ಅಮೆರಿಕದ ಶತಮಾನದ ಒಪ್ಪಂದ’ಕ್ಕೆ ಒಪ್ಪಿದ ಅರಬ್ ನಾಯಕರು: ಹಾರೆಟ್ಜ್

0
1020

ಹೆಚ್ಚಿನ ಅರಬ್ ನಾಯಕರು ಅಮೆರಿಕಾದ “ಡೀಲ್ ಆಫ್ ದ ಸೆಂಚುರಿ ” ಗೆ ಒಪ್ಪಿಕೊಂಡಿದ್ದಾರೆ ಮತ್ತು ತಮ್ಮ ಒಪ್ಪಂದವನ್ನು ರಹಸ್ಯವಾಗಿರಿಸಬೇಕೆಂದು ಕೇಳಿಕೊಂಡಿದ್ದಾರೆ ಎಂದು ಇಸ್ರೇಲೀ ಪತ್ರಿಕೆ ಹಾರೆಟ್ಜ್ ವರದಿ ಮಾಡಿದೆ ಎಂದು ಅಲ್ ಖಲೀಜ್ ಆನ್ಲೈನ್ ವರದಿ ಮಾಡಿದೆ.
ಸುದ್ದಿ ವೆಬ್ ಸೈಟ್ ಪ್ರಕಾರ, ಪ್ರದೇಶದ ಸ್ಥಿರತೆಗೆ ಹಾನಿ ಉಂಟಾಗಬಾರದೆಂಬ ಉದ್ಧೇಶದಿಂದ ಅರಬ್ ನಾಯಕರು ಈ ಒಪ್ಪಂದವನ್ನು ರಹಸ್ಯವಾಗಿರಿಸಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.
ಇರಾನಿಯನ್ ಮತ್ತು ಸಿರಿಯನ್ ಸಮಸ್ಯೆಗಳ ಕಾರಣದಿಂದ ಅವರು ಆಂತರಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಕಳೆದ ವಾರ ಪ್ರದೇಶಕ್ಕೆ ಭೇಟಿ ನೀಡಿದ ಅಮೇರಿಕನ್ ನಿಯೋಗದ ಸದಸ್ಯರನ್ನು ಅರಬ್ ನಾಯಕರು ಎಚ್ಚರಿಸಿದರು. ಫೆಲೆಸ್ತೀನಿಯರ ಆಕಾಂಕ್ಷೆಗಳನ್ನು ಪೂರೈಸದ ಒಪ್ಪಂದವನ್ನು ಒಪ್ಪಿಕೊಳ್ಳುವುದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.