ಮಸೀದಿಗಳ ಮೇಲೆ ಕೇಸರಿ ಪತಾಕೆ: ಅಲ್ಪಸಂಖ್ಯಾತರ ಮೌನದಿಂದ ಪರಿಸರದಲ್ಲಿ ಶಾಂತಿ

0
2623

ನವದೆಹಲಿ: ಕಾಸ್ಗಂಜ್‍ನಲ್ಲಿ ನಡೆದ ಘಟನಾ ರೀತಿಯಲ್ಲಿ ಘಟನೆ ದೆಹಲಿ ಯಲ್ಲಿಯೂ ಗಣರಾಜೋತ್ಸವದ ದಿನದಂದು ಕಿಡಿಗೇಡಿಗಳು ದೌರ್ಜನ್ಯ ಎಸಗಿದರು. ಅಲ್ಪಸಂಖ್ಯಾತ ಸಮು ದಾಯದವರ ಮೌನ ಪ್ರತಿಕ್ರಿಯೆಯಿಂದ ಪರಿಸರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಕಿಡಿಗೇಡಿಗಳು ನಗರಿಯ ಆರು ಪ್ರದೇಶಗಳಲ್ಲಿ ಅಲ್ಪಸಂಖ್ಯಾತರನ್ನು ನಿಂದಿಸುವ ಘೋಷಣೆ ಗಳನ್ನು ಕೂಗಿದ್ದಾರಲ್ಲದೇ ಮಸೀದಿಗಳ ಮೇಲೆ ಕೇಸರಿ ಪತಾಕೆಯನ್ನು ಹಾರಿಸಿದ್ದರು.
ಅಡ್ದಾವಲಿ ಜುಮಾ ಮಸೀದಿ, ಅಲಿಪುರ್, ಅಕ್ಬರ್ ಪುರ್ ಮಜ್ರಾ ಮಸೀದಿ, ಪಲ್ಲಗುನ್ ಮಸೀದಿ, ಹಮೀದ್‍ಪುರ್ ಮಸೀದಿಗಳ ಮೇಲೆ ದಂಗೆಕೋರರು ಕೇಸರಿ ಬಾವುಟಗಳನ್ನು ಹಾರಿಸಿದ್ದರು.
ಅಡ್ದಾವಾಲಿ ಜುಮಾ ಮಸೀದಿ ಯಲ್ಲಿ ನೂರಾರು ಜನರು ಶುಕ್ರವಾರದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಬೈಕುಗಳಲ್ಲಿ ಆಗಮಿಸಿದ ಕಿಡಿಗೇಡಿಗಳು ಮಸೀದಿಯೊಳಗಡೆ ನುಗ್ಗಿ ಪ್ರಾರ್ಥನೆ ಯಲ್ಲಿ ನಿರತರಾದವರನ್ನು ದೂಡಿದರು. ತದನಂತರ ಮಸೀದಿಯ ಮೇಲ್ಭಾಗಕ್ಕೆ ತೆರಳಿದ ಅವರು ಅಲ್ಲಿ ಕೇಸರಿ ಪತಾಕೆ ಗಳನ್ನು ಹಾರಿಸಿದರು. ಮಸೀದಿಯ ಪಾವಿತ್ರ್ಯತೆಯ ಕುರಿತು ನಂಬಿಕೆ ಇರಿಸದ ಅವರು ತಮ್ಮ ಬೂಟುಕಾಲಿನಲ್ಲೇ ಮೇಲ್ಬಾಗಕ್ಕೆ ತೆರಳಿದರು. ತದನಂತರ ಜೋರು ಜೋರಾಗಿ ಘೋಷಣೆಗಳನ್ನು ಕೂಗಿದರಾದರೂ ಮುಸ್ಲಿಮರು ಮೌನ ವಹಿಸಿದ್ದರಿಂದ ¸ ಸಂಭವನೀಯವಾದ ಕೋಮುಗಲಭೆಯು ವಿಫಲಗೊಂಡಿತು ಎಂದು ಅಸ್ಲಮ್ ಅಹ್ಮದ್ ತಿಳಿಸಿದ್ದಾರೆ.
ಕಿಡಿಗೇಡಿಗಳ ವಿರುದ್ಧ ದೆಹಲಿ ಪೋಲೀಸರಿಗೆ ದೂರು ನೀಡಲಾಗಿದೆ. ಆದರೆ ಇದುವರೆಗೆ ಎಫ್‍ಐಆರ್ ದಾಖ ಲಿಸಲಾಗಿಲ್ಲ ಮತ್ತು ಇದಕ್ಕೆ ಸಂ ಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ದೂರಿನ ಪ್ರಕಾರ ಬಿಜೆಪಿ ನಾಯಕ ಮತ್ತು ಅವರ ಪುತ್ರನ ಆಣತಿಯಂತೆ ದಂಗೆಕೋರರು ಗಲಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.