ಕುಂಟಿಕಾನ: ಬಾರ್ ಮುಚ್ಚಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪೋಸ್ಟ್ ಕಾರ್ಡ್ ಚಳವಳಿ

0
1439
ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಸೈಂಟ್ ಆ್ಯನ್ಸ್ ಶಾಲೆಯ ಹತ್ತಿರ 100 ಮೀಟರ್ ವ್ಯಾಪ್ತಿಯೊಳಗೆ ಇತ್ತೀಚೆಗೆ ಹೊಸದಾಗಿ ಆರಂಭಗೊಂಡಿರುವ ಹೈ ಆನ್ 66 ಬಾರ್ & ರೆಸ್ಟೋರೆಂಟ್ ನಲ್ಲಿ ಕೇವಲ ರೆಸ್ಟೋರೆಂಟ್ ಗೆ ಅನುಮತಿ ನೀಡಿ, ಬಾರ್ ಅನ್ನು ಮುಚ್ಚಿಸುವಂತೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ಪೋಸ್ಟ್ ಕಾರ್ಡ್ ಚಳವಳಿಯನ್ನು ಆರಂಭಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಸೆಕ್ಷನ್ 6, 2003 ರ ಕಾಯಿದೆ(ಸಿಓಟಿಪಿಎ)ರಂತೆ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ 100ಮೀಟರ್ ಅಂತರದಲ್ಲಿ ಯಾವುದೇ ತಂಬಾಕು ಉತ್ಪಾದನೆ ಅಥವಾ ಅಮಲು ಪದಾರ್ಥಗಳ ಜಾಹೀರಾತು, ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ. ಆದರೂ ಕೂಡ 80 ಮೀಟರ್ ನ ಅಂತರದಲ್ಲಿ ಬಾರ್ ಗೆ ಅನುಮತಿ ನೀಡಲಾಗಿದೆ.
(Section 6 of the Cigarettes and Other Tobacco Products (Prohibition of Advertisement and Regulation of Trade and Commerce, Production, Supply and Distribution) Act, 2003 (COTPA), sale of cigarettes and other tobacco products within a 100-yard radius of educational institutions is illegal. Similarly, the State’s Excise Department bans the sale of liquor within a radius of 100 metres from educational institutions.)
ಕಳೆದ ಡಿ.7ರಂದು ಕುಂಟಿಕಾನದಲ್ಲಿ ಬಾರ್ & ರೆಸ್ಟೋರೆಂಟ್, ಶಾಲೆಯ ಸುಮಾರು 80  ಮೀಟರ್ ದೂರದಲ್ಲಿದ್ದು, ಕಾನೂನು ಬಾಹಿರವಾಗಿದೆ ಎಂದು ದೂರಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿ, ಆರಂಭಿಸದಂತೆ ತಿಳಿಸಿದ್ದರು. ಆದರೂ ಪ್ರತಿಭಟನೆಯನ್ನು ಲೆಕ್ಕಿಸದೆ ಜನಪ್ರತಿನಿಧಿಗಳೆಂದೆಣಿಸಿಕೊಂಡವರೇ ಉದ್ಘಾಟನೆಗೊಳಿಸಿದ್ದು, ಖೇದಕರ ವಿಷಯ.
ಆರಂಭಗೊಳ್ಳುವುದಕ್ಕಿಂತ ಮುಂಚೆ ಅಬಕಾರಿ ಆಯುಕ್ತರು ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಶಾಲಾಡಳಿತ ಸಮಿತಿಯು ಮನವಿಯನ್ನು ಸಲ್ಲಿಸಲಾಗಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ದ.ಕ. ಮಕ್ಕಳ ಕಲ್ಯಾಣ ಇಲಾಖೆಯ ಅಧ್ಯಕ್ಷರಿಗೆ “ಪೋಸ್ಟ್ ಕಾರ್ಡ್ ಚಳವಳಿ’’ ಆರಂಭಿಸಿದ್ದಾರೆ.
ಎಸ್ ಐ ಓ ಬೆಂಬಲ: ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿರುವ ಬಾರ್ & ರೆಸ್ಟೋರೆಂಟ್ ಅನ್ನು ಮುಚ್ಚಬೇಕೆಂದು ಆಗ್ರಹಿಸಿರುವ ಎಸ್ ಐ ಓ ದ.ಕ. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಫ್ನಾನ್ ಹಸನ್, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಶಾಲೆಗೆ ಭೇಟಿ ನೀಡಿದ ಎಸ್ ಐ ಓ ನಿಯೋಗದಲ್ಲಿ ಎಸ್ ಐ ಓ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಅಫ್ನಾನ್ ಹಸನ್ ಹಾಗೂ ಸದಸ್ಯರಾದ ಶಾಕೀಬ್ ಉಳ್ಳಾಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಂತ ಹಾಗೂ ಶಾಲೆಯ ಕರೆಸ್ಪಾಂಡೆಂಟ್ ಸಿಸ್ಟರ್ ಶಾಂತಿ ಮತ್ತಿತರರು ಉಪಸ್ಥಿತರಿದ್ದರು.