ಆಝಾದ್ ಮೈದಾನದಲ್ಲಿ ತ್ರಿವಳಿ ಮಸೂದೆಯಿಂದ ಬ್ರಹತ್ ಆಝಾದಿ ರಾಲಿ

0
967

ಕಳೆದ ಶನಿವಾರದಂದು
ಸಾವಿರಾರು ಬುರ್ಖಾಧಾರಿ ಮಹಿಳೆಯರಿಂದ ಬೃಹತ್ ರ‌್ಯಾಲಿಯೊಂದು ಮುಂಬೈಯ ಆಜಾದ್ ಮೈದಾನ್ನಲ್ಲಿ ಜರುಗಿತು. ಈ ರ‌್ಯಾಲಿಯು ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಜಾರಿಗೊಂಡ ತ್ರಿವಳಿ ತಲಾಕ್ ಮಸೂದೆಯ ವಿರುದ್ಧ ನಡೆದುದಾಗಿತ್ತು.
ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ವಿಭಾಗದಿಂದ ಆಯೋಜಿಸಲಾದ ಈ ಪ್ರತಿಭಟನೆಯು ದೇಶದ ಗಮನ ಸೆಳೆಯಿತು. ಮುಸ್ಲಿಮ್ ಮಹಿಳೆಯರು ಈ ಮಸೂದೆಯನ್ನು ನಿರಾಕರಿಸಿದರಲ್ಲದೇ ಶರೀಅತ್ ಕಾನೂನಿಗೆ ತಾವು ಬದ್ಧರೆಂದು ಸಾರಿ ಹೇಳಿದರು.
ಈ ಪ್ರತಿಭಟನೆಯು ಮೌನ ಪ್ರತಿಭಟನೆಯಾಗಿತ್ತಲ್ಲದೇ ಮುಸ್ಲಿಮ್ ಮಹಿಳಾ ವಿವಾಹ ಸಂರಕ್ಷಣಾ ಕಾಯ್ದೆಯನ್ನು ಸಂಪೂರ್ಣವಾಗಿ ವಿರೋಧಿಸಿ ಘೋಷಣೆಗಳನ್ನು ಕೂಗಲಾಯ್ತು.
” ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ತ್ರಿವಳಿ ತಲಾಕ್ ಮಸೂದೆಯನ್ನು ಹಿಂಪಡೆಯಿರಿ. ಅದು ಮಹಿಳಾ ವಿರೋಧಿ, ಲಿಂಗತಾರತಮ್ಯ ನೀತಿ ಧೋರಣೆಯುಳ್ಳದ್ದು, ಮಕ್ಕಳ ವಿರೋಧಿ, ಕುಟುಂಬಗಳನ್ನು ಈ ಮಸೂದೆ ಸರ್ವನಾಶ ಮಾಡುತ್ತದೆ, ಒಂದು ವೇಳೆ ಮುಸ್ಲಿಮ್ ಪುರುಷರನ್ನು ಈ ನೆಪದಲ್ಲಿ ಕ್ರಿಮಿನಲ್ ಮೊಕದ್ದಮೆ ಹೊರಿಸಿ ಜೈಲು ಪಾಲು ಮಾಡಿದರೆ ಮುಸ್ಲಿಮ್ ಸಮುದಾಯವು ಇದರಿಂದ ಅಪಾರ ನಷ್ಟವನ್ನು ಎದುರಿಸಬೇಕಾಗುತ್ತದೆ” ಎಂದು ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ವಿಭಾಗದ ಅಧ್ಯಕ್ಷರಾದ ಅಸ್ಮಾ ಝೆಹ್ರಾ ತಿಳಿಸಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ಅರ್ಶಿಯಾ ಶಕೀಲ್, ಎಐಎಮ್ ಪಿ ಎಲ್ ಬಿ ಯ ಸುಮಯ್ಯಾ ಸಜ್ಜದ್ ನೌಮಾನಿ, ಜಕೀಯಾ ಎಮ್, ಅರೀದಾ ಶೈಖ್, ಇಶ್ರತ್ ಶಹಬುದ್ದೀನ್ ಶೈಖ್, ಸಾಲೇಹಾ ಸುಹೇಲ್, ಅಹ್ಲೇ ಸುನ್ನತ್ ವಲ್ ಜಮಾಅತ್ ನ ಆಯೀನ್ ರಝಾ,ಎಸ್ ಎನ್ ಡಿ ಟಿ ಯುನಿವರ್ಸಿಟಿ ಯ ಪ್ರೊಫೆಸರ್ ಶಬಾನ ಖಾನ್ , ಶಿಯಾ ಜಮಾಅತ್ ನ ಫರಾಹ್ ಜಫ್ರೀ ಮತ್ತು ಮುಬಲ್ಲಿಗ್ ಅಹ್ಲೇ ಸುನ್ನತ್ ವಲ್ ಜಮಾಅತ್ ನ ಸಲ್ಮಾ ರಿಝ್ವೀ ಸೇರಿದಂತೆ ಹಲವಾರು ಮಹಿಳಾ ನಾಯಕಿಯರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.