“ಸ್ವಚ್ಛತಾ ಹೀ ಸೇವಾ” ಅಭಿಯಾನದ ಲೈವ್ ಭಾಷಣ ಪ್ರಸಾರಕ್ಕೆ 8 ಗೋವುಗಳು ಬಲಿ !

0
930

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ” ಸ್ವಚ್ಛತಾ ಹೀ ಸೇವಾ” ಅಭಿಯಾನದ ಲೈವ್ ಭಾಷಣ ಪ್ರಸಾರಕ್ಕಾಗಿ ಗೋ ಶಾಲಾ ಹಸುಗಳನ್ನು ಸ್ಥಳಾಂತರ ಮಾಡಿದ ಪರಿಣಾಮವಾಗಿ 8 ಗೋವುಗಳು ಹಸಿವಿನಿಂದ ಸಾವನ್ನಪ್ಪಿದ್ದ ಘಟನೆಯೊಂದು ಸಂಭವಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ” ಸ್ವಚ್ಛತಾ ಹೀ ಸೇವಾ” ಅಭಿಯಾನದ ಲೈವ್ ಭಾಷಣ ಪ್ರಸಾರಕ್ಕಾಗಿ ರಾಜಘರ್ ಜಿಲ್ಲೆಯ ಪೀಪ್ಲಿಯಾ ಕುಲ್ಮಿ ಹಳ್ಳಿಯ ಗೋ ಶಾಲಾ ಒಂದರಲ್ಲಿ ಬೃಹತ್ ಟೆಲಿವಿಷಯನ್ ಸ್ಕ್ರೀನ್ ಗಳನ್ನು ಅಳವಡಿಸಲು 450 ಗೋವುಗಳನ್ನು ತೆರವು ಗೊಳಿಸಲಾಗಿತ್ತು.

ಈ ಕುರಿತು ಜೆಲ್ಲಾಧಿಕಾರವು ಮೌನವಹಿಸಿದ್ದು ಈ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.ಪ್ರಧಾನಿಯವರ ಲೈವ್ ಭಾಷಣ ಪ್ರಸಾರ ಮಾಡಲು ಗೋ ಶಾಲೆಯ ಗೋವುಗಳನ್ನು ತೆರವುಗೊಳಿಸಿ ಬೃಹತ್ ವೇದಿಕೆಯನ್ನು ನಿರ್ಮಾಸಲಾಗಿತ್ತಾದರೂ ಇಂಟರ್ನೆಟ್ ತೊಂದರೆಯಿಂದಾಗಿ 2-3 ನಿಮಿಷಗಳವರೆಗೆ ಮಾತ್ರ ಕಾರ್ಯಕ್ರಮವು ನಡೆಯಿತು. ಚಲಿಸಲು ಶಕ್ತವಲ್ಲದ ಹಸುವನ್ನೂ ಸೇರಿಸಿ 450 ಗೋವುಗಳನ್ನು ನವೀನ ಗಾಯತ್ರಿ ಗೋಶಾಲೆಯಿಂದ ತೆರವುಗೊಳಿಸಲಾಗಿತ್ತು.

ಇದಲ್ಲದೇ 5-6 ಗಟ್ಟಿಮುಟ್ಟಾದ ಗೋವುಗಳನ್ನು ಮಾತ್ರ ಒಂದೆಡೆ ಕಟ್ಟಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಎಂದು ಡಿ ವಯರ್ ವರದಿಯು ತಿಳಿಸಿದೆ.

ಬಯೋ ವಿದ್ಯುತ್ ಹಾಗೂ ಬಯೋ ಇಂಧನಗಳನ್ನು ಉತ್ಪಾದಿಸುವ 17 ಆಯ್ದ ಜಿಲ್ಲೆಗಳಲ್ಲಿ ಮೋದಿಯವರ ಸ್ವಚ್ಛತಾ ಹೀ ಸೇವಾ ಅಭಿಯಾನದ ಭಾಷಣ ಪ್ರಸಾರವನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಗೋಬರ್ಧನ ಯೋಜನೆಗೆ ದೆಹಲಿಯಲ್ಲಿ ಚಾಲನೆ ನೀಡಿದರು. ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಬಯೋ ಗ್ಯಾಸ್ ತಯಾರಿಸುವ ಏಕೈಕ ಗೋ ಶಾಲೆಯಾಗಿ ರಾಜಘರ್ ನವೀನ ಗಾಯತ್ರಿ ಗೋಶಾಲಾ ಗುರುತಿಸಲ್ಪಟ್ಟಿತ್ತು.

ಈ ಕಾರ್ಯಕ್ರಮದ ಒಂದು ವಾರ ಮುನ್ನವೇ ಗೋವುಗಳನ್ನು ತೆರವುಗೊಳಿಸಲಾಗಿದ್ದು ಅವುಗಳಿಗೆ ಸರಿಯಾದ ರೀತಿಯಲ್ಲಿ ಆಹಾರ ಮತ್ತು ನೀರು ಪೂರೈಕೆ ಮಾಡಲಾಗಿಲ್ಲ.
” ಒಂದು ವಾರದ ವರೆಗೆ ಜಿಲ್ಲಾಡಳಿತವು ಗೋ ಶಾಲೆಯಲ್ಲಿ ಕಾರ್ಯಕ್ರಮದ ತಯಾರಿ ನಡೆಸುವುದರಲ್ಲಿಯೇ ವ್ಯಸ್ತವಾಗಿದ್ದರಿಂದ ಗೋ ಶಾಲೆಯ ಗೋವುಗಳನ್ನೇ ಮರೆತಂತಿತ್ತು. ರೈತರ ಮಂಡಿಯಲ್ಲಿ ಹಸುವುಗಳನ್ನು ಕಟ್ಟಿ ಹಾಕಿದ್ದರಿಂದ ಅವುಗಳಿಗೆ ಸರಿಯಾದ ಆಹಾರ ನೀರು ದೊರೆಯದೇ 8 ಹಸುಗಳು ಸತ್ತುಹೋಗಿವೆ ಅಲ್ಲದೇ ಹಲವಾರು ಹಸುಗಳು ನಿಶ್ಯಕ್ತವಾಗಿವೆ “ಎಂದು ಸಾಮಾಜಿಕ ಕಾರ್ಯಕರ್ತರೂ ಹಾಗು ಗ್ರಾಮನಿವಾಸಿಯೂ ಆದ ಶ್ಯಾಮ್ ತೇಜರಿ ತಿಳಿಸಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ “ಬಿಜೆಪಿಯ ಗೋ ಪ್ರೇಮ ಇದುವೆಯೇ ?”ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ಕುಟುಕಿದ್ದಾರೆ.