ವಿವಾಹ ವಿಚ್ಛೇದನಕ್ಕೂ ಇಸ್ಲಾಮ್ ಗೌರವ ನೀಡಿದೆ

0
251

ಸನ್ಮಾರ್ಗ ವಾರ್ತೆ

✍️ ಪಿ. ರುಕ್ಸಾನಾ

ಮಗಳೇ, “ಆತ ತಲಾಕ್ ಹೇಳಿದನಲ್ಲವೇ? ಆಕೆ ಈಗ ಎಲ್ಲಿದ್ದಾಳೆ?”
ಈ ಪ್ರಶ್ನೆಗೆ ಆಕೆಯ ಎಂದಿನ ಸಾಮಾನ್ಯ ಉತ್ತರ ಹೀಗಿತ್ತು. “ಆಕೆ ತನ್ನ ಮನೆಯಲ್ಲಿದ್ದಾಳೆ. ಆತ ತನ್ನ ಮನೆಯಲ್ಲಿದ್ದಾನೆ.” ವಿವಾಹವೆಂಬ ದೃಢವಾದ ಬಿಡಿಸಲಾಗದ ಬಂಧವೆಂಬಂತೆ ವಿವಾಹ ವಿಚ್ಚೇದನಕ್ಕೂ ಇಸ್ಲಾಮ್ ಬಹಳ ಗೌರವ ನೀಡಿದೆ. ತಲಾಕ್ ಹೇಳಲ್ಪಟ್ಟ ಮಹಿಳೆಯನ್ನು ಮನೆಯಿಂದ ಹೊರ ಹಾಕಬಾರದು ಅಥವಾ ಆಕೆಯೇ ಸ್ವತಃ ಹೊರ ಹೋಗದೆ ಸಂಗಾತಿಯ ಜೊತೆ ಇರಬೇಕು. ಇದು ಇಸ್ಲಾಮ್ `ಇದ್ದತ್’ ಕಾಲವನ್ನು ಹೇಗೆ ಕಳೆಯಬೇಕೆಂದು ನೀಡಿದ ಬಹಳ ಯುಕ್ತಿಯಿಂದ ಕೂಡಿದ ಆದೇಶವಾಗಿದೆ. ಆದರೆ ಈ ಯುಕ್ತಿ ಪೂರ್ಣವಾದ ಆದೇಶವನ್ನು ಮುಸ್ಲಿಮ್ ಸಮುದಾಯವು ಕೇವಲವಾಗಿ ಕಾಣುತ್ತಿದೆ. ವಿವಾಹ ವಿಚ್ಛೇದನದ ಬಳಿಕ ಪತಿಯ ಮನೆಯಲ್ಲಿಯೇ ಆತನ ಜೊತೆಯೇ ಬಾಳಬೇಕೆಂಬ ಜಗತ್ತಿನ ಸೃಷ್ಟಿಕರ್ತನ ಆದೇಶದ ಬಗ್ಗೆ ಈ ಸಮುದಾಯ ಯಾಕೆ ಗೌರವಯುತವಾಗಿ ವರ್ತಿಸುತ್ತಿಲ್ಲ?

“ಸಂದೇಶವಾಹಕರೇ, ನೀವು ಸ್ತ್ರೀಯರಿಗೆ ತಲಾಕ್ ಕೊಡುವಾಗ ಅವರಿಗೆ ಅವರ ಇದ್ದತ್‌ಗಾಗಿ ತಲಾಕ್ ಕೊಡಿರಿ ಮತ್ತು ಇದ್ದತಿನ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ ಮತ್ತು ನಿಮ್ಮ ಪ್ರಭುವಾದ ಅಲ್ಲಾಹನನ್ನು ಭಯಪಡಿರಿ. (ಇದ್ದತಿನ ಕಾಲಾವಧಿಯಲ್ಲಿ) ಅವರು ಸ್ಪಷ್ಟವಾದ ಅಶ್ಲೀಲ ಕಾರ್ಯವೆಸಗದಿರುವಾಗ ನೀವು ಅವರನ್ನು ಅವರ ಮನೆಗಳಿಂದ ಹೊರ ಹಾಕಬಾರದು ಮತ್ತು ಅವರಾಗಿಯೂ ಹೊರಟು ಹೋಗಬಾರದು. ಅಲ್ಲಾಹನು ನಿಶ್ಚಯಿಸಿದ ಮೇರೆಗಳಿವು. ಅಲ್ಲಾಹನ ಮೇರೆಗಳನ್ನು ಮೀರುವವನು ತನ್ನ ಮೇಲೆ ತಾನೇ ಅಕ್ರಮವೆಸಗುವನು. ಪ್ರಾಯಶಃ ಇದಾದ ಬಳಿಕ ಅಲ್ಲಾಹನು (ಹೊಂದಾಣಿಕೆಯ) ಯಾವುದಾದರೂ ದಾರಿಯನ್ನು ಉಂಟು ಮಾಡಲೂ ಬಹುದು. ನಿಮಗೆ ಅರಿಯದು. ಅನಂತರ ಅವರು ತಮ್ಮ (ಇದ್ದತಿನ) ಕಾಲಾವಧಿಯ ಕೊನೆಯನ್ನು ತಲುಪಿದಾಗ ಅವರನ್ನು ಉತ್ತಮ ರೀತಿಯಿಂದ (ನಿಮ್ಮ ವಿವಾಹದಲ್ಲಿ) ತಡೆದಿರಿಸಿಕೊಳ್ಳಿರಿ. ಇಲ್ಲವೆ ಉತ್ತಮ ರೀತಿಯಿಂದ ಅವರಿಂದ ಬೇರ್ಪಡಿರಿ ಮತ್ತು ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರನ್ನು ಸಾಕ್ಷಿಗಳಾಗಿ ಮಾಡಿಕೊಳ್ಳಿರಿ ಮತ್ತು (ಸಾಕ್ಷಿಗಳಾಗುವವರೇ), ಸಾಕ್ಷ್ಯವನ್ನು ಸರಿಯಾದ ರೀತಿಯಲ್ಲಿ ಅಲ್ಲಾಹನಿಗಾಗಿಯೇ ನೀಡಿರಿ. ನಿಮಗೆ ಉಪದೇಶಿಸಲಾಗುತ್ತಿರುವ ವಿಷಯಗಳಿವು. ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸುವ ಪ್ರತಿಯೊಬ್ಬನಿಗೆ. ಅಲ್ಲಾಹನನ್ನು ಭಯಪಡುತ್ತ ಕಾರ್ಯವೆಸಗುವವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ತೆರೆಯುವನು” (ಅತ್ತಲಾಕ್: 1-2)

ವಿವಾಹ ವಿಚ್ಛೇದನ ಮಾಡಲು ಬಯಸುವ ಸತ್ಯವಿಶ್ವಾಸಿಗಳೊಂದಿಗೆ ಇಸ್ಲಾಮ್ ಕೆಲವು ವಿಚಾರಗಳನ್ನು ಬಹಳ ಸ್ಪಷ್ಟವಾಗಿ ಆದೇಶಿಸಿರುವುದನ್ನು ಕಾಣಬಹುದು.

ಅಬ್ದುಲ್ಲಾ ಬಿನ್ ಉಮರ್(ರ) ರವರು ತನ್ನ ಪತ್ನಿಗೆ ಆರ್ತವಕಾಲದಲ್ಲಿ ವಿಚ್ಛೇದಿನ ನೀಡಿದ್ದರು. ಆಗ ಪ್ರವಾದಿವರ್ಯರು(ಸ) ಈ ವಚನವನ್ನು ಹೀಗೆ ಸ್ಪಷ್ಟಪಡಿಸಿದ್ದರು. ಉಮರ್(ರ) ರವರು ಈ ವಿಚಾರವನ್ನು ಪ್ರವಾದಿವರ್ಯರ(ಸ) ಬಳಿ ವಿವರಿಸಿದಾಗ ಪ್ರವಾದಿವರ್ಯರು (ಸ) ತೀವ್ರ ಅತೃಪ್ತಿ ವ್ಯಕ್ತಪಡಿಸಿ, ಅವರು ಪತ್ನಿಯನ್ನು ಮರಳಿ ಪಡೆದು ಆಕೆ ಮಾಲಿನ್ಯದಿಂದ ಮುಕ್ತರಾಗುವವರೆಗೆ ಜೊತೆಯಲ್ಲಿ ವಾಸಿಸಲಿ. ಆ ನಂತರ ವಿವಾಹ ವಿಚ್ಛೇದನ ನೀಡಲು ಬಯಸುವುದಾದರೆ ದೈಹಿಕ ಸಂಪರ್ಕ ಬೆಳೆಸದೆ ಶುದ್ದಿಯಾಗಿರುವಾಗ ವಿವಾಹ ವಿಚ್ಛೇದನ ನೀಡಲಿ. ಇದು ಇದ್ದತ್‌ಗಾಗಿ ತಲಾಕ್ ಹೇಳಬೇಕೆಂದು ಅಲ್ಲಾಹನು ಆದೇಶಿಸಿರುವುದರ ತಾತ್ಪರ್ಯ. ಅಲ್ಲಾಹನಿಗೆ ಮಾತ್ರ ಜನರ ಮಾನಸಿಕ, ದೈಹಿಕ ಗುಣ ಸ್ವಭಾವವನ್ನು ಹೆಚ್ಚು ಅರಿತಿರುವುದು.

ಆರ್ತವ ಕಾಲದಲ್ಲಿ ನೀವು ವಿವಾಹ ವಿಚ್ಛೇದನ ನೀಡಬೇಡಿ ಎಂದು ಸತ್ಯವಿಶ್ವಾಸಿಗಳೊಂದಿಗೆ ಪವಿತ್ರ ಕುರ್‌ಆನ್ ಆದೇಶಿಸುವಾಗ ಇಸ್ಲಾಮಿನ ಶಿಕ್ಷಣದ ಈ ವೈಶಿಷ್ಟ್ಯತೆಗಳ ಬಗ್ಗೆ ಮನವರಿಕೆಯಾಗುತ್ತದೆ. ಆರ್ತವ ಕಾಲದಲ್ಲಿ ಹೆಣ್ಣಿನ ಮಾನಸಿಕ ಸ್ಥಿತಿಯು ಬದಲಾಗಿರುತ್ತದೆ. ಆ ಸಮಯದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳ ವ್ಯತ್ಯಯದಲ್ಲಿ ತೀವ್ರವಾದ ಮಾನಸಿಕ ಸಂಘರ್ಷ, ಅಸ್ವಸ್ಥತೆ, ವಿಷಾದ, ದೈಹಿಕ ನೋವು ಯಾತನೆ ನಿಯಂತ್ರಿಸಲಾಗದೆ ಮಹಿಳೆಯರಲ್ಲಿ ಕೋಪ ಉಕ್ಕಿ ಬರುತ್ತದೆ. ಈ ಸ್ಥಿತಿಯಲ್ಲಿ ಏನಾದರೂ ಜಗಳ ತರ್ಕ ಉಂಟಾದರೆ ಅದನ್ನು ಪರಿಹರಿಸಲು ದಂಪತಿಗಳು ಅಸಹಾಯಕರಾಗುತ್ತಾರೆ. ಈ ಹಾರ್ಮೋನಿನ ಬದಲಾವಣೆ, ಒಂದುಗೂಡಿ ಸರಸ-ಸಲ್ಲಾಪಗಳಿಂದ ಆಕೆಯನ್ನು ಕೆಲವೊಮ್ಮೆ ತಡೆಯುತ್ತದೆ. ಮಾತ್ರವಲ್ಲ, ಪುರುಷರ ಸಮೀಪಿಸುವಿಕೆಯು ಆಕೆಯನ್ನು ಅಸಹನೆಗೀಡು ಮಾಡುತ್ತದೆ. ದಾಂಪತ್ಯ ಬದುಕಿನ ಹಲವು ಜಗಳ ತರ್ಕಗಳನ್ನು ತಡೆದು ಹಾಕಲು ಒಂದಾಗಲು ಪ್ರೇರೇಪಿಸುವ ಒಂದು ಘಟಕವಾಗಿ ದಂಪತಿಗಳ ನಡುವಿನ ದೈಹಿಕ ಸಂಪರ್ಕವಾಗಿದೆ. ಈ ಸಾಧ್ಯತೆಯನ್ನು ತಡೆಯುವ ಈ ಸಂದರ್ಭಗಳಲ್ಲಿ ವಿವಾಹ ವಿಚ್ಛೇದನ ನಡೆಸಬಾರದು ಎಂದು ಇಸ್ಲಾಮ್ ಆದೇಶಿಸಿರುವುದು ಮಾನವೀಯ ನೆಲೆಯಲ್ಲಾಗಿದೆ. ಹೃದಯಂಗಮವಾದ ದಾಂಪತ್ಯ ಬದುಕಿಗೆ ಕುಟುಂಬ ಜೀವನದ ಐಕ್ಯತೆಗೆ ಪ್ರಾಧಾನ್ಯತೆ ನೀಡುವ ಇಸ್ಲಾಮ್ ಬಾಳ ಸಂಗಾತಿಗಳನ್ನು ಜೋಡಿಸುವ ಎಲ್ಲಾ ಮಾರ್ಗಗಳನ್ನೂ ಇಸ್ಲಾಮ್ ತೆರೆದಿದೆ. ದೈಹಿಕ ಸಂಪರ್ಕ ಬೆಳೆಸಿದ ಸ್ಥಿತಿಯಲ್ಲಿ ವಿವಾಹ ವಿಚ್ಛೇದನ ನಡೆಸಬಾರದು. ಎಂದು ಆದೇಶಿಸಿರುವುದು ಇದೇ ಕಾರಣದಿಂದಾಗಿದೆ.

ದಾಂಪತ್ಯ ಸಂಬಂಧವನ್ನು ಕಡಿದು ಹಾಕಬೇಕೆಂದು ನಿರ್ಧರಿಸಿರುವವರಿಗೆ ತಮ್ಮ ನಿರ್ಧಾರದ ಬಗ್ಗೆ ಮರು ಪರಿಶೀಲಿಸುವ ಅವಕಾಶ ಕೂಡಾ ಇದಾಗಿದೆ. ಅಂತೆಯೇ ಇಂತಹಾ ಸಂದರ್ಭದಲ್ಲಿ ಪಾಪ ಪ್ರಜ್ಞೆಗೆ, ತಣಿಯದ ಆತ್ಮ ಸಂಘರ್ಷಕ್ಕೆ ಅವಕಾಶ ಮಾಡಿಕೊಡುವ ಪರಿಸ್ಥಿತಿಯಲ್ಲಿ ಸಿಲುಕಿ ಬಿಡಬಾರದೆಂಬ ಉದ್ದೇಶದೊಂದಿಗೆ ದೇವನ ಈ ಕಟ್ಟಾಜ್ಞೆಗಳೆಲ್ಲವೂ ಸತ್ಯವಿಶ್ವಾಸಿಗಳಿಗೆ ಕಲಿಸುತ್ತಿದೆ. ಇದ್ದತ್‌ನ ಕಾಲಾವಧಿಯಲ್ಲಿ ಆಕೆಯ ಆಹಾರ ವಸತಿ ಭದ್ರತೆಯು ಪತಿಯ ಹೊಣೆಗಾರಿಕೆಯಾಗಿದೆ. ಮಾನಸಿಕವಾಗಿ ದ್ವೇಷಿಸಿ ಸಂಬಂಧ ವಿಚ್ಛೇದಿಸಲು ಸಿದ್ಧಳಾಗಿರುವ ಓರ್ವಳಿಗೆ ಬೇಕಾಗಿ ಹಣ ವ್ಯಯಿಸುವ ಪುರುಷನಿಗೆ ಸಂಬಂಧಿಸಿ ಬೇಸರ ಆತ್ಮ ಸಂಘರ್ಷ ಸೃಷ್ಟಿಸುವ ವಿಚಾರದಲ್ಲಿ ತರ್ಕವಿಲ್ಲ. ಆದರೆ ಆ ಮಾನಸಿಕ ಸ್ಥಿತಿಯನ್ನು ಸುಭದ್ರವಾಗಿರಿಸಿಕೊಂಡು ಜಗದ ಸೃಷ್ಟಿಕರ್ತ ಈ ತೀರ್ಮಾನ ಕೈಗೊಳ್ಳಬೇಕೆನ್ನತ್ತಾನೆ.

“ಮತ್ತು ಅವನು ಊಹಿಸಿಯೂ ಇರದಂತಹ ಕಡೆಗಳಿಂದ ಅವನಿಗೆ ಜೀವನಾಧಾರ ನೀಡುವನು. ಅಲ್ಲಾಹನ ಮೇಲೆ ಭರವಸೆ ಇಡುವವನ ಪಾಲಿಗೆ ಅವನೇ ಸಾಕು. ಅಲ್ಲಾಹನು ತಮ್ಮ ಕಾರ್ಯವನ್ನು ಪೂರ್ತಿಗೊಳಿಸಿಯೇ ತೀರುತ್ತಾನೆ. ಅಲ್ಲಾಹನು ಪ್ರತಿಯೊಂದು ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿಟ್ಟಿರುತ್ತಾನೆ.” (ಅತ್ತಲಾಕ್: 3)

ಎಲ್ಲವನ್ನೂ ಸಹಿಸಿಕೊಂಡು ಬಾಳಲು ನಿರ್ಧರಿಸುವಾಗಲೂ ಗೌರವಯುತವಾಗಿ ಮುಂದೆ ಸಾಗಿರಿ ಅಥವಾ ಬೇರ್ಪಡಿರಿ. ಎಂಬ ದಾರಿಯೊಂದೇ ಕಾಣುವಾಗ ಇರುವ ಮಾನಸಿಕ ಸ್ಥಿತಿಯೂ ಭಿನ್ನವಾಗಿರುತ್ತದೆ. ಆರಂಭ ಕಾಲದಲ್ಲಿರುವ ಕೋಪಾವೇಶದ ಸ್ಥಿತಿಯು ದಂಪತಿಗಳಲ್ಲಿ ಇದ್ದತ್ ಕಾಲಾವಧಿಯಲ್ಲಿ ಇರದು. ಇಷ್ಟು ಕಾಲ ಒಂದಾಗಿ ಬದುಕಿದ ನಾವು ಬೇರ್ಪಡಲು ಹೋಗುವೆವು ಎಂಬ ಚಿಂತೆ ಸಹಜವಾಗಿಯೇ ಮರು ತೀರ್ಮಾನಗಳಿಗೆ ಅವರನ್ನು ಪ್ರೇರೇಪಿಸುತ್ತದೆ. ಈ ಕಾಲಾವಧಿಯಲ್ಲಿ ಅವರ ನಡುವಿನ ಒಂದು ನೋಟ ಅಥವಾ ಆಕಸ್ಮಿಕವಾದ ಒಂದು ಸ್ಪರ್ಶ ಅವರ ಮಧ್ಯೆ ಇರುವಂತಹ ಅನುರಾಗ ಬಂಧನವು ಪುಟಿದೇಳಲು ಪ್ರೇರಕವಾಗಬಹುದು. ಇದ್ದತ್ ಕಾಲಾವಧಿಯಲ್ಲಿ ಮಕ್ಕಳ ಆಟೋಟ ತುಂಟಾಟಗಳ ಬಗ್ಗೆ ಪರಸ್ಪರ ಮನ ಬಿಚ್ಚಿ ಮಾತನಾಡಿದಾಗ ಮತ್ತೆ ಮರಳಿ ಒಂದಾಗಿ ಬಾಳುವ ಹೊಸ ತೀರ್ಮಾನ ತಳೆಯಲು ಇದು ಸಾಕಾಗುತ್ತದೆ.

ಮರಳಿ ಪಡೆಯುವ ವಿಚಾರದಲ್ಲಿ ವಿದ್ವಾಂಸರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಇಮಾಮ್ ಶಾಫಿಈ(ರ)ಯವರ ಅಭಿಪ್ರಾಯದನುಸಾರ ಕೃತಿಯಲ್ಲಿ ಮಹಿಳೆಯನ್ನು ಮರಳಿ ಪಡೆಯಬಹುದು. ಕರ್ಮಗಳ ಮೂಲಕ ಪಡೆಯಲಾಗದು. ನಾನು ವಿವಾಹ ವಿಚ್ಛೇದನದಿಂದ ಹಿಂದೆ ಮರಳಿದ್ದೇನೆ ಎಂದು ಸ್ಪಷ್ಟವಾಗಿ ಹೇಳದೆ ಪುರುಷನು ತನ್ನ ವಿವಾಹ ವಿಚ್ಛೇದನದಿಂದ ದೈಹಿಕವಾಗಿ ಸಂಬಂಧ ಬೆಳೆಸುವುದು ಸಹವಾಸ ಬೆಳೆಸುವುದು ಇದನ್ನು ಮಾಡಿದರೆ ಮರಳಿ ಪಡೆಯುವುದು ಎಂಬ ಉದ್ದೇಶದಿಂದ ಮಾಡಿದರೂ ಕೂಡಾ ಅದನ್ನು ಮರಳುವಿಕೆಯಾಗಿ ಅಂಗೀಕರಿಸಲಾಗದು. ಮಾತ್ರವಲ್ಲ. ಆ ಸ್ಥಿತಿಯಲ್ಲಿ ಪತ್ನಿಯ ಜೊತೆ ಯಾವುದೇ ರೀತಿಯಲ್ಲಿ ಸುಖ ಪಡೆಯುವುದು ನಿಷಿದ್ಧವಾಗಿದೆ. ಇಮಾಮ್ ಮಾಲಿಕ್‌ರವರ ಅಭಿಪ್ರಾಯದ ಪ್ರಕಾರ ವಿವಾಹ ವಿಚ್ಛೇದನವನ್ನು ಮರಳಿ ಪಡೆಯುವುದು ಮಾತಿನಲ್ಲಿಯೂ ಕರ್ಮದಲ್ಲಿಯೂ ಆಗುತ್ತದೆ. ಮಾತಿನಲ್ಲಿ ಮರಳುತ್ತಾರೆಂದಾದರೆ ಪುರುಷನು ಸ್ಪಷ್ಟವಾಗಿ ಪದವುಚ್ಚರಿಸಿದರೆ ಆ ವ್ಯಕ್ತಿ ವಿವಾಹ ವಿಚ್ಛೇದನ ರದ್ದುಪಡಿಸಲು ಬಯಸಿದರೂ ಬಯಸದಿದ್ದರೂ ಅದು ಸಿಂಧುವಾಗುತ್ತದೆ. ತಮಾಷೆಗಾಗಿ ಕೂಡಾ ವಿಚ್ಛೇದನದ ರದ್ದತಿ ಮತ್ತು ಮರಳುವಿಕೆಯ ಬಗ್ಗೆ ಸ್ಪಷ್ಟವಾಗಿ ಉಚ್ಚರಿಸಿ ಹೇಳಿದರೆ ಅದು ಸಿಂಧುವಾಗುತ್ತದೆ. ಆದರೆ ಮಾತಿನಲ್ಲಿ ಸ್ಪಷ್ಟವಾಗಿ ಹೇಳದಿದ್ದರೂ ಅದು ಹೇಳಿರುವುದು ಮರಳುವಿಕೆಯ ಉದ್ದೇಶದಿಂದಾದರೆ ಮಾತ್ರ ಅದು ಮರಳುವಿಕೆಯಾಗಿ ಪರಿಗಣಿಸಲ್ಪಡುವುದು.

ಪರಸ್ಪರ ಸರಸ ಸಲ್ಲಾಪ, ಬೆರೆಯುವಿಕೆ, ಲೈಂಗಿಕ ಸಂಬಂಧ ಮುಂತಾದ ಕರ್ಮಗಳ ಮೂಲಕ ಮರಳುವಿಕೆ ಎಂಬ ಉದ್ದೇಶದಿಂದ ಮಾಡಿದ್ದರೆ ಮಾತ್ರ ಅದು ಕಾನೂನು ಬದ್ಧವಾದ ಮರಳುವಿಕೆಯಾಗುವುದು. ಮಾತಿನ ಮೂಲಕದ ಮರಳುವಿಕೆಗೆ ಸಂಬಂಧಿಸಿ ಮಾಲಿಕಿ ಮದ್ಹಬ್‌ನ ನಿಲುವು ಹನಫೀ, ಹಂಬಲೀ ಮದ್ಹಬ್‌ನದ್ದೂ ಆಗಿದೆ. ಆದರೆ ಕರ್ಮದ ಮೂಲಕ ಆಗುವ ಮರಳುವಿಕೆಯ ಬಗ್ಗೆ ಈ ಎರಡೂ ಮದ್‌ಹಬ್‌ನ ನಿಲುವು ಹೀಗೆ ಇದೆ “ರಜ್‌ಈಯಾದ ವಿವಾಹ ವಿಚ್ಛೇದಿತೆಯೊಂದಿಗೆ ಇದ್ದತ್‌ನ ಸಮಯದಲ್ಲಿ ಪತಿಯು ಲೈಂಗಿಕ ಸಂಬಂಧ ಮಾಡಿದರೆ ಅದುವೇ ಮರಳುವಿಕೆಯಾಗುವುದು. ಆದ್ದರಿಂದ ಆ ವ್ಯಕ್ತಿಯ ಮರಳುವಿಕೆಯ ಉದ್ದೇಶದ ಪ್ರಶ್ನೆ ಅಲ್ಲಿ ಉದ್ಭವಿಸುವುದಿಲ್ಲ.

ಏನೇ ಆಗಲೀ ಇದ್ದತ್‌ನ ಅವಧಿಯಲ್ಲಿ ಆಕೆಯನ್ನು ಹೊರ ಕಳಿಸುವುದಾಗಲೀ ಆಕೆ ಸ್ವಯಂ ಹೊರ ಹೋಗಬಾರದೆಂದು ಹೇಳುವ ಇಸ್ಲಾಮ್ ಜವಾಬ್ದಾರಿಕೆಯಿಲ್ಲದ ಸತ್ಯವಿಶ್ವಾಸಿಯ ವರ್ತನೆ ದೇವಧಿಕ್ಕಾರದ್ದು ಎಂದು ಹೇಳಿದೆ. ಓರ್ವರು ಸುನ್ನತ್‌ನ ಆದೇಶಕ್ಕೆ ವಿರುದ್ಧವಾಗಿ ತಲಾಕ್ ಹೇಳಿ ಇದ್ದತ್ ಕಾಲಾವಧಿಯನ್ನು ಲೆಕ್ಕಿಸದೆ ಪತ್ನಿಯನ್ನು ಸಕಾರಣವಿಲ್ಲದೆ ಮನೆಯಿಂದ ಹೊರಕಳಿಸುವುದು. ಇದ್ದತ್ ಮುಗಿದ ಬಳಿಕ ಮಹಿಳೆಯನ್ನು ಹಿಂಸಿಸಲು ತಲಾಕ್ ಮರಳಿ ಪಡೆಯುವುದು ತಲಾಕ್ ನೀಡಲು ಹಾಗೂ ಮರಳಿ ಪಡೆಯಲು ಸಾಕ್ಷಿ ಇಲ್ಲದಿರುವುದು. ಹೀಗೆಲ್ಲ ಮಾಡಿದರೆ ಅದು ಅಲ್ಲಾಹನ ಆದೇಶಕ್ಕೆ ವಿರುದ್ಧವಾದುದಾಗಿದೆ. ಪ್ರಾಮಾಣಿಕ ಸತ್ಯವಿಶ್ವಾಸಿಗಳು ಬದುಕಿನ ಸರ್ವ ರಂಗಗಳಲ್ಲೂ ಸೂಕ್ಷ್ಮವಾಗಿ ಅಲ್ಲಾಹನ ಆದೇಶವನ್ನು ಅನುಸರಿಸುವವರಾಗಿದ್ದಾರೆ. ಅದರ ಹೊರತಾಗಿ ಬೇರ್ಪಡಲು ಬಯಸುವವರು ಪರಸ್ಪರ ಕೆಸರೆರಚಿಕೊಂಡು ಶತ್ರುಗಳಾಗಿ ಘೋಷಿಸಿ ಸಾಯುವವರೆಗೆ ದ್ವೇಷವನ್ನು ಪಸರಿಸುತ್ತಿರುವ ವ್ಯಕ್ತಿಗಳು ಕುಟುಂಬಗಳು ಸಮಾಜದಲ್ಲಿ ತಲೆಯೆತ್ತುತ್ತಿರುತ್ತದೆ. ವಿಚ್ಛೇದಿತಗೊಂಡರೂ ಗೌರವಾದರದೊಂದಿಗೆ ಸೌಹಾರ್ದದಿಂದ ಸ್ಮರಿಸುವಂತಿರಬೇಕು ನಮ್ಮ ಬದುಕಿನ ಪ್ರತಿ ನಿಮಿಷಗಳು.

LEAVE A REPLY

Please enter your comment!
Please enter your name here