ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಡುಪಿ ಜಿಲ್ಲಾ ಸಂಚಾಲಕರಾಗಿ ಯಾಸೀನ್ ಕೋಡಿಬೆಂಗ್ರೆ, ಪ್ರ. ಕಾರ್ಯದರ್ಶಿಯಾಗಿ ಝಕರಿಯಾ ನೇಜಾರ್ ಆಯ್ಕೆ

0
336

ಸನ್ಮಾರ್ಗ ವಾರ್ತೆ

ಉಡುಪಿ: ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸರ್ವ ಸದಸ್ಯರ ಸಭೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ ಹಾಗೂ ಜಿಲ್ಲಾ ಸಂಚಾಲಕರಾದ ಶಬ್ಬೀರ್ ಮಲ್ಪೆ ನೇತೃತ್ವದಲ್ಲಿ ನೆರವೇರಿತು.

ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರ ಸರ್ವಾನುಮತದಿಂದ ಉಡುಪಿ ಜಿಲ್ಲಾ ಸಂಚಾಲಕರಾಗಿ ಯಾಸೀನ್ ಕೋಡಿಬೆಂಗ್ರೆಯವರನ್ನು ಆಯ್ಕೆ ಮಾಡಲಾಯಿತು. ಇವರು ಕಾನೂನು ಪದವೀಧರಾಗಿದ್ದು, ಪ್ರಸ್ತುತ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯಾ ನೇಜಾರ್ ಅವರನ್ನು ಆಯ್ಕೆ ಮಾಡಲಾಯಿತು. ಇಂಜಿನಿಯರ್ ಪದವೀಧರರಾಗಿದ್ದು ಪ್ರಸ್ತುತ ಉದ್ಯಮಿಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಇಫ್ತೀಕಾರ್ ಉಡುಪಿಯವರನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ಸಮಿತಿಗೆ ಸದಸ್ಯರಾಗಿ ನಬೀಲ್ ಗುಜ್ಜರ್ ಬೆಟ್ಟು, ಹುಸೇನ್ ಕೋಡಿಬೆಂಗ್ರೆ, ಮುಹಮ್ಮದ್ ಜೌಹರ್ ಹೂಡೆ, ಮೌಲಾನಾ ಇಬ್ರಾಹೀಮ್ ಸಯೀದ್ ಉಮರಿ ಕೋಟ, ರಿಝ್ವಾನ್ ಉಡುಪಿ, ಮುಹಮ್ಮದ್ ಶುಐಬ್ ಮಲ್ಪೆ, ಸಲಾಹುದ್ದೀನ್ ಹೂಡೆ, ಮುಹಮ್ಮದ್ ಶಾರೂಕ್ ಉಡುಪಿ, ಬಿಲಾಲ್ ಮಲ್ಪೆ, ಪರ್ವೇಝ್ ಕುಕ್ಕಿಕಟ್ಟೆ, ಝೈನುಲ್ಲಾ ಹೂಡೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಡುಪಿ ಜಿಲ್ಲಾ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.