ಬಿಐಇ: ಜುಲೈ 15ರಿಂದ “ಬನ್ನಿ ಇಸ್ಲಾಮೀ ಶಿಕ್ಷಣ ಗಳಿಸೋಣ” ಅಭಿಯಾನ

0
274

ಸನ್ಮಾರ್ಗ ವಾರ್ತೆ

ಬೆಂಗಳೂರು: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ವತಿಯಿಂದ ಜುಲೈ 15 ರಿಂದ 30ರವರೆಗೆ “ಬನ್ನಿ ಇಸ್ಲಾಮೀ ಶಿಕ್ಷಣ ಗಳಿಸೋಣ” ಎಂಬ ಕೇಂದ್ರೀಯ ವಿಷಯದಡಿ ರಾಜ್ಯವ್ಯಾಪಿ ಪರಿಚಯ ಹಾಗೂ ದಾಖಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಅಭಿಯಾನದ ಉದ್ಘಾಟನಾ ಕಾರ್ಯಕ್ರಮವನ್ನು ಜುಲೈ 15ರಂದು ಬೆಂಗಳೂರಿನ ಝೇನಿತ್ ಅಕಾಡೆಮಿ ಸ್ಕೂಲ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದು ಮರ್ಕಝಿ ತಾಲಿಮಿ ಬೋರ್ಡ್ ನಿರ್ದೇಶಕರಾದ ಸಯ್ಯದ್ ತನ್ವೀರ್ ಅಹ್ಮದ್  ಮುಖ್ಯ ಭಾಷಣ ಮಾಡಲಿರುವರು.

ಮುಖ್ಯ ಅತಿಥಿಗಳಾಗಿ ಬಿ.ಐ.ಇ ರಾಜ್ಯ ಕಾರ್ಯಕಾರಣಿ ಸಮಿತಿ
ಸದಸ್ಯ ತಾಹಿರ್ ಹುಸೇನ್, ಝೇನಿತ್ ಅಕಾಡೆಮಿ ನಿರ್ದೇಶಕರಾದ ಇಕ್ಬಾಲ್ ಅಹ್ಮದ್ ಭಾಗವಹಿಸಲಿರುವರು.

ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಸಂಸ್ಥೆಯ ಅಡಿಯಲ್ಲಿ ಐದು ವರ್ಷದ ದೂರಶಿಕ್ಷಣ ಇಸ್ಲಾಮಿಕ್ ಕೋರ್ಸ್‌ನ್ನು ನಡೆಸಲಾಗುತ್ತದೆ, ಅದರಲ್ಲಿ ಪ್ರಥಮ ಎರಡು ವರ್ಷ ಇಸ್ಲಾಮಿಕ್ ಸರ್ಟಿಫಿಕೆಟ್ ಕೋರ್ಸ್ ಮತ್ತು ಮೂರು ವರ್ಷದ ಡಿಪ್ಲೊಮಾ ಇನ್ ಇಸ್ಲಾಮಿಕ್ ಸ್ಟಡೀಸ್‌ನ್ನು ಹಮ್ಮಿಕೊಳ್ಳಲಾಗುತ್ತದೆ. ಹನ್ನೊಂದು ವರ್ಷ ಮೇಲ್ಪಟ್ಟ ಎಲ್ಲರೂ ಈ ಕೋರ್ಸ್‌ನ ಪ್ರಯೋಜನವನ್ನು ಪಡೆಯಬಹುದೆಂದು ಬಿ.ಐ.ಇ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.