ಕರ್ನಾಟಕ: ಗಡಿಯಲ್ಲಿ ಕೊರೋನ ಕಟ್ಟುನಿಟ್ಟು ಕ್ರಮ: ವಾಹನ ಸಂಚಾರದಲ್ಲಿ ಇಳಿಮುಖ

0
447

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಕೇರಳದಿಂದ ಆಗಮಿಸುವವರಿಗೆ ಕೊರೋನ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಗೊಳಿಸಲಾಗಿದೆ. ಆದುದರಿಂದ ರಾಜ್ಯದಲ್ಲಿ ಬರುವ ಮತ್ತು ಹೋಗುವ ವಾಹನಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕೇರಳದಿಂದ ವರದಿಯಾಗಿದೆ. ಇದರೊಂದಿಗೆ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಮುಂತಾದ ವಾಹನಗಳ ಮೂಲಕ ಸಂಚಾರ ಪ್ರಮಾಣ ಇಳಿಕೆ ವ್ಯಕ್ತವಾಗುತ್ತಿದ್ದು, ರವಿವಾರ ಕೆಎಸ್‍‌ಆರ್‌‌ಟಿಸಿ ಬಸ್‌ಗಳನ್ನು ಗಡಿಯಿಂದಲೇ ಕರ್ನಾಟಕದ ಅಧಿಕಾರಿಗಳು ಕೇರಳಕ್ಕೆ ವಾಪಸು ಕಳುಹಿಸಿದರು ಎಂದು ತಿಳಿದು ಬಂದಿದೆ.

ತಮಿಳ್ನಾಡಿನಲ್ಲಿ ಪ್ರಯಾಣಕ್ಕೆ ನಿರ್ಬಂಧ ಕಂಡು ಬಂದಿಲ್ಲ ಎಂಬುದಾಗಿ ಚೆಕ್‍ಪೋಸ್ಟ್‌ಗಳಿಂದ ಈ ವಿವರ ಸಿಗುತ್ತಿದೆ. ಕೇರಳದ ತಮಿಳುನಾಡು ಗಡಿ ನೆನ್ಮೇನಿಯಲ್ಲಿ ಕೇರಳದ ಪ್ರಯಾಣಿಕರು ಅಂತಹ ಅಡ್ಡಿಯನ್ನು ಎದುರಿಸುತ್ತಿಲ್ಲ ಎಂಬುದಾಗಿ ವರದಿಯಾಗಿದೆ.