ಕೊರೊನ ರೂಪಾಂತರ ಒಮಿಕ್ರಾನ್ ಹಿನ್ನೆಲೆ: ಆಸ್ಟ್ರೇಲಿಯ ಗಡಿ ಬಂದ್

0
379

ಸನ್ಮಾರ್ಗ ವಾರ್ತೆ

ಸಿಡ್ನಿ: ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಕೊರೋನ ರೂಪಾಂತರ ಒಮಿಕ್ರಾನ್ ನ ಅಪಾಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದಲ್ಲಿ ಗಡಿ ನಿಯಂತ್ರಣವನ್ನು ಇನ್ನೂ ಎರಡು ವಾರಕ್ಕೆ ಅಲ್ಲಿನ ಸರಕಾರ ವಿಸ್ತರಿಸಿದೆ. ಆಸ್ಟ್ರೇಲಿಯದಲ್ಲಿ ಈವರೆಗೆ ಐದು ಒಮಿಕ್ರಾನ್ ಪ್ರಕರಣಗಳು ಕಂಡು ಬಂದಿದ್ದು, ಆದರೂ ಅಲ್ಲಿನ ಸರಕಾರ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ.

ರವಿವಾರ ದಕ್ಷಿಣಾಫ್ರಿಕದಿಂದ ಸಿಡ್ನಿಗೆ ಇಬ್ಬರು ಬಂದಿದ್ದರು. ಇವರಲ್ಲಿ ಮೊದಲು ರೋಗ ಕಂಡು ಬಂತು. ಇಬ್ಬರಿಗೂ ಲಸಿಕೆ ಹಾಕಲಾಗಿತ್ತು. ಸದ್ಯ ಇವರು ಸಿಡ್ನಿಯ ಹೊಟೇಲಿನಲ್ಲಿ ಕೊರೊಂಟೈನ್‍ನಲ್ಲಿದ್ದಾರೆ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ದಕ್ಷಿಣಾಫ್ರಿಕದಿಂದ ಸಿಡ್ನಿಗೆ ಬಂದಿದ್ದ ಇಬ್ಬರು ಮತ್ತು ಜೊಹಾನ್ಸ್ ಬರ್ಗ್‍ನಿಂದ ಆಸ್ಟ್ರೇಲಿಯಕ್ಕೆ ಬಂದ ದಕ್ಷಿಣಾಫ್ರಿಕನ್ ಪ್ರಜೆಯಲ್ಲಿ ಒಮಿಕ್ರಾನ್ ದೃಢವಾಗಿದೆ.