್ಕುವಾದ ಮಂಡಿಸಿ ಅರ್ಜಿ ಸಲ್ಲಿಸಲಾಗಿದೆ. ಮಸೀದಿ ಇರುವ 13.3ಎಕರೆ ಸ್ಥಳ ಕೃಷ್ಣ ಜನ್ಮಭೂಮಿಯೆಂದು ವಕೀಲರಾದ ವಿಷ್ಣು ಜೈನ್ ಸಿವಿಲ್ ಅರ್ಜಿ ಸಲ್ಲಿಸಿದ್ದಾರೆ.

ಉತ್ತರಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡನ್ನು ಎದುರುವಾದಿಯನ್ನಾಗಿ ಹೆಸರಿಸಿದ್ದಾರೆ. ಶ್ರೀಕೃಷ್ಣ ಜನಿಸಿದ್ದು ರಾಜ ಕಂಸನ ಕಾರಾಗೃಹದಲ್ಲಿ. ಈ ಪ್ರದೇಶ ಕತ್ರ ಕೇಶವ್ ದೇವ್ ಎಂದು ಅರಿಯಲ್ಪಡುತ್ತಿತ್ತು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಜಮೀನಿನಲ್ಲಿ ಈದ್ಗಾ ಮಸೀದಿ ಪರಿಪಾಲನೆ ಸಮಿತಿ ಮಸೀದಿ ಕಟ್ಟಿಸಿದ್ದು. ಮೊಗಲ್ ಅರಸ ಔರಂಗಜೇಬ್ ಮಥುರಾದ ಕೃಷ್ಣ ಮಂದಿರವನ್ನು ಕೆಡವಿದ್ದ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಬಾಬರಿ ಮಸೀದಿ ಕೆಡವಿದ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಿ ಮಸೀದಿಗೆ ಐದು ಎಕರೆ ಜಾಗ ಕೊಡಲು ಸುಪ್ರೀಂ ಕೋರ್ಟು ತೀರ್ಪು ನೀಡಿತ್ತು. 19914 ಕಾನೂನು ಪ್ರಕಾರ ದೇಶದ ಜಾತ್ಯತೀತ ವಿಶೇಷತೆಯನ್ನು ಸಂರಕ್ಷಣೆಯನ್ನು ಸಂರಕ್ಷಿಸಲು ಮತ್ತು ಇದು ಸಂವಿಧಾನದ ಮೂಲ ತತ್ವದ ರಕ್ಷಣೆಗಾಗಿಯೆಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ತೀರ್ಪಿನ ನಂತರ ಮಥುರಾ, ಕಾಶಿಗಳ ವಿವಾದಕ್ಕೆ ಹೊಸ ದಾರಿ ತೆರೆದುಕೊಂಡಂತಾಗಿದೆ.

ಹಿಂದುತ್ವ ಸಂಘಟನೆಯ ವಿಶ್ವಭದ್ರ ಪುರೋಹಿತ್ ಮಹಾಸಂಘ್ 1991ರ ಆರಾಧಾನಾಲಯ ಕಾನೂನು ರದ್ದು ಮಾಡಬೇಕೆಂದು ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. 1947ರ ಆಗಸ್ಟ್ 15ಕ್ಕೆ ಮಂದಿರಗಳಾಗಿದ್ದುದು ಮಸೀದಿ ಮಾಡುವುದು ಮತ್ತು ಮಸೀದಿಗಳಾಗಿದ್ದವು ಮಂದಿರ ಮಾಡುವುದನ್ನು ನಿಷೇಧಿಸಿದ 1991ರ ಆರಾಧಾನಾಲಯ ಕಾನೂನಿನ ನಾಲ್ಕನೆ ಪರಿಚ್ಛೇದವನ್ನು ರದ್ದು ಪಡಿಸಬೇಕೆಂದು ಮಹಾಸಂಘ್ ಆಗ್ರಹಿಸಿದೆ.