ಪ್ರಪಂಚದಲ್ಲೇ ತಂಬಾಕು ಬಳಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

0
146

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ.30: ಜಗತ್ತಿನಲ್ಲಿ ಅತೀ ಹೆಚ್ಚು ತಂಬಾಕು ಉಪಯೋಗಿಸುವವರಲ್ಲಿ ಎರಡನೆ ಸ್ಥಾನದಲ್ಲಿ ಭಾರತ ಇದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದ್ದು, 2060ಕ್ಕೆ ಜಾಗತಿಕವಾಗಿ ಹೊಗೆಸೊಪ್ಪು ಸಂಬಂಧಿಸಿದ ರೋಗಗಳ ಸಾವಿನ ಪ್ರಮಾಣದಲ್ಲಿ ಶೇ. 50 ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಮೀಕ್ಷೆ ಪ್ರಕಾರ ಶೇ. 66ರಷ್ಟು 0-25 ವಯೋಮಾನದವರಲ್ಲಿ ತಂಬಾಕು ಬಳಕೆ ಅಧಿಕವಾಗಿದೆ. ಇದರಲ್ಲಿ ಶೇ. 45ರಷ್ಟು ಮಂದಿ ತಂಬಾಕು ಉಪಯೋಗಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲದವರು. ಬಳಕೆಯಾಗುವ ತಂಬಾಕಿನಲ್ಲಿ ಶೇ. 8ರಷ್ಟೇ ಕಾನೂನು ಬದ್ಧವಾಗಿ ಉತ್ಪಾದಿಸುವ ಸಿಗರೇಟ್ ಸೇವಿಸುತ್ತಾರೆ. ಉಳಿದ ಶೇ. 92 ರಷ್ಟು ಜನರು ಗುಣಮಟ್ಟ ರಹಿತ ತಂಬಾಕು ಉತ್ಪನ್ನಗಳಾದ ಬೀಡಿಗಳು ಚ್ಯೂಯಂಗ್ ತಂಬಾಕು. ಖಯನಿ ಮುಂತಾದುವು ಬಳಸುತ್ತಿದ್ದಾರೆ..

ಸ್ಟ್ರೈಸ್, ಉದ್ವಿಗ್ನತೆಗಳು ಹೊಗೆ ಸೊಪ್ಪು ಉಪಯೋಗದಿಂದ ಬರುತ್ತದೆ ಎಂದು ಸಂಶೋದಕರು ತಿಳಿಸಿದ್ದು 2019ರಲ್ಲಿ ಜಾಗತಿಕವಾಗಿ ಏಳು ದಶಲಕ್ಷಕ್ಕೂ ಹೆಚ್ಚು ತಂಬಾಕು ಸೇವನೆಯ ಕಾರಣಗಳಿಂದ ಸಾವುಗಳಾದವು. ಭಾರತದಲ್ಲಿ 1.35 ದಶಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯು ತಿಳಿಸಿದೆ.

ತಂಬಾಕು ಉಪಯೋಗ ನಿಯಂತ್ರಣಕ್ಕೂ ಸಾರ್ವಜನಿಕರ ಆರೋಗ್ಯ ರಕ್ಷಿಸಲು ಕಠಿಣ ಕಾನೂನುಗಳು ಭಾರತದಲ್ಲಿವೆ. ತಂಬಾಕು ಉತ್ಪಾದನೆ, ಮಾರಾಟ, ಬಳಕೆ ನಿಯಂತ್ರಿಸಿ ಹೊಗೆ ಸೊಪ್ಪುವಿನಿಂದ ಸಂರಕ್ಷಿಸುವ ಗುರಿಯೊಂದಿಗೆ ಲೋಕಾರೋಗ್ಯ ಸಂಘಟನೆ ಸೂಚಿಸಿದ ಹೊಗೆಸೊಪ್ಪು ನಿಯಂತ್ರಣಗಳನ್ನು ಜಾರಿಗೊಳಿಸಲು ಭಾರತ ಮುಂದಾಗಿದೆ.

LEAVE A REPLY

Please enter your comment!
Please enter your name here