ಜಡ್ಜ್, ಪೋಲಿಸ್ ಮತ್ತು ವಕೀಲರ ನಡುವೆ ಜಟಾಪಟಿ; ಲಾಠಿಚಾರ್ಜ್‌, ಪೋಲಿಸ್ ಚೌಕಿಗೆ ಬೆಂಕಿ – ವಿಡಿಯೋ

0
523

ಗಾಜಿಯಾಬಾದ್: ವಿಚಾರಣೆಯ ವೇಳೆ ವಕೀಲರು ಪೊಲೀಸರ ಲಾಠಿ ಚಾರ್ಜ್‌ಗೆ ಒಳಗಾದ ಘಟನೆ ವರದಿಯಾಗಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್ ನ್ಯಾಯಾಲಯದಲ್ಲಿ ಅಕ್ಟೋಬರ್ 29, ಮಂಗಳವಾರ ಈ ಘಟನೆ ನಡೆದಿದೆ. ನ್ಯಾಯಾಧೀಶರ ಆದೇಶದ ಮೇರೆಗೆ ವಕೀಲರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ ಈ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗಿದ್ದು, ಅದರಲ್ಲಿ ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿದ್ದ ಘರ್ಷಣೆಯನ್ನು ನೋಡಬಹುದಾಗಿದೆ.

ರಾಜ್ ನಗರ ಪ್ರದೇಶದಲ್ಲಿರುವ ಗಾಜಿಯಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಂಕೀರ್ಣದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ವಕೀಲರ ಮತ್ತು ನ್ಯಾಯಾಧೀಶರ ನಡುವೆ ಜಾಮೀನು ವಿಚಾರದ ಕುರಿತು ತೀವ್ರ ವಾಗ್ವಾದ ಉಲ್ಬಣಗೊಂಡಿದ್ದು, ವಕೀಲರು ಜಾಮೀನು ನೀಡುವಂತೆ ಒತ್ತಾಯಿಸಿದಾಗ, ನ್ಯಾಯಾಧೀಶರು ಅದನ್ನು ತಾತ್ಕಾಲಿಕವಾಗಿ ತಿರಸ್ಕರಿಸಿದರು, ಇದರಿಂದ ವಕೀಲರಲ್ಲಿ ಅಸಮಾಧಾನಗೊಂಡರು. ವಕೀಲರ ಗುಂಪು ನ್ಯಾಯಾಧೀಶರ ಕೊಠಡಿಯನ್ನು ಸುತ್ತುವರಿದಾಗ ಅಸಮಾಧಾನ ಮತ್ತಷ್ಟು ತೀವ್ರತೆಯನ್ನು ಪಡೆದಿತು. ವಕೀಲರು ನ್ಯಾಯಾಧೀಶರ ವಿರುದ್ದ ಘೋಷಣೆಗಳನ್ನು ಕೂಗಲಾರಂಭಿಸಿದ್ದು, ಕೆಲವರು ನ್ಯಾಯಾಧೀಶರ ಕೊಠಡಿಗೆ ಪ್ರವೇಶಿಸಲು ಯತ್ನಿಸಿದರು.

ಪೊಲೀಸರು ವಕೀಲರನ್ನು ತಡೆಯಲು ಪ್ರಯತ್ನ ಮಾಡಿದರೂ, ಗದ್ದಲ ತೀವ್ರವಾದ ಕಾರಣ, ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಲು ಆದೇಶಿಸಲಾಯಿತು. ಈ ಸಂದರ್ಭದಲ್ಲಿ ಹಲವು ವಕೀಲರು ಮತ್ತು ಪೊಲೀಸರು ಗಾಯಗೊಂಡಿದ್ದು, ಕೆಲವು ವಕೀಲರಿಗೆ ತೀವ್ರ ಗಾಯಗಳಾದವು.

ವಕೀಲರು ಲಾಠಿ ಚಾರ್ಜ್ ಮೂಲಕ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ತೀವ್ರವಾಗಿ ವಿರೋಧಿಸಿ ನ್ಯಾಯಾಲಯದ ಆವರಣದಲ್ಲಿದ್ದ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದು, ಅನೇಕ ವಕೀಲರು ನ್ಯಾಯಾಧೀಶರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ನ್ಯಾಯಾಲಯದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವರು ನ್ಯಾಯಾಧೀಶರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿಲ್ಲ ಮತ್ತು ದೌರ್ಜನ್ಯವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ವಿವಾದ ತೀವ್ರಗೊಂಡಾಗ, ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಲಘು ಲಾಠಿ ಪ್ರಹಾರ ಮಾಡಿ ವಕೀಲರ ಗುಂಪನ್ನು ಚದುರಿಸುವ ಪ್ರಯತ್ನ ಮಾಡಿದರು. ಆದರೆ, ಆಕ್ರೋಶಿತ ವಕೀಲರು ಪೊಲೀಸರ ನಿಯಂತ್ರಣವನ್ನು ಮೀರಿ, ನ್ಯಾಯಾಲಯದ ಆವರಣದಲ್ಲಿದ್ದ ಪೊಲೀಸ್ ಚೌಕಿಗೆ ಬೆಂಕಿ ಹಚ್ಚಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ