ಸ್ವದೇಶಿಯಾಗಲು ಎಲ್ಲ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕಾಗಿಲ್ಲ- ಮೋಹನ್ ಭಾಗವತ್

0
452

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.13: ಸ್ವದೇಶಿಯಾಗಲು ಎಲ್ಲ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವುದರಲ್ಲಿ ಅರ್ಥವಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನಮಗೆ ಸೂಕ್ತವಾಗಿರುವುದನ್ನು ಖರೀದಿಸಬಹುದು. ಆದರೆ ಅದು, ನಮ್ಮ ವ್ಯವಸ್ಥೆಗೆ ಅನುಗುಣವಾಗಿರಬೇಕು ಎಂದು ಭಾಗವತ್ ಆನ್‍ಲೈನ್ ಮೂಲಕ ನಡೆದ ಪುಸ್ತಕ ಪ್ರಕಾಶನ ಕಾರ್ಯಕ್ರಮದಲ್ಲಿ ಹೇಳಿದರು.

ನಮಗೆ ಒಳ್ಳೆಯದು ಅನಿಸುವುದನ್ನು ನಾವು ಸ್ವೀಕರಿಸುತ್ತೇವೆ. ಎಲ್ಲ ದಿಕ್ಕುಗಳಿಂದ ಜ್ಞಾನ ನಮ್ಮೆಡೆಗೆ ಬರಲಿ ಎಂದು ದೇವ ಗ್ರಂಥಗಳು ಹೇಳುತ್ತವೆ. ಆದೆ, ನಮ್ಮ ಅಗತ್ಯತೆಗೆ ತಕ್ಕಂತೆ ನಾವು ಹೊರಗಿನಿಂದ ಸ್ವೀಕರಿಸಬೇಕು ಅಷ್ಟೇ.

ಜಾಗತೀಕರಣ ನಿರೀಕ್ಷಿತ ಫಲವನ್ನು ತಂದಿಲ್ಲ ಎಂದು ನಮಗೆ ಕೊರೋನ ಮನವರಿಕೆ ಮಾಡಿತು. ನ್ಯಾಯಪರ್ಯಾಪ್ತ ದೇಶಗಳಲ್ಲಿ ಪರಸ್ಪರ ಸಹಕಾರ ಬೇಕು. ಜಗತ್ತನ್ನು ಒಂದು ಮಾರುಕಟ್ಟೆಯಾಗಿ ಕಾಣದೇ ಒಂದು ಕುಟುಂಬವಾಗಿ ನೋಡಲು ಸಾಧ್ಯವಾಗಬೇಕು.

ವಿದೇಶಿ ರಾಷ್ಟ್ರಗಳ ಹಸ್ತಕ್ಷೇಪದಿಂದುಂಟಾದ ನಷ್ಟಗಳನ್ನು ತುಂಬುವ ರೀತಿಯ ಒಂದು ಆರ್ಥಿಕ ನೀತಿ ಸ್ವಾತಂತ್ರ್ಯ ನಂತರ ಭಾರತಕ್ಕೆ ಇರಲಿಲ್ಲ. ಆದರೆ, ಈಗಿನ ಆರ್ಥಿಕ ನೀತಿಗಳು ಸಮೃದ್ಧಿಯನ್ನು ಗುರಿಯಾಗಿಟ್ಟಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.