ಪ.ಬಂಗಾಳ ಎಡಪಕ್ಷ -ಕಾಂಗ್ರೆಸ್ ಸೀಟು ಹೊಂದಾಣಿಕೆ

0
266

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 21: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷ ಕಾಂಗ್ರೆಸ್ ಇಂಡಿಯನ್ ಸೆಕ್ಯುಲರ್ ಫ್ರಂಟ್ ಐಎಸ್‍ಎಫ್ ಸಖ್ಯ ಮಾಡಿಕೊಂಡಿದ್ದು ಸೀಟು ಹೊಂದಾಣಿಕೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಔಪಚಾರಿಕ ಘೋಷಣೆ ಮಾತ್ರ ಬಾಕಿ ಉಳಿದಿದೆ.

ರಾಜ್ಯದಲ್ಲಿ ಒಟ್ಟು 42 ಸೀಟುಗಳಲ್ಲಿ ಕಾಂಗ್ರೆಸ್‍ಗೆ 12 ಸೀಟುಗಳನ್ನು ಕೊಡಲು ಸಿಪಿಎಂ ಸಹಿತ ಎಡಪಕ್ಷಗಳು ಸಜ್ಜಾಗಿದ್ದು ಎಡಪಕ್ಷ 24 ಸೀಟುಗಳಲ್ಲಿ ಸ್ಪಧಿಸಲಿದೆ. ಟಿಎಂಸಿ ಇಲ್ಲಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಘೊಷಿಸಿ ಚುನಾವಣಾ ಪ್ರಚಾರ ಶುರು ಮಾಡಿದೆ.

ಸಿಪಿಎಂ ಕಾಂಗ್ರೆಸ್‍ನೊಂದಿಗೆ ಯಾವುದೇ ಮಾತುಕತೆಗೂ ಮಮತಾ ಬ್ಯಾನರ್ಜಿ ಸಿದ್ಧವಿಲ್ಲ ಎಂದು ಸಿಪಿಎಂ ಪಶ್ಚಿಮ ಬಂಗಾಳ ಕಾರ್ಯದರ್ಶಿ ಮುಹಮ್ಮದ್ ಸಲೀಂ ಹೇಳಿದರು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎಡ ಪಕ್ಷಗಳ ನಡುವೆ ಎರಡು ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಇತ್ತು ಆದರೆ ಸಖ್ಯ ಮಾಡಿಕೊಂಡಿರಲಿಲ್ಲ. ಈ ಸಲ 10 ಸೀಟುಗಳ್ನು ಕಾಂಗ್ರೆಸ್ ಎಡಪಕ್ಷ ಪಾರ್ಟಿಗಳು ಕಾಂಗ್ರೆಸಿನ ಮುಂದಿಟ್ಟಿತ್ತು. 2021ರ ವಿಧಾನಸಭಾ ಚುನಾವಣೆಯಲ್ಲಿ ಐಎಸ್‍ಎಫ್ ಎಡಪಕ್ಷಗಳು ಮತ್ತು ಕಾಂಗ್ರೆಸ್ ಜೊತೆಗೂಡಿ ಸ್ಪರ್ಧಿಸಿದರೂ ದೊಡ್ಡ ಪ್ರಯೋಜನ ಆಗಿರಲಿಲ್ಲ.