ಸನ್ಮಾರ್ಗ ವಾರ್ತೆ
ಲಂಡನ್, ಮಾ. 30: ಬ್ರಿಟನ್ ನಲ್ಲಿ ಕೊರೊನ ಅನಿಯಂತ್ರಿತವಾಗಿ ಹರಡುತ್ತಿದೆ. ಈ ಹಿನ್ನೆಲೆಯನ್ನು ಗಮನಿಸಿದಾಗ ನಿಯಂತ್ರಣವನ್ನು ಮುಂದಿನ ಆರು ತಿಂಗಳವರೆಗೂ ಮುಂದುವರಿಸಬೇಕಾಗಬಹುದು ಎಂದು ಇಂಗ್ಲೆಡಿನ ಆರೋಗ್ಯ ಮುಖ್ಯಸ್ಥೆ ಜೆನ್ನಿ ಹಾರಿಸ್ ತಿಳಿಸಿದರು. ದೇಶದಲ್ಲಿ ಲಾಕ್‍ಡೌನ್ ವಿಸ್ತರಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಿಯಂತ್ರಣ ವೆಲ್ಲವೂ ವೈರಸ್‍ನ ಹರಡುವಿಕೆಯ ವ್ಯಾಪ್ತಿಯ ಹಿನ್ನೆಲೆಯಲ್ಲಾಗಿರುತ್ತದೆ. ಮೂರು ವಾರದ ಬಂದ್‍ನಿಂದ ವೈರಸ್ ನಿಯಂತ್ರಣಕ್ಕೆ ಬಂತೆ ಎಂದು ನೋಡುತೇವೆ. ಇಲ್ಲಿ ನಮ್ಮಿಂದ ಯಶಸ್ಸು ಪಡೆಯಲು ಆಗಿಲ್ಲ ಎಂದಾದರೆ ಲಾಕೌಟೇ ಗತಿ. ಅದನ್ನು ಮುಂದುವರಿಸುತ್ತೇವೆ ಎಂದವರು ಹೇಳಿದ್ದಾರೆ.
ಬಾಗಿಲು ತೆರೆದಿಟ್ಟು ಲಾಕೌಟು ಕೊನೆಗೊಳಿಸಿದರೆ ನಾವು ಇಷ್ಟರ ವರೆಗೆ ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾಗುವುದು. ಆದ್ದರಿಂದ ಲಾಕ್ ಡೌನ್ ಆರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆಯೂ ಇದೆ. ಅಂದರೆ ಸಂಪೂರ್ಣ ಲಾಕ್ ಡೌನ್ ಮಾಡುವುದೆಂದು ಅರ್ಥವಲ್ಲ. ನಿಯಂತ್ರಣ ಹೇರಲಾಗುವುದು ಎಂದು ಅವರು ಹೇಳಿದರು. ಇಂಗ್ಲೆಂಡಿನಲ್ಲಿ 1228 ಮಂದಿ ಕೊರೊನಕ್ಕೆ ಬಲಿಯಾಗಿದ್ದಾರೆ. ಪ್ರಧಾನಿ ಬೊರಿಸ್ ಜಾನ್ಸನ್ ಸಹಿತ 19,522 ಮಂದಿಗೆ ಕೊರೊನಾ ದೃಢಪಟ್ಟಿದೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












