ಗಿನ್ನೆಸ್ ದಾಖಲೆ: ಸೌದಿಯ ರಿತಾಜ್ ಅಲ್ ಹಾಸ್ಮಿ ವಿಶ್ವದ ಅತಿ ಕಿರಿಯ ಬರಹಗಾರ್ತಿ

0
260

ಸನ್ಮಾರ್ಗ ವಾರ್ತೆ

ವಿಶ್ವದ ಅತಿ ಕಿರಿಯ ಪ್ರಾಯದ ಬರಹಗಾರ್ತಿ ಎಂಬ ಗಿನ್ನೆಸ್ ವಿಶ್ವದಾಖಲೆಗೆ ಸೌದಿಯ 14 ವರ್ಷದ ಪೋರಿ ರಿತಾಜ್ ಅಲ್ ಹಾಸ್ಮಿ ಪಾತ್ರವಾಗಿದ್ದಾಳೆ. ಈಕೆ ತನ್ನ ಆರರ ಹರೆಯದಲ್ಲಿಯೇ ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದಳು. ಇದಕ್ಕಾಗಿ ಆಕೆಯ ಕುಟುಂಬ ಆಕೆಯನ್ನು ಬರಹ ಕಲೆಯ ವಿಶೇಷ ತರಗತಿಗೆ ಸೇರಿಸಿದ್ದರು.

ಈಕೆ 2019ರಲ್ಲೇ ಟ್ರೀಸರ್ ಆಫ್ ದಿ ಲಾಸ್ಟ್ ಸೀ ಮತ್ತು ಪೋರ್ಟಲ್ ಆಫ್ ದ ಹಿಡನ್ ವರ್ಲ್ಡ್ ಎಂಬ ಕಾದಂಬರಿಯನ್ನು ಪ್ರಕಟಸಿದ್ದಾಳೆ. ಆಗ ಈಕೆಯ ವಯಸ್ಸು ಕೇವಲ ಹತ್ತು. 2021ರಲ್ಲಿ ಬಿಯಾಂಡ್ ದಿ ಫ್ಯೂಚರ್ ವರ್ಲ್ಡ್ ಎಂಬ ಮೂರನೇ ಕಾದಂಬರಿಯನ್ನು ಪ್ರಕಟಿಸಿದ್ದಾಳೆ. ಈಕೆ ಈಗಾಗಲೇ ನಾಲ್ಕನೇ ಕಾದಂಬರಿಯನ್ನು ಮುಗಿಸಿದ್ದು ಅದು ಬಿಡುಗಡೆಯ ಹಂತದಲ್ಲಿದೆ.

ನಾನು ಈಗಾಗಲೇ ವೈಜ್ಞಾನಿಕ ಕಥೆಯಾಧಾರಿತ ದ ಡೇ ಬಿಫೋರ್ 2050 ಎಂಬ ಕಾದಂಬರಿಯನ್ನು ಬರೆಯುತ್ತಿದ್ದೇನೆ ಎಂದಾಕೆ ಹೇಳಿದ್ದು ಇದು ಮಾನವರು ಮತ್ತು ಪ್ರಾಣಿಗಳ ಮೇಲೆ ಹವಾಮಾನ ವೈಪರಿತ್ಯದಿಂದ ಆಗುವ ಅಪಾಯಗಳ ಸುತ್ತ ಹೆಣೆದ ಕತೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.