ಐಪಿಎಸ್ ಅಧಿಕಾರಿಯ ತಮ್ಮ ಹಿಜ್ ಬುಲ್ ತೆಕ್ಕೆಗೆ: ಸರಕಾರಕ್ಕೆ ಹಿನ್ನಡೆ

0
965

ಕಾಶ್ಮೀರದ ಬುರ್ಹಾನ್ ವಾನಿಯ ಸಾವಿನ ವಾರ್ಷಿಕೋತ್ಸವದ ವೇಳೆ, ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಅಧಿಕಾರಿಯ ಸಹೋದರನನ್ನು ತನ್ನ ಗುಂಪಿಗೆ ಸೇರಿಸಿಕೊಳ್ಳುವ ಹೊಸ ಚಿತ್ರಗಳನ್ನು ಹಿಜ್ಬುಲ್ ಮುಜಾಹಿದೀನ್ ಬಿಡುಗಡೆ ಮಾಡಿದೆ .
ದಕ್ಷಿಣ ಕಾಶ್ಮೀರದ ಶೋಪಿಯಾನ್ ನಿವಾಸಿ ಶಮ್ಸುಲ್ ಹಕ್ ಮೆಂಗ್ನೂ ಅವರು ಶ್ರೀನಗರದ ಹೊರವಲಯದಲ್ಲಿರುವ ಜಕುರಾದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಬಿ. ಯು .ಎಂ. ಎಸ್ . ಕಲಿಯುತ್ತಿದ್ದರು ಮತ್ತು ಮೇ ನಿಂದ ಕಾಣೆಯಾಗಿದ್ದರು . ಶಮ್ಸುಲ್ ಅವರ ಹಿರಿಯ ಸಹೋದರ ಇನಾಮುಲ್ ಹಕ್ 2012 ರ ಐಪಿಎಸ್ ಬ್ಯಾಚ್ ಅಧಿಕಾರಿಯಾಗಿದ್ದಾರೆ ಮತ್ತು ಇವರು ಉತ್ತರ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾರೆ.
“ಹೌದು, ಶಮ್ಸುಲ್ ಅವರು ಹಿಜ್ಬುಲ್ ಗೆ ಸೇರಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶಂಸುಲ್ ಗನ್ ಅನ್ನು ಹಿಡಿದಿರುವ ಚಿತ್ರವು ಮೇ 25, 2018 ರ ದಿನಾಂಕವನ್ನು ತೋರಿಸುತ್ತದೆ. ಚಿತ್ರದಲ್ಲಿ ಆತನ ಕೋಡ್ ಹೆಸರನ್ನು ಬುರ್ಹನ್ ಸನಿ ಎಂದು ತೋರಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಬಂದೂಕುಗಳಿರುವ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಗುಂಪಿನ ಹೊಸ ಸೇರ್ಪಡೆಯನ್ನು ಈ ರೀತಿ ಉಗ್ರರ ತಂಡಗಳು ತಿಳಿಯಪಡಿಸುತ್ತಿವೆ. .
ಶಮ್ಸುಲ್ ಈ ವರ್ಷದ ಉಗ್ರಗಾಮಿ ಶ್ರೇಣಿಯಲ್ಲಿ ಸೇರಿದ ನಾಲ್ಕನೇ ವಿದ್ಯಾವಂತ ಯುವಕರಾಗಿದ್ದಾರೆ. ಬುರ್ಹನ್ ನ ವಾರ್ಷಿಕೋತ್ಸವದಲ್ಲಿ ಸುಮಾರು ಹನ್ನೆರಡು ಮಂದಿ ಹೊಸ ದಾಗಿ ಗುಂಪಿಗೆ ನೇಮಕಗೊಂಡಿರುವ ಚಿತ್ರಗಳನ್ನು ಹಿಜ್ಬ್ ಬಿಡುಗಡೆ ಮಾಡಿದೆ.
ಈಗಾಗಲೇ 50 ಕ್ಕೂ ಹೆಚ್ಚಿನ ಯುವಕರು ಈ ವರ್ಷ ಉಗ್ರಗಾಮಿ ಗುಂಪಿನಲ್ಲಿ ಸೇರ್ಪಡೆಗೊಂಡಿದ್ದಾರೆ.
ಏತನ್ಮಧ್ಯೆ, ಬರ್ಹನ್ ವಾನಿಯ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಜೀವನವು ಬಹಳಷ್ಟು ಪರಿಣಾಮವನ್ನು ಬೀರಿದೆ. 2016 ರಲ್ಲಿ ಅವರ ಹತ್ಯೆಯ ಬಳಿಕ ಆರು ತಿಂಗಳ ಕಾಲ ಅಶಾಂತಿಯಿಂದಾಗಿ , ಸುಮಾರು 80 ಜನರ ಸಾವಿಗೆ ಕಾರಣವಾಯಿತು.