ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಇಕ್ಕಟ್ಟಿನಲ್ಲಿ ಕೆಂದ್ರ ಸರಕಾರ

0
1669

: ಸಲೀಮ್ ಬೋಳಂಗಡಿ
ಬೆಂಗಳೂರು :ಏ.ಐ ಡಿ.ಎಂ.ಕೆ ಸಂಸದ ನವನೀತ ಕೃಷ್ಣನ್ ಕಾವೇರಿ ಜಲ ನಿರ್ವಹಣೆ ಮಂಡಳಿಯನ್ನು ಕೇಂದ್ರ ಸರಕಾರ ರಚಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಸುಪ್ರೀಮ್ ಕೋರ್ಟು ಈ ಬಗ್ಗೆ ತೀರ್ಪು ನೀಡಿ ಆರು ವಾರಗಳು ಕಳೆದರೂ ಸರಕಾರ ಈ ಬಗ್ಗೆ ಮುಂದಾಗುತ್ತಿಲ್ಲ. ಎಂದು ಅವರು ಆಪಾದಿಸುತ್ತಿದ್ದಾರೆ. ಸಾಮಾನ್ಯವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಭುಗಿಲೆದ್ದಿದ್ದ ಕಾವೇರಿ ವಿವಾದವನ್ನು ಸುಪ್ರೀಮ್ ಕೋರ್ಟು ಇತ್ತೀಚೆಗೆ ತೀರ್ಪು ಪ್ರಕಟಿಸಿ ವರ್ಷಂಪ್ರತಿ ಕರ್ನಾಟಕವು ತಮಿಳುನಾಡಿಗೆ ಬಿಡುತ್ತಿದ್ದ 192 ಟಿ.ಎಂ.ಸಿ ನೀರನ್ನು 177ಟಿ.ಎಂ.ಸಿ ಗೆ ಇಳಿಸಿತ್ತು. ಇದರ ವಿರುದ್ಧ ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆಯೂ ವ್ಯಕ್ತವಾಗಿತ್ತು. ಇನ್ನು ಆರು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದೂ ಸುಪ್ರೀಮ್ ಕೋರ್ಟು ತೀರ್ಪಿತ್ತಿತ್ತು. ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ ಕರ್ನಾಟಕದ ಪಾಲಿಗೆ ಹಿನ್ನಡೆಯಾದಂತೆ. ಮತ್ತೆ ಕಾವೇರಿಯ ಯಾವ ಜಲಾಶಯದ ಮೇಲೂ ಎರಡೂ ರಾಜ್ಯಗಳು ಹಕ್ಕಿರುವುದಿಲ್ಲ. ಕಾವೇರಿಯ ನಾಲ್ಕೂ ಜಲಾಶಯಗಳ ಕೀಲಿಕೈ ಮೂರನೇಯ ವ್ಯಕ್ತಿಗೆ ಹಸ್ತಾಂತರಿಸಬೇಕಾಗುತ್ತದೆ. ಆದ್ದರಿಂದ ಕರ್ನಾಟಕ ಮೊದಲಿನಿಂದಲೂ ಇದನ್ನು ವಿರೋಧಿಸುತ್ತಾ ಬಂದಿತ್ತು. ಈಗ ಕೇಂದ್ರ ಸರಕಾರವು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆತುರ ತೋರಿದರೆ ಕರ್ನಾಟಕದಲ್ಲಿ ಚುನಾವಣೆ ಆಸನ್ನವಾಗಿರುವಾಗ ಕನ್ನಡಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕವು ಕೇಂದ್ರವನ್ನು ಕಾಡುತ್ತಿರಬಹುದು. ಆದ್ದರಿಂದ ದಿನ ದೂಡುವ ತಂತ್ರದಲ್ಲಿ ಅದು ಮುಳುಗಿರಬಹುದು. ಯಾಕೆಂದರೆ ಕರ್ನಾಟಕದ ಚುನಾವಣೆಯ ಬಳಿಕ ತಮಿಳುನಾಡು ವಿದಾನ ಸಭಾ ಚುನಾವಣೆಯೂ ಹತ್ತಿರ ಬರುತ್ತಿದೆ. ಆಗ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಬಹುದೆಂಬ ಹುನ್ನಾರದಲ್ಲಿದೆಯೇನೋ? ಅತ್ತ ಸುಪ್ರೀಮ್ ಕೋರ್ಟು ನೀಡಿದ ಗಡುವು ಮುಗಿದಿದೆ. ಇತ್ತ ತಮಿಳರ ಒತ್ತಡವೂ ಹೆಚ್ಚಾಗುತ್ತಿದೆ. ಕರ್ನಾಟಕದ ಅತೀ ಮಹತ್ತರವಾದ ಚುನಾವಣೆಯೂ ಆಸನ್ನವಾಗಿದೆ. ಕೇಂದ್ರ ಸರಕಾರ ಈಗ ಒತ್ತಡದಲ್ಲಿ ಸಿಲುಕಿದೆ. ಏನು ಮಾಡುತ್ತದೋ ಕಾದು ನೋಡೋಣ.