ಉತ್ತರಪ್ರದೇಶ: ಬಿಜೆಪಿ ಗೆದ್ದರೆ ಊರು ತೊರೆಯಲು ಸಿದ್ಧರಾಗಿ ನಿಂತ ನಯಾಬನ್ಸ್‌ ಮುಸ್ಲಿಮರು!

0
345

ಉತ್ತರಪ್ರದೇಶ,ಮೇ 22: ಉತ್ತರ ಪ್ರದೇಶದ ಉತ್ತರದಲ್ಲಿ ನಯಾಬನ್ಸ್ ಗ್ರಾಮವಿದ್ದು ಬಿಜೆಪಿ ಗೆದ್ದರೆ ಇಲ್ಲಿಂದ ವಲಸೆ ಹೋಗಲು ನಿರ್ಧರಿಸಿದ್ದಾರೆ. ಸ್ವಂತ ಹುಟ್ಟೂರನ್ನು ತೊರೆಯಲು ಅವರು ಸಜ್ಜಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಮೋದಿ ಎರಡನೆ ಬಾರಿ ಅಧಿಕಾರಕ್ಕೆ ಬಂದರೆ ನಮ್ಮ ಪರಿಸ್ಥಿತಿ ಭಯಾನಕವಾಗಬಹುದು ಎಂದು ಇವರು ಹೆದರುತ್ತಿದ್ದಾರೆ. ಮತಗಟ್ಟೆ ಸಮೀಕ್ಷೆ ಬಿಜೆಪಿ ಪರವಾಗಿ ಬಂದ ಮೇಲೆ ಇವರು ಹೆದರುತ್ತಿದ್ದಾರೆ.

ಕೆಲವು ಸಮಯದ ಹಿಂದಿನ ವರೆಗೂ ನಯಾಬನ್ಸ್‌ನಲ್ಲಿ ಸೌಹಾರ್ದ ವಾತಾವರಣವಿತ್ತು. ಮುಸ್ಲಿಮರು ಹಿಂದೂಗಳು ಒಗ್ಗಟ್ಟಿನಲ್ಲಿ ಬದುಕುತ್ತಿದ್ದರು. ಸಂತೋಷ,ದುಃಖಗಳಲ್ಲಿ ಸಮಾನವಾಗಿ ಭಾಗಿಯಾಗುತ್ತಿದ್ದರು. ಈಗ ಒಂದೇ ಗ್ರಾಮದಲ್ಲಿದ್ದರೂ ಅವರ ನಡುವೆ ಅಂತರವಿದೆ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಯೋಗಿ ಆದಿತ್ಯನಾರ್ಥ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ನಂತರ ಇಲ್ಲಿ ಕೋಮು ಧ್ರುವೀಕರಣ ಆರಂಭವಾಯಿತು ಎನ್ನುತ್ತಿದ್ದಾರೆ ಗ್ರಾಮದ ನಿವಾಸಿಗಳು.

“ನಮ್ಮ ಮಕ್ಕಳು, ಅವರ ಮಕ್ಕಳು ಇಲ್ಲಿ ಒಟ್ಟಿಗೆ ಆಡಿ ಸಂತೋಷ ಪಡುತ್ತಿದ್ದೆವು. ಇಲ್ಲಿ ನಾವು ಸೌಹಾರ್ದದಲ್ಲಿದ್ದೆವು. ಹಬ್ಬ, ಆಚರಣೆಗಳಲ್ಲಿ ಒಟ್ಟಿಗೆ ಸೇರುತ್ತಿದ್ದೆವು. ಆದರೆ ಕಳೆದ ಎರಡು ವರ್ಷಗಳಿಂದ ಇವೆಲ್ಲ ಬದಲಾಯಿತು. ನಮ್ಮ ಈ ಸಹೋದರರೊಂದಿಗೆ ಸೌಹಾರ್ದದಿಂದ ಬದುಕುವ ದಿನ ಇನ್ನೆಷ್ಟು ಇವೆಯೋ ಗೊತ್ತಿಲ್ಲ. ಇಲ್ಲಿಂದ ಓಡಿ ಹೋಗಬೇಕೆಂದು ಅನಿಸುತ್ತಿದೆ” ಎಂದು ಮುಸ್ಲಿಮರು ಹೇಳುತ್ತಾರೆ.

ನಾಳೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬರುವಾಗ ಬಿಜೆಪಿ ಗೆದ್ದರೆ ಸ್ವಂತ ಹುಟ್ಟೂರಿನಿಂದ ಪಲಾಯನ ಮಾಡಲು ನಯಾಬನ್ಸ್‌ನ ಮುಸ್ಲಿಮರು ಸಿದ್ಧರಾಗುತ್ತಿದ್ದಾರೆ.