ಘರ್ಷಣೆ ಸಾಧ್ಯತೆ: ಕಾಸರಗೋಡಿನಲ್ಲಿ ಎರಡು ಕಡೆ ನಿಷೇಧಾಜ್ಞೆ

0
421

ತಿರುವನಂತಪುರಂ,ಮೇ 23: ಘರ್ಷಣೆ ಸಾಧ್ಯತೆಯನ್ನು ಪರಿಗಣಿಸಿ ಮತ ಎಣಿಕೆ ವೇಳೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಕಲ್ಯೋಟ್, ಪೆರಿಯ ನಗರದ 500 ಮೀಟರ್ ಸುತ್ತಳತೆಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಗುರುವಾರ ಬೆಳಗ್ಗೆ ಎಂಟು ಗಂಟೆಯಿಂದ ಶುಕ್ರವಾರ ರಾತ್ರೆ ಎಂಟು ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಕೇರಳ ಇಂಟಲಿಜೆನ್ಸ್ ವಿಭಾಗ ಒಂದು ವಾರದ ಮೊದಲು ಸಲ್ಲಿಸಿದ ವರದಿಯ ಆಧಾರದಲ್ಲಿ ಭದ್ರತಾ ಕ್ರಮವನ್ನು ಸರಕಾರ ಹೆಚ್ಚಿಸಿದೆ. ಮತ ಎಣಿಕೆ 22,640 ಪೊಲೀಸರನ್ನು ನಿಯೋಜಿಸಲಾಗಿದೆ. 111 ಡಿವೈಎಸ್ಪಿಗಳು, 395 ಇನ್ಸ್‍ಪೆಕ್ಟರ್‍ಗಳು, 2632 ಎಸ್‍ಐ, ಎಸ್‍ಎಸ್ಸೈಗಳನ್ನು ನಿಯೋಜಿಸಲಾಗಿದೆ. ಇವರಲ್ಲದೆ ಕೇಂದ್ರ ಸಶಸ್ತ್ರ ಸೇನೆಯ 1344 ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿದೆ.