ಹೊಸದಿಲ್ಲಿ,ಸೆ. 6: ಆರೆಸ್ಸೆಸ್ ಹಿಂದೂರಾಷ್ಟ್ರ ವಾದ ತೊರೆಯುವ ನಿರೀಕ್ಷೆಯನ್ನು ಉತ್ತರಪ್ರದೇಶದ ದಾರುಲ್ ಉಲೂಮ್ ಮುಖ್ಯಸ್ಥ ಅರ್ಷದ್ ಮದನಿ ವ್ಯಕ್ತಪಡಿಸಿದ್ದಾರೆ. ಅರ್ಶದ್ ಮದನಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ರೊಂದಿಗೆ ನಡೆಸಿದ ಚರ್ಚೆಯ ಹಿನ್ನೆಲೆಯಲ್ಲಿ ಆನ್ಲೈನ್ ವೆಬ್ಸೈಟ್ ದಿ ಕ್ವಿಂಟ್ ಅರ್ಶದ್ ಮದನಿಯವರೊಂದಿಗೆ ನಡೆಸಿದ ಸಂದರ್ಶನವನ್ನು ಪ್ರಕಟಿಸಿದೆ.
ನೂರು ವರ್ಷ ಹಳೆಯ ಮುಸ್ಲಿಂ ವಿದ್ವಾಂಸರ ಸಂಘಟನೆ ದಾರುಲ್ ಉಲುಮ್ ದೇವ್ ಬಂದ್ ಆಗಿದೆ. “ದೇಶದ ಮುಸ್ಲಿಂ ಅಲ್ಪಸಂಖ್ಯಾತರು ಸಮಸ್ಯೆ ಜಟಿಲತೆಗಳಿಂದ ಹಾದುಹೋಗುತ್ತಿರುವ ಪರಿಸ್ಥಿತಿಯಲ್ಲಿ ನಡೆದ ಚರ್ಚೆ ಗಮನಾರ್ಹ. ಚರ್ಚೆಯಲ್ಲಿ ಹಿಂದೂರಾಷ್ಟ್ರವಾದಕ್ಕೆ ಸಂಬಂಧಿಸಿ ಭಾಗವತ್ ಏನೂ ಹೇಳಲಿಲ್ಲ ಎಂದು ಮದನಿ ತಿಳಿಸಿದರು. 2015ರಲ್ಲಿ ಆರೆಸ್ಸೆಸ್ ಫ್ಯಾಶಿಸ್ಟ್ ಸಂಘಟನೆ ಮತ್ತು ಅದನ್ನು ನಿಷೇಧಿಸಬೇಕೆಂದು ಮದನಿ ಆಗ್ರಹಿಸಿದ್ದರು. ಮೋದಿ ಸರಕಾರದ ಪ್ರಬಲ ಟೀಕಾಕಾರರೂ ಆಗಿದ್ದಾರೆ. ಆದರೆ ಆರೆಸ್ಸೆಸ್ನೊಂದಿಗೆ ಮೃದುಧೋರಣೆಯೆಡೆಗೆ ಸರಿಯುತ್ತಿರುವ ಸೂಚನೆ ಚರ್ಚೆಯ ಕುರಿತು ಅವರು ನೀಡಿದ ಕೆಲವು ವಿವರಗಳು ವ್ಯಕ್ತಪಡಿಸುತ್ತಿವೆ. ಮುಸ್ಲಿಮರನ್ನು ಆತಂಕಕ್ಕೆ ದೂಡಿಹಾಕಿರುವ ರಾಷ್ಟ್ರೀಯ ಪೌರತ್ವ ಪಟ್ಟಿ ಕುರಿತು ಈ ಚರ್ಚೆಯಲ್ಲಿ ಏನು ಪ್ರಸ್ತಾವವಾಗಿಲ್ಲ ಎಂದು ಮದನಿ ಹೇಳಿದರು.
ಕ್ವಿಂಟ್ನೊಂದಿಗಿನ ಸಂದರ್ಶನದ ಸಂಕ್ಷಿಪ್ತಭಾಗ
?. ಹೇಗೆ ಈ ಚರ್ಚೆ ನಡೆಯಿತು?
ಕೆಲವು ಜನರು ಬಂದು ಈ ವಿಷಯ ಹೇಳುವವರೆಗೆ ಚರ್ಚೆಯ ಕುರಿತು ಏನೂ ಚಿಂತಿಸಿರಲಿಲ್ಲ. ಅವರು ಬಂದು ತಿಳಿಸಿದಾಗ ಅದೊಂದು ಉತ್ತಮ ಆಶಯವಾಗಿ ಅನಿಸಿತು. ಒಂದು ಬಲಶಾಲಿ ಸಂಘಟನೆಯ ಮುಖ್ಯಸ್ಥರೆನ್ನುವ ನೆಲೆಯಲ್ಲಿ ಭಾಗವತ್ರನ್ನು ಭೇಟಿಯಾಗ ಬೇಕಾಗಿದೆ ಎಂದನಿಸಿತು. ಮೋಹನ್ ಭಾಗವತ್ರಂತಹ ಬೇರೊಬ್ಬರು ಭಾರತದಲ್ಲಿಲ್ಲ ಎಂದು ನನ್ನ ಅಭಿಪ್ರಾಯ. ಅವರು ಚರ್ಚಿಸುವುದಕ್ಕೆ ನಿರಾಕರಿಸಿಲ್ಲ. ಮಾತ್ರವಲ್ಲ, ಮುಂದೆಯೂ ಇಂತಹ ಸಂವಾದಗಳು ಮುಂದುವರಿಸುವ ಸೂಚನೆ ನೀಡಿದ್ದಾರೆ.
?. ಹಿಂದೂರಾಷ್ಟ್ರ ಆರೆಸ್ಸಿಸಿನ ಪ್ರಮುಖ ಆಶಯ ಹಲವು ವೇದಿಕೆಯಲ್ಲಿ ಇದನ್ನು ಭಾಗವತ್ ಹೇಳಿದ್ದಾರೆ. ನೀವು ಅದರಲ್ಲಿ ಸಹಮತ ಹೊಂದಿರುವಿರಾ?
ಸಹಮತ ಹೊಂದುವಂತಿಲ್ಲ. ಧಾರ್ಮಿಕ ವಿಷಯದಲ್ಲಿ ಸಂಪೂರ್ಣವಾಗಿ ದೇಶದೊಳಗೆ ಸ್ವಾತಂತ್ರ್ಯವಿರುವ ಪರಿಸ್ಥಿತಿ ಇರಬೇಕು. ಹಿಂದೂರಾಷ್ಟ್ರ ಎಂಬುದನ್ನು ಭಾಗವತ್ ಜೀ ಚರ್ಚೆಯಲ್ಲಿ ಎಲ್ಲಿಯೂ ವ್ಯಕ್ತಪಡಿಸಿಲ್ಲ.
?. ಆರ್ಎಸ್ಎಸ್ ಈ ಅಭಿಪ್ರಾಯ ಕೈಬಿಡುತ್ತದೆ, ನಿರ್ಲಕ್ಷಿಸುತ್ತದೆ ಎಂದು ನೀವು ಭಾವಿಸುತ್ತೀರಾ?
ಹೌದು, ಅದು ಅವರಿಂದ ಸಾಧ್ಯವಿದೆ. ಕಾರಣ, ದೇಶ ಇಡೀ ಪತನದಂಚಿನಲ್ಲಿದೆ. ಆರ್ಥಿಕ ವ್ಯವಸ್ಥೆ ಈಗಾಗಲೇ ಶಿಥಿಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ನಿನ್ನೆ ಚಿಂತನೆ ನಡೆಸಿದ ದಾರಿಯಿಂದ ಬದಲಾಗುವ ಸಾಧ್ಯತೆಯಿದೆ ಎಂದು ಭಾವಿಸುತ್ತೇನೆ.
?. ಆದರೆ, ಹಿಂದೂ ರಾಷ್ಟ್ರ ಎನ್ನುವುದು ಅವರು ಗಟ್ಟಿ ಆಶಯವಲ್ಲವೇ?
ಅಲ್ಲ, ಈ ವಿಷಯ ಮೋಹನ್ ಭಾಗವತ್ರೊಂದಿಗೆ ನಾನು ಮಾತಾಡಿದೆ. ಆರ್ಎಸ್ಎಸ್ನವರು ಮುಸ್ಲಿಮರ ಹಾಗೂ ಜಾತ್ಯತೀತರ ವಿರುದ್ಧ ಬರೆಯುತ್ತಿದ್ದಾರೆ, ಮಾತಾಡುತ್ತಿದ್ದಾರೆ ಈ ವಿಷಯವನ್ನು ಬೆಟ್ಟು ಮಾಡಿ ತೋರಿಸಿದಾಗ ಅಂತಹ ಅಭಿಪ್ರಾಯಗಳಿಗೆ ಆರ್ಎಸ್ಎಸ್ ಜವಾಬ್ದಾರವಲ್ಲ ಎಂದು ಹೇಳಿದರು.
?. ಆರೆಸ್ಸೆಸ್ನೊಂದಿಗೆ ತಮ್ಮ ವಿಮರ್ಶಾತ್ಮಕ ನಿಲುವಿನಲ್ಲಿ ಮೃದುವಾಗಿದ್ದೀರಾ?
ಹೌದು, ಸ್ವಲ್ಪ ಹೆಚ್ಚೇ ಇತ್ತ ಆರ್ಎಸ್ಎಸ್ ಮೃದು ನಿಲುವು ಸ್ವೀಕರಿಸಿದರೆ ಅತ್ತ ಯಾಕೆ ಆಗಬಾರದು.
?. ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆ ವಿಷಯ ಚರ್ಚೆಗೆ ಬಂತಾ?
ಹೌದು, ಆ ವಿಷಯದಲ್ಲಿ ಸರಿಯಾದ ರೀತಿಯಲ್ಲಿ ಚರ್ಚಿಸಿದ್ದೇನೆ. ಆದರೆ ಅದರ ಫಲವಾಗಿ ಏನಾದರೂ ಬದಲಾವಣೆ ಆಗಬಹುದು ಎಂದು ಮುಂಬರುವ ದಿನಗಳಲ್ಲಿ ಗೊತ್ತಾಗುವುದು.
?. ಮುತ್ತಲಾಕ್ ವಿಷಯ ಪ್ರಸ್ತಾಪಿಸಿದ್ದೀರಾ?
ಇಲ್ಲ. ಅದನ್ನು ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು. ಮುತ್ತಲಾಕ್ ಕಾನೂನು ಪರಿಶೀಲಿಸಬೇಕಾಗಿದೆ. ಕೋರ್ಟು ಒಪ್ಪಿದರೆ ನಮ್ಮ ವಕೀಲರು ಅದಕ್ಕಾಗಿ ಕಾನೂನು ಹೋರಾಟ ನಡೆಸುವರು.
?. ರಾಷ್ಟ್ರೀಯ ಪೌರತ್ವ ಪಟ್ಟಿ ಮುಸ್ಲಿಮರ ಮೇಲೆ ದಾಳಿ ನಡೆಸುವ ಉದ್ದೇಶದ್ದೆಂದು ಭಾವಿಸುತ್ತೀರಾ?
ಇದನ್ನು ಸರಕಾರ ಹೇಳಬೇಕು. ಹೊರಗಿನಿಂದ ಬರುವ ಹಿಂದೂಗಳಿಗೆ ಪೌರತ್ವ ಕೊಡುವೆವು, ಮುಸ್ಲಿಮರಿಗೆ ಕೊಡುವುದಿಲ್ಲ ಎಂದು ಹೇಳುತ್ತಿರುವುದು ಸರಕಾರವಾಗಿದೆ.
?. ಭಾಗವತರೊಂದಿಗಿನ ಚರ್ಚೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೀರಾ?
ಇಲ್ಲ, ಅದನ್ನು ಚರ್ಚಿಸಿಲ್ಲ. ದೇಶದಲ್ಲಿ ಹೇಗೆ ಶಾಂತಿ ತರಬಹುದು ಎಂಬ ವಿಷಯದಲ್ಲಿ ಮಾತಾಡಿದ್ದೇನೆ.
?. ನಿಮ್ಮ ಅನುಯಾಯಿಗಳಲ್ಲಿ ಏನು ಹೇಳ ಬಯಸುತ್ತೀರಿ? ಅವರು ಏನು ನಿರೀಕ್ಷಿಸುತ್ತಿದ್ದಾರೆ?.
ಚರ್ಚಿಸಿದ ವಿಷಯವನ್ನು ಸಮುದಾಯಕ್ಕೆ ತಿಳಿಸುವೆ.ಮೋಹನ್ ಭಾಗವತ್ರೂ ಹಾಗೆಯೇ ಮಾಡುತ್ತಾರೆ.












