ಟ್ರಂಪ್‍ ವಿರುದ್ಧ ವಾಗ್ದಂಡನೆ ತಡೆಯುವ ರಿಪಬ್ಲಿಕನ್‍ರ ಯತ್ನ ಸೆನೆಟ್‍ನಲ್ಲಿ ವಿಫಲ

0
331

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ವಿರುದ್ಧ ವಾಗ್ದಂಡನೆಯ ಕ್ರಮವನ್ನು ತಡೆಯುವ ರಿಪಬ್ಲಿಕ್ ಪಾರ್ಟಿಯ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

45ರ ವಿರುದ್ಧ 55ಮತಗಳಿಂದ ಅಮೆರಿಕದ ಮೇಲ್ಮನೆ ಸೆನೆಟ್ ವಿಫಲಗೊಳಿಸಿದೆ. ವಾಗ್ದಂಡನೆ ತಡೆಯುವ ಪ್ರಸ್ತಾವವನ್ನು ರಿಪಬ್ಲಿಕ್ ಪಾರ್ಟಿಯ ರ‌್ಯಾಂಡ್ ಪಾಲ್ ಮಂಡಿಸಿದರು. ಐವರು ರಿಪಬ್ಲಿಕನ್ ಸದಸ್ಯರೇ ಪ್ರಸ್ತಾವ ವಿರೋಧಿಸಿದರು.

ಇದೇ ವೇಳೆ ಸೆನೆಟ್‍ನಲ್ಲಿ ಆರಂಭವಾಗುವ ವಾಗ್ದಂಡನೆಯ ವಿಚಾರಣೆಯನ್ನು ರಿಪಬ್ಲಿಕನ್ ಸದಸ್ಯರು ವಿರೋಧಿಸಿದ್ದರು.

ಸೆನೆಟ್‍ನ ಜಾನ್ ಕ್ಯಾನ್ನನ್ ಟೆಕ್ಸಾಸ್, ಲಿಂಡಿಸಿ ಗ್ರಾಮ್ ಸೌತ್ ಕರೊಲಿನ ಸೆನೆಟರ್ ಗಳು ಪ್ರಸ್ತಾವಕ್ಕೆ ವಿರೋಧ ತೋರಿಸಿದರು. ಅಧ್ಯಕ್ಷ ಸ್ಥಾನದಿಂದ ಹೊರಹೋದ ಟ್ರಂಪ್‍ರನ್ನು ವಿಚಾರಣೆಗೆ ಕರೆಸುವುದು ತಪ್ಪು ಎಂದವರು ಹೇಳಿದರು.

ಅಮೆರಿಕ ಆಡಳಿತ ಕೇಂದ್ರ ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ನಡೆದ ದಾಳಿಯನ್ನು ಬೆಂಬಲಿಸಿದ್ದಾರೆ ಎಂದು ಟ್ರಂಪ್‍ಗೆ ವಾಗ್ದಂಡನೆ ವಿಧಿಸಲು ಪ್ರಸ್ತಾವ ತರಲಾಗಿದೆ. ಟ್ರಂಪ್ ರವರ ಪರವಾಗಿ 197 ಹಾಗೂ ವಿರುದ್ಧವಾಗಿ 232 ಮತಗಳು ವಾಗ್ದಂಡನೆಯ ಪ್ರಸ್ತಾವಕ್ಕೆ ಬಿದ್ದವು. ಈ ಮೂಲಕ ವಾಗ್ದಂಡನೆ ಪಾಸ್ ಮಾಡಲಾಗಿದೆ.

ಅಮೆರಿಕದ ಮಾಜಿ ಉಪಾಧ್ಯಕ್ಷ ಡಿಕ್ ಚಿನಿಯ ಪುತ್ರಿ ರಿಪಬ್ಲಿಕನ್ ಪಾರ್ಟಿಯ ಲಿಸ್ ಚಿನಿ ಕೂಡ ಪ್ರಸ್ತಾವವನ್ನು ಜನಪ್ರತಿನಿಧಿ ಸಭೆ ಕಾಂಗ್ರೆಸ್‍ನಲ್ಲಿ ಬೆಂಬಲಿಸಿ ಮತ ಹಾಕಿದ್ದಾರೆ. ಸೆನೆಟ್‍ನಲ್ಲಿ ಮೂರರಲ್ಲಿ ಎರಡು ಮತಗಳಿಸಿದರೆ ಮಾತ್ರ ಟ್ರಂಪ್‍ರನ್ನು ವಿಚಾರಣೆ ಮಾಡಲು ಸಾಧ್ಯವಿದೆ.