ಖಶೋಗಿ ಕೊಲೆ: ಟರ್ಕಿಯಿಂದ ವಿಚಾರಣೆ ಆರಂಭ

0
186

ಸನ್ಮಾರ್ಗ ವಾರ್ತೆ

ಅಂಕಾರ,ಜು.4: ಸೌದಿ ಪತ್ರಕರ್ತ ಜಮಾಲ್ ಖಶೋಗಿ ಕೊಲೆ ಪ್ರಕರಣದ ವಿಚಾರಣೆ ಪ್ರಕ್ರಿಯೆ ಟರ್ಕಿ ಕೋರ್ಟಿನಲ್ಲಿ ಆರಂಭವಾಗಲಿದೆ‌. 2018ರ ಅಕ್ಟೋಬರಿನಲ್ಲಿ ಇಸ್ತಾಂಬುಲ್‍ನ ಸೌದಿ ಕಾನ್ಸುಲೇಟನ್‌ನಲ್ಲಿ ಕೊಲೆಯಾದ ಖಶೋಗಿ ಪ್ರಕರಣದಲ್ಲಿ ಶಂಕಿತನಾದ ಸೌದಿ ಅಧಿಕಾರಿಯ ವಿಚಾರಣೆ ನಡೆಸುವ ಪ್ರಯತ್ನ ಇದು. 20 ಸೌದಿ ಪ್ರಜೆಗಳು ಕೋರ್ಟಿನಲ್ಲಿ ಬಹಿರಂಗ ವಿಚಾರಣೆ ಎದುರಿಸಲಿದ್ದಾರೆ.

ಶುಕ್ರವಾರ ಬೆಳಗ್ಗೆ ಇಸ್ತಾಂಬುಲ್ ಪ್ರಾಂತದ ಕಾಗ್ಲೂನ್ ಜಿಲ್ಲೆಯ ಪ್ರಧಾನ ಕೋರ್ಟಿನಲ್ಲಿ ವಿಚಾರಣೆ ಪ್ರಕ್ರಿಯೆ ಆರಂಭವಾಗಿದೆ ಎಂದು ಅಲ್‍ ಜಝೀರಾ ವರದಿ ಮಾಡಿದೆ.

ವಾಷಿಂಗ್ಟನ್ ಪೋಸ್ಟ್‌ನ ಅಂಕಣಕಾರ 59 ವರ್ಷದ ಖಶೋಗಿ 2018 ಅಕ್ಟೋಬರ್ ಎರಡರಂದು ಟರ್ಕಿಯ ಸೌದಿ ದೂತವಾಸದಲ್ಲಿ ಕೊಲೆಯಾಗಿದ್ದರು. ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಲು ಅವರು ಕಾನ್ಸುಲೇಟ್‍ಗೆ ಬಂದಿದ್ದರು. ಮಾರ್ಚ್ 20ರಂದು ಸೌದಿ ಪ್ರಜೆಗಳ ವಿರುದ್ಧ ಸೌದಿ ಪ್ರಾಸಿಕ್ಯೂಟರ್‌ಗಳು ಆರೋಪ ಹೊರಿಸಿದ್ದರು. ಸೌದಿ ರಾಜಕುಮಾರ್ ಮುಹಮ್ಮದ ಬಿನ್ ಸಲ್ಮಾನ್‍ರ ಇಬ್ಬರು ಮಾಜಿ ಸಹಾಯಕರು ಇದರಲ್ಲಿ ಸೇರಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.