ಸಿರಿಯಾ: ನಾಲ್ಕು ತಿಂಗಳಲ್ಲಿ ಸಾವಿರಾರು ಜನರ ಹತ್ಯೆ

0
572

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಸೆ.6: ಕಳೆದ ನಾಲ್ಕು ತಿಂಗಳಲ್ಲಿ ಸಿರಿಯದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸಾವೀಗೀಡಾಗಿದ್ದು ಇವರಲ್ಲಿ ಹೆಚ್ಚಿನವರು ಹತ್ಯೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗ ಮುಖ್ಯಸ್ಥೆ ಮಿಶಲಿ ಬಾಷ್ಲೆಟ್ ಹೇಳಿದ್ದಾರೆ. ಜನರ ಹತ್ಯೆಯನ್ನು ಅಧ್ಯಕ್ಷ ಬಶರುಲ್ ಅಸದ್‍ರ ಸಖ್ಯ ಸೇನೆ ಮಾಡಿದೆ. ಬುಧವಾರ ಜಿನೀವಾದಲ್ಲಿ ಪತ್ರಕರ್ತರ ಮುಂದೆ ಅವರು ಮಾತಾಡುತ್ತಿದ್ದರು.

ಕಳೆದ ಎಪ್ರಿಲ್ 29ರಿಂದ ಆಗಸ್ಟ್ 29ರವರೆಗೆ 1೦89 ಜನರು ದಕ್ಷಿಣ ಸಿರಿಯಾದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಇವರಲ್ಲಿ 304 ಮಕ್ಕಳೂ ಸೇರಿದ್ದಾರೆ. 1031 ಮಂದಿ ಇದ್‍ಲಿಬ್‌ಹಮ ಪ್ರಾಂತದಲ್ಲಿ ಸರಕಾರಿ ಸೇನೆ, ಸಖ್ಯ ಸೇನೆ ನಡೆಸಿದ ಆಕಾಶ ದಾಳಿಯಿಂದ ಮೃತಪಟ್ಟರು. 58 ಮಂದಿ ಬೇರೆ ವಿಭಾಗಗಳಲ್ಲಿ ಮೃತಪಟ್ಟಿದ್ದಾರೆ. ಸಿರಿಯಾದಲ್ಲಿ ಕೊನೆಯ ಬಂಡುಕೋರ ನೆಲೆಯಾದ ಇದ್‍ಲಿಬ್ ಟರ್ಕಿಯ ಗಡಿ ಪ್ರದೇಶ ಕೂಡ ಆಗಿದೆ.