10 ಸಾವಿರ ಮಂದಿಯ ಐಸೋಲೇಷನ್ ಗೆ ತನ್ನ ಕಟ್ಟಡದಲ್ಲಿ ವ್ಯವಸ್ಥೆ ಮಾಡುತ್ತೇವೆ: ಪ್ರಧಾನಿಗೆ ಪತ್ರ ಬರೆದ ಜಮಿಯತೆ ಉಲಮಾಯೆ ಹಿಂದ್

0
9315

ಸನ್ಮಾರ್ಗ ವಾರ್ತೆ

ನವದೆಹಲಿ, ಮಾರ್ಚ್ 30- 10 ಸಾವಿರ ಮಂದಿ ಕೊರೋನಾ ಶಂಕಿತರ ಐಸೋಲೇಷನ್ ಮತ್ತು ಕ್ವಾರಂಟೈನ್ ಗೆ ಬೇಕಾಗುವಷ್ಟು ಸ್ಥಳಾವಕಾಶದ ಕಟ್ಟಡಗಳನ್ನು ತಾನು ಒದಗಿಸುವುದಾಗಿ ಜಮಿಯತೆ ಉಲಮಾಯೆ ಹಿಂದ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ಹೇಳಿದ್ದಾರೆ.

ಈ ಕುರಿತಂತೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡುವಂತೆ ಮತ್ತು ಅಗತ್ಯ ಬಂದಾಗ ತಮ್ಮನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿ ಎಂದು ಅವರು ಪ್ರಧಾನಮಂತ್ರಿಯನ್ನು ಕೋರಿದ್ದಾರೆ.

ಸುಮಾರು ಒಂದು ಕೋಟಿಯಷ್ಟು ಸದಸ್ಯರು, ಹಿತೈಷಿಗಳು ದೇಶದ ಉದ್ದಕ್ಕೂ ಜಮೀಯತೆ ಉಲಮಾಯೆ ಹಿಂದ್ ಗೆ ಇದ್ದು ಸ್ವಯಂಸೇವಕರ ಪರಿಹಾರ ಸಮಿತಿಗಳ ಮೂಲಕ ಅಗತ್ಯವಿರುವ ಜನರಿಗೆ ಪರಿಹಾರ ನೀಡಲು ನಮ್ಮ ಎಲ್ಲಾ ರಾಜ್ಯ ಮತ್ತು ಜಿಲ್ಲಾ ಘಟಕಗಳನ್ನು ಸಕ್ರಿಯಗೊಳಿಸಿದ್ದೇವೆ. ಅವರು ಪೀಡಿತರಿಗೆ ಆಹಾರ ಮತ್ತು ಮೂಲಭೂತ ವಸ್ತುಗಳನ್ನು ವಿತರಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.

ನಗರಗಳಿಂದ ಜನರು ಹಳ್ಳಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವುದರಿಂದ ಅವರ ನೆರವಿಗೆ ನಮ್ಮ ಅಗತ್ಯ ಬೇಕೆಂದಾದರೆ ನಾವು ಸಿದ್ಧರಿದ್ದೇವೆ. ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು ಮತ್ತು ನಮ್ಮ ಕಟ್ಟಡಗಳನ್ನು ಪೀಡಿತರಿಗಾಗಿ ಮೀಸಲಿಡಲು ಸಿದ್ಧರಿದ್ದೇವೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.